ಕಲ್ಲಾರೆ ರಾಘವೇಂದ್ರ ಮಠದಲ್ಲಿ ಗೀತಾ ಜಯಂತಿ

Puttur_Advt_NewsUnder_1
Puttur_Advt_NewsUnder_1

kallareಪುತ್ತೂರು: ನವ್ಯಶ್ರೀ ಮಹಿಳಾ ಮಂಡಲ ಪುತ್ತೂರು, ಶಿವಳ್ಳಿ ಸಂಪದ ಮಹಿಳಾ ವಿಭಾಗ ಪುತ್ತೂರು, ಲಯನೆಸ್ ಕ್ಲಬ್, ಇನ್ನರ್‌ವೀಲ್ ಕ್ಲಬ್, ಹವ್ಯಕ ಪರಿಷತ್ ಮಹಿಳಾ ವಿಭಾಗ ಪುತ್ತೂರು, ವನಿತಾ ಸಮಾಜ ಹಾರಾಡಿ, ವಿಶ್ವಹಿಂದೂ ಪರಿಷತ್ ಮಹಿಳಾ ವಿಭಾಗ ಪುತ್ತೂರು ಇವರ ಆಶ್ರಯದಲ್ಲಿ16ನೇ ವರ್ಷದ ಗೀತಾ ಜಯಂತಿ ಕಾರ್ಯಕ್ರಮ ಕಲ್ಲಾರೆ ರಾಘವೇಂದ್ರ ಮಠದಲ್ಲಿ ನಡೆಯಿತು.

ಶ್ರೀ ರಾಘವೇಂದ್ರ ಉಡುಪರು ದೀಪ ಬೆಳಗಿಸಿ ಉದ್ಘಾಟಿಸಿ ದರು. ಭಗವದ್ಗೀತೆಯ 18 ಅಧ್ಯಾಯವನ್ನು ಮಹಿಳೆಯರು ಪಠಣ ಮಾಡಿದರು. ಸಮಾರೋಪ ಸಮಾರಂಭದಲ್ಲಿ ರಾಘವೇಂದ್ರ ಮಠದ ಕಾರ್ಯದರ್ಶಿ ಯು. ಪೂವಪ್ಪ ಅಧ್ಯಕ್ಷತೆ ವಹಿಸಿದ್ದರು. ವೇ.ಮೂ. ಶ್ರೀವತ್ಸ ಕೆದಿಲಾಯ ಧಾರ್ಮಿಕ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಹವ್ಯಕ ಪರಿಷತ್ ಅಧ್ಯಕ್ಷೆ ಪಾರ್ವತಿ ಭಟ್ ಉಪಸ್ಥಿತರಿದ್ದರು.

ವಿಜಯ ಪ್ರಾರ್ಥಿಸಿದರು. ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಲಲಿತಾ ಭಟ್ ಸ್ವಾಗತಿಸಿದರು. ಲಯನೆಸ್ ಕ್ಲಬ್ ಕಾರ್ಯದರ್ಶಿ ಜ್ಯೋತಿ ನಾಯಕ್ ವಂದಿಸಿದರು. ನವ್ಯಶ್ರೀ ಮಹಿಳಾ ಮಂಡಲದ ಅಧ್ಯಕ್ಷೆ ಪ್ರೇಮಲತಾ ರಾವ್ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.