ನೆಲ್ಯಾಡಿ: ಜಾಗದ ವಿವಾದ, ಪರಸ್ಪರ ಹಲ್ಲೆ ಆರೋಪ- ಗಾಯಾಳುಗಳು ಆಸ್ಪತ್ರೆಗೆ-ಇತ್ತಂಡದ 8 ಮಂದಿ ವಿರುದ್ಧ ಕೇಸು

Puttur_Advt_NewsUnder_1
Puttur_Advt_NewsUnder_1

nelyady

ನೆಲ್ಯಾಡಿ: ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಪರಸ್ಪರ ಹಲ್ಲೆ ಆರೋಪ ಹೊರಿಸಿ ಎರಡೂ ತಂಡದವರು ಒಳರೋಗಿಗಳಾಗಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಪೊಲೀಸರಿಗೆ ದೂರು ನೀಡಿರುವ ಘಟನೆ ನೆಲ್ಯಾಡಿ ಗ್ರಾಮದ ಪಡುಬೆಟ್ಟು ಬೀದಿಮಜಲು ಎಂಬಲ್ಲಿ ನಡೆದಿದೆ. ಪೊಲೀಸರು ಎರಡೂ ತಂಡದವರು ನೀಡಿದ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ನಮಗೆ ಸೇರಿದ ಜಾಗಕ್ಕೆ ಹಾಕಿದ ಬೇಲಿಯನ್ನು ನೆರೆಮನೆಯ ರಾಮಚಂದ್ರ ಶೆಟ್ಟಿ, ಅವರ ತಮ್ಮಂದಿರಾದ ಗಿರೀಶ್ ಶೆಟ್ಟಿ, ರಮೇಶ್ ಶೆಟ್ಟಿ, ಪ್ರಭಾಕರ ಶೆಟ್ಟಿ, ಅಳಿಯ ಸಂದೇಶ ಶೆಟ್ಟಿ ಹಾಗೂ ಗುರುತು ಪರಿಚಯವಿಲ್ಲದ ೧೦ ಜನ ದ.೧೮ರಂದು ಮಧ್ಯಾಹ್ನ ತೆಗೆಯುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ರಾಮಚಂದ್ರ ಶೆಟ್ಟಿ ಹಾಗೂ ಇತರರು ಕಬ್ಬಿಣದ ಸುತ್ತಿಗೆ, ಅಡಿಕೆ ಮರದ ಸಲಾಕೆ ಹಾಗೂ ಕತ್ತಿಯಿಂದ ಹಲ್ಲೆ ನಡೆಸಿದ್ದಾರೆ ಎಂದು ನೆಲ್ಯಾಡಿ ಗ್ರಾಮದ  ಬೀದಿಮಜಲು ನಿವಾಸಿ ಸಂಜೀವ ನಾಯ್ಕ್ ಎಂಬವರ ಪತ್ನಿ ಸುಮಿತ್ರಾ, ಅವರ ಮಗ ಚೇತನ್‌ಕುಮಾರ್, ಮಗಳು ಚರಣ್ಯ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚೇತನ್‌ಕುಮಾರ್‌ರವರು ನೀಡಿರುವ ದೂರಿನ ಮೇರೆಗೆ ಬೀದಿಮಜಲು ನಿವಾಸಿ ರಾಮಚಂದ್ರ ಶೆಟ್ಟಿ, ಗಿರೀಶ್ ಶೆಟ್ಟಿ, ರಮೇಶ್ ಶೆಟ್ಟಿ, ಪ್ರಭಾಕರ ಶೆಟ್ಟಿ, ಸಂದೇಶ್ ಶೆಟ್ಟಿ ಹಾಗೂ ಗುರುತು ಪರಿಚಯವಿಲ್ಲದ ೧೦ ಜನರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ ೧೪೩, ೧೪೭, ೧೪೮, ೪೪೭, ೨೨೩, ೩೨೪, ೫೦೬ ಜೊತೆಗೆ ೧೪೯ ಐಪಿಸಿ ಮತ್ತು ಕಲಂ ೩(೧)(r), ೩(VA)(ಅ) SC/ST PA ACT ೨೦೧೫ರ ಪ್ರಕಾರ ಪ್ರಕರಣ ದಾಖಲಾಗಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವ ನೆಲ್ಯಾಡಿ ಗ್ರಾಮದ ಬೀದಿಮನೆ ನಿವಾಸಿ ರಾಮಚಂದ್ರ ಶೆಟ್ಟಿ(೫೫ವ.)ಎಂಬವರು, ನನ್ನ ಸ್ವಾಧೀನದಲ್ಲಿದ್ದ ಜಾಗಕ್ಕೆ ದ.೧೮ರಂದು ಮಧ್ಯಾಹ್ನ ನೆರೆಮನೆಯ ಸುಮಿತ್ರ, ಅವರ ಮಗ ಚೇತನ್ ಹಾಗೂ ಇತರ ಇಬ್ಬರು ಸೇರಿಕೊಂಡು ಬೇಲಿ ಹಾಕಿ ಗಿಡ ನೆಡುತ್ತಿದ್ದು ಇದನ್ನು ಪ್ರಶ್ನಿಸಿದ್ದಕ್ಕೆ ನಿನ್ನ ಮೇಲೆ ಜಾತಿ ನಿಂದನೆ ಕೇಸು ದಾಖಲಿಸುತ್ತೇನೆ ಎಂದು ಹೇಳಿ ಸುಮಿತ್ರರವರು ತನ್ನ ಕೈಯಲ್ಲಿದ್ದ ಕತ್ತಿಯಿಂದ ಬೆನ್ನಿಗೆ ಹಲ್ಲೆ ನಡೆಸಿದ್ದು, ಇದೇ ವೇಳೆ ಹಿಂದಿನಿಂದ ಯಾರೋ ಸೊಂಟಕ್ಕೆ ಬಲವಾಗಿ ಒದ್ದಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ರಾಮಚಂದ್ರ ಶೆಟ್ಟಿಯವರು ನೀಡಿರುವ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಸುಮಿತ್ರ, ಚೇತನ್,ಗಿರಿಧರ ನಾಯ್ಕ್ ಹಾಗೂ ಇತರೇ ಇಬ್ಬರ ವಿರುದ್ಧ ಕಲಂ ೧೪೩, ೧೪೭, ೧೪೮, ೪೪೭, ೩೨೩, ೩೨೪, ೫೦೬ ಜೊತೆಗೆ ೧೪೯ ಐಪಿಸಿ ಪ್ರಕಾರ ಕೇಸು ದಾಖಲಾಗಿದೆ.

ಎಎಸ್ಪಿ ಭೇಟಿ, ಪರಿಶೀಲನೆ: ಗಾಯಾಳು ಚೇತನ್‌ಕುಮಾರ್‌ರವರು ದಲಿತ ದೌರ್ಜನ್ಯ ಕಾಯ್ದೆಯಡಿ ಆರೋಪಿಗಳ ವಿರುದ್ಧ ದೂರು ದಾಖಲಿಸಿರುವ ಹಿನ್ನೆಲೆಯಲ್ಲಿ ಪುತ್ತೂರು ಎಎಸ್ಪಿ ರಿಷ್ಯಂತ್‌ರವರು ದ.೧೯ರಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.