ಉಪ್ಪಿನಂಗಡಿಯಲ್ಲಿ ವಿದ್ಯಾರ್ಥಿಗಳ ಮನೆ-ಮನ ಭೇಟಿ

Puttur_Advt_NewsUnder_1
Puttur_Advt_NewsUnder_1

uppinangady2 uppinangady1ಉಪ್ಪಿನಂಗಡಿ: ಮುಂಬರುವ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುವ  ನಿಟ್ಟಿನಲ್ಲಿ ಮಿಷನ್ 95 ಪ್ಲಸ್ ಯೋಜನೆಯಡಿ ಉಪ್ಪಿನಂಗಡಿಯ ರಾಮನಗರ, ನಿನ್ನಿಕಲ್ಲು ಹಾಗೂ ಲಕ್ಷ್ತ್ರ್ಮಿನಗರದ ಪರಿಸರದಲ್ಲಿ ಭಾನುವಾರ ಮುಂಜಾನೆ ‘ಮನೆ-ಮನ’ ಭೇಟಿ ಕಾರ್ಯಕ್ರಮ ನಡೆಯಿತು.

ಕಲಿಕೆಯಲ್ಲಿ ಹಿಂದುಳಿದಿರುವ ಈ ಪರಿಸರದ ಎಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ  ಭೇಟಿ ನೀಡಿದ ತಂಡವು, ಎಸೆಸ್ಸೆಲ್ಸಿಯಲ್ಲಿ  ಉತ್ತಮ ಸಾಧನೆಗಾಗಿ ಸಲಹೆ- ಸೂಚನೆ ನೀಡಿತು. ತಂಡದಲ್ಲಿ ತಾಲೂಕು  ಪಂಚಾಯತ್ ಸದಸ್ಯೆ ಸುಜಾತ ಕೃಷ್ಣಆಚಾರ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ  ಜಿ.ಎಸ್., ಉಪ್ಪಿನಂಗಡಿ ಸರಕಾರಿ ಪದವಿ  ಪೂರ್ವ ಕಾಲೇಜಿನ ಪ್ರೌಢಶಾಲಾ  ವಿಭಾಗದ ಉಪಪ್ರಾಂಶುಪಾಲ  ದಿವಾಕರ  ಆಚಾರ್ಯ, ಉಪ್ಪಳಿಗೆ ಪ್ರೌಢಶಾಲೆಯ ಮುಖ್ಯಗುರು ನಾರಾಯಣ ಕೆ., ಶಿಕ್ಷಣ ಸಂಯೋಜಕ ಉದಯ ಶಂಕರ, ಮಿಷನ್ ೯೫ ಪ್ಲಸ್‌ನ ನೋಡಲ್  ಅಧಿಕಾರಿ ಲೋಕಾನಂದ, ಶಿಕ್ಷಣಾಧಿಕಾರಿಗಳ ಕಚೇರಿ ಸಿಬ್ಬಂದಿ ಯಶವಂತ್, ಚೇತನ್, ತಾ.ಪಂ.  ಮಾಜಿ ಸದಸ್ಯ ಎನ್. ಉಮೇಶ್  ಶೆಣೈ, ಗ್ರಾ.ಪಂ.  ಸದಸ್ಯರಾದ ಗೋಪಾಲ ಹೆಗ್ಡೆ, ಚಂದ್ರಶೇಖರ ಮಡಿವಾಳ, ರಮೇಶ, ಸಹ ಶಿಕ್ಷಕ ಶ್ರೀಧರ ಭಟ್ ಇದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.