ಕಾಣಿಯೂರು- 5ನೇ ವರ್ಷದ ಮುಕ್ತ ಕೆಸರುಗದ್ದೆ ಕ್ರೀಡಾಕೂಟ- ಸನ್ಮಾನ

Puttur_Advt_NewsUnder_1
Puttur_Advt_NewsUnder_1

kaniyoor-kreedakuta-photo_2ಕ್ರೀಡೆ ಆತ್ಮ ವಿಶ್ವಾಸದ ಬದುಕಿಗೆ ಸ್ಪೂರ್ತಿ- ವಸಂತ ನಡುಬೈಲು

ಕಾಣಿಯೂರು: ಮಾನಸಿಕ, ದೈಹಿಕ ಆರೋಗ್ಯ ಸೇರಿದಂತೆ ಮಾನಸಿಕ ಶಾಂತಿ ನೆಲೆಗೊಳ್ಳಲು ಕ್ರೀಡೆ ಒಂದು ಅಸ್ತ್ರವಾಗಿದೆ. ಕ್ರೀಡೆ ಆತ್ಮ ವಿಶ್ವಾಸದ ಬದುಕಿಗೆ ಸ್ಪೂರ್ತಿ ನೀಡುತ್ತದೆ. ಸ್ವಚ್ಚ ಪರಿಸರದ ಕಾಳಜಿ ಮೂಡಿದರೆ ಸ್ವಚ್ಚ ಭಾರತದ ಪರಿಕಲ್ಪನೆ ಸಾಧ್ಯ. ಗ್ರಾಮವನ್ನು ಸ್ವಚ್ಚ ಮಾಡುವುದರ ಮೂಲಕ ಪ್ರಧಾನಿ ಮೋದಿಯವರ ಸ್ವಚ್ಚ ಭಾರತದ ಕನಸು ನನಸಾಗಬಹುದು. ಸಮಾಜದ ಅತೀ ದೊಡ್ಡ ಆಸ್ತಿಯಾದ ಯುವಜನತೆ ದಾರಿ ತಪ್ಪದಂತೆ ಸಂಘಟನೆಗಳು ಎಚ್ಚರವಹಿಸಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಕೇರ್ಪಡ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ವಸಂತ ನಡುಬೈಲುರವರು ಹೇಳಿದರು. ಅವರು ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲದ ಆಶ್ರಯದಲ್ಲಿ ಕಾಣಿಯೂರು ಅಮ್ಮನವರ ದೇವಸ್ಥಾನದ ಎದುರಿನ ಗದ್ದೆಯಲ್ಲಿ ದ ೧೮ರಂದು ನಡೆದ ೫ನೇ ವರ್ಷದ ಮುಕ್ತ ಕೆಸರುಗದ್ದೆ ಕ್ರೀಡಾಕೂಟ – ೨೦೧೬ ಮತ್ತು ಸನ್ಮಾನ ಸಮಾರಂಭದಲ್ಲಿ ಕ್ರೀಡಾಂಗಣವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ಕಲೆ ಮತ್ತು ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಜೀವನವನ್ನು ಬೆಳಗಬೇಕು. ಜೊತೆಗೆ ಮುಂದಿನ ಪೀಳಿಗೆಗೆ ಕಲೆ, ಸಂಸ್ಕೃತಿಯನ್ನು ಹಸ್ತಾಂತರಿಸುವ ಕೆಲಸವಾಗಬೇಕೆಂದ ಅವರು ಈ ನಿಟ್ಟಿನಲ್ಲಿ ಸಮೃದ್ಧ ಭಾರತ ನಿರ್ಮಾಣಕ್ಕಾಗಿ ಯುವಶಕ್ತಿ ಸಂಘಟಿತರಾಗಬೇಕಾಗಿ ಹೇಳಿದರು. ಹಿರಿಯ ಪ್ರಗತಿಪರ ಕೃಷಿಕ ಬೀರಣ್ಣ ಗೌಡ ಕಟ್ಟತ್ತಾರುರವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲದ ಅಧ್ಯಕ್ಷ ದಿನೇಶ್ ಮುಗರಂಜ ಅಧ್ಯಕ್ಷತೆ ವಹಿಸಿದ್ದರು.

ಚಾರ್ವಾಕ ಕ್ಷೇತ್ರದ ತಾ.ಪಂ ಸದಸ್ಯೆ ಲಲಿತಾ ಈಶ್ವರರವರು ಮಾತನಾಡಿ, ಗ್ರಾಮೀಣ ಕ್ರೀಡೆಗಳು ನಶಿಸಿ ಹೋಗುತ್ತಿರುವ ಸಂಧರ್ಭದಲ್ಲಿ ಮತ್ತೆ ನೆನಪಿಸುವ ಕೆಲಸ ಈ ಸಂಘಟನೆಯಿಂದ ಆಗಿದೆ. ಉತ್ತಮ ಸಮಜಮುಖಿ ಕೆಲಸ ಕಾರ್ಯಕ್ರಗಳು ಇನ್ನಷ್ಟು ಈ ಸಂಘಟನೆಯಿಂದ ಮೂಡಿಬರಲಿ ಎಂದು ಶುಭಹಾರೈಸಿದರು.

ಕಾಣಿಯೂರು ಗ್ರಾ.ಪಂ ಸದಸ್ಯರುಗಳಾದ ರಾಮಣ್ಣ ಗೌಡ ಮುಗರಂಜರವರು ಮಾತನಾಡಿ, ಯುವ ಸಂಘಟನೆಗಳು ಕ್ರಿಯಾಶೀಲರಾದಾಗ ಮಾತ್ರ ಸಮಾಜ ಅಭಿವೃದ್ಧಿಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ಸಮಾಜ ಒಗ್ಗೂಡಿಸುವ ಕೆಲಸ ಯುವಕರಿಂದಾಗಬೇಕು. ಭವಿಷ್ಯದ ದೃಷ್ಠಿಯಿಂದ ಯುವಜನತೆ ಸಂಘಟಿತರಾಗಬೇಕಾಗಿದೆ. ಎಲ್ಲಾ ಸಮಾಜದ ಎಲ್ಲಾ ವರ್ಗದ ಜನರು ಭಾಗವಹಿಸುವ ಕ್ರೀಡೆ ಭಾವೈಕ್ಯಕ್ಕೆ ಪೂರಕ. ಎಲ್ಲರನ್ನು ಸಂಚಲನ ಮೂಡಿಸುವ ಕ್ರೀಡೋತ್ಸವ ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿರುವುದು ಶ್ಲಾಘನೀಯ ಎಂದರು. ಕಾಣಿಯೂರು ಗ್ರಾ.ಪಂ ಸದಸ್ಯರುಗಳಾದ ಸುರೇಶ್ ಓಡಬಾಯಿ, ಲಲಿತಾ ತೋಟ, ಕಾಣಿಯೂರು ಕಣ್ವರ್ಷಿ ಮಹಿಳಾ ಮಂಡಲದ ಅಧ್ಯಕ್ಷೆ ಮಮತಾ ಲೋಕೇಶ್ ಅಗಳಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಯುವಕ ಮಂಡಲದ ಸದಸ್ಯರುಗಳಾದ ರಾಜೇಶ್ ಮೀಜೆ, ಪ್ರಶಾಂತ್ ಕೋಳಿಗದ್ದೆ, ನಿತಿನ್ ಮುಗರಂಜ, ಸುಂದರ ಗೌಡ ಕಂಡೂರು, ಪುನಿತ್ ಎಳುವೆ, ಮನೋಜ್ ವೈ, ಕೀರ್ತಿಕುಮಾರ್ ಎಳುವೆ, ರಕ್ಷಿತ್ ಮುಗರಂಜ ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು. ಕಾಣಿಯೂರು ಶಾಲಾ ವಿದ್ಯಾರ್ಥಿನಿ ಭವ್ಯಶ್ರೀ ಅನಿಲ ಪ್ರಾರ್ಥಿಸಿ, ಯುವಕ ಮಂಡಲದ ಕಾರ್ಯದರ್ಶಿ ಜಗದೀಶ್ ಪೆರ್ಲೋಡಿ ಸ್ವಾಗತಿಸಿದರು. ಪುನೀತ್ ಕಲ್ಪಡ ವಂದಿಸಿ, ಪರಮೇಶ್ವರ ಗೌಡ ಅನಿಲ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.