Breaking News

ಗ್ರಾ.ಪಂ.ನ ಅವ್ಯವಹಾರ ಬಯಲಿಗೆಳೆದುದಕ್ಕೆ ಸುಳ್ಳು ದೂರು ನೀಡಿ ಕಿರುಕುಳ-ದೂರು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಾಣಿಯೂರು ಗ್ರಾಮ ಪಂಚಾಯತ್ ಪಿಡಿಒ ಅವರ ಕಾನೂನು ಬಾಹಿರ ಅವ್ಯವಹಾರಗಳನ್ನು ಬಯಲಿಗೆಳೆದುದಕ್ಕೆ ತನ್ನ ವಿರುದ್ಧ ಪೊಲೀಸರಿಗೆ ಸುಳ್ಳು ದೂರು ನೀಡಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಕಾಣಿಯೂರು ಮಲೆಕೆರ್ಚಿ ರುಕ್ಮಯ್ಯ ಗೌಡ ಎಂ.ರವರು ಬೆಳ್ಳಾರೆ ಪೊಲೀಸರಿಗೆ ದೂರು ನೀಡಿದ್ದಾರೆ.

ಕಾಣಿಯೂರು ಗ್ರಾಮ ಪಂಚಾಯತ್‌ನ ಅವ್ಯವಹಾರಗಳ ಕುರಿತು ತಾನು ಲೋಕಾಯುಕ್ತಕ್ಕೆ ಮತ್ತು ಇತರ ಅಧಿಕಾರಿಗಳಿಗೆ ದೂರು ನೀಡಿದ್ದು ನ.೧೮ರಂದು ಲೋಕಾಯುಕ್ತ ಅಧಿಕಾರಿಗಳ ತಂಡ ಪಂಚಾಯತ್‌ಗೆ ದಾಳಿ ನಡೆಸಿ ನಾನು ಕೊಟ್ಟ ದೂರಿನ ಮೇಲೆ ಕ್ರಮಕೈಗೊಂಡಿದ್ದರು.ಈ ಕಾರಣದಿಂದ ಪಂಚಾಯತ್‌ನ ಸದಸ್ಯರು ಮತ್ತು ಅಭಿವೃದ್ಧಿ ಅಧಿಕಾರಿಗಳು ನನ್ನ ವಿರುದ್ಧ ವಿನಾಕಾರಣ ಆರೋಪ ಮಾಡಿ ಬೆಳ್ಳಾರೆ ಠಾಣೆಗೆ ದೂರು ನೀಡಿದ್ದಾರೆ.ಈ ಪ್ರಕರಣದಲ್ಲಿ ಧರ್ಮೇಂದ್ರ ಗೌಡ ಕಟ್ಟತ್ತಾರು ಅವರ ಕೈವಾಡವಿದೆಯೆಂದು ಮನವರಿಕೆಯಾಗಿರುತ್ತದೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದು, ಅರಾಜಕತೆ ಉಂಟು ಮಾಡುವ ವ್ಯಕ್ತಿಗಳಿಂದ ತನಗೆ ಮತ್ತು ಹೆಂಡತಿ, ಮಕ್ಕಳಿಗೆ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದ್ದು ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ವಿನಂತಿಸಿದ್ದಾರೆ.

ಬೋರ್ ಕೊಂಡೊಯ್ದರು -ರುಕ್ಮಯ್ಯ ಗೌಡರ ಪತ್ನಿಯಿಂದ ದೂರು: ತಮ್ಮ ಕೊಳವೆಬಾವಿಗೆ ಅಳವಡಿಸಿದ್ದ ಪಂಪನ್ನು ಕಾಣಿಯೂರು ಗ್ರಾಮ ಪಂಚಾಯತ್ ಪಿಡಿಒ, ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಮತ್ತು ಗಣೇಶ್ ಉದ್ದುನಡ್ಕ ಎಂಬವರು ಸೇರಿ ಕೊಂಡುಹೋಗಿರುವುದಾಗಿ ರುಕ್ಮಯ್ಯ ಗೌಡರ ಪತ್ನಿ ವಿಶಾಲಾಕ್ಷಿ ಅವರು ಬೆಳ್ಳಾರೆ ಪೊಲೀಸರಿಗೆ ದ.೧೯ರಂದು ದೂರು ನೀಡಿದ್ದಾರೆ.ಅವ್ಯವಹಾರಗಳ ವಿರುದ್ಧ ದೂರು ನೀಡಿ ಬಯಲಿಗೆಳೆದುದಕ್ಕಾಗಿ ಪಂಚಾಯತ್‌ನಿಂದ ಬಂದ ತಂಡವೊಂದು ಅಕ್ರಮವಾಗಿ ಕೊಳವೆ ಬಾವಿಯ ಪಂಪನ್ನು ಕೊಂಡು ಹೋಗಿದ್ದು ಇದರಿಂದ ನಮಗೆ ಮತ್ತು ಮನೆಯ ಜಾನುವಾರುಗಳಿಗೆ ಕುಡಿಯಲೂ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.ಈ ವಿಚಾರವನ್ನು ತಾನು ಲೋಕಾಯುಕ್ತ ಪೊಲೀಸರ ಗಮನಕ್ಕೂ ತಂದಿರುವುದಾಗಿ ರುಕ್ಮಯ್ಯ ಗೌಡರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.