ಅಪಘಾತದಿಂದ ಗಾಯಗೊಂಡ ಮಂಗಳೂರು ಜಿಲ್ಲಾ ನ್ಯಾಯಾಲಯದ ನಿವೃತ್ತ ಮುಖ್ಯ ಆಡಳಿತಾಧಿಕಾರಿ ನೋರ್ಬರ್ಟ್ ಮಸ್ಕರೇನ್ಹಸ್ ಮೃತ್ಯು

Puttur_Advt_NewsUnder_1
Puttur_Advt_NewsUnder_1

nobertಪುತ್ತೂರು: ದರ್ಬೆ ಶಿವಸಾಗರ್ ಹೋಟೆಲ್ ಬಳಿ ರಿಕ್ಷಾ ಹಾಗೂ ಆಕ್ಟೀವಾ ಮಧ್ಯೆ ಸಂಭವಿಸಿದ ಢಿಕ್ಕಿಯಲ್ಲಿ ಇಲ್ಲಿನ ದರ್ಬೆ ಸಿಟಿಒ ರಸ್ತೆ ಬಳಿಯ ನಿವಾಸಿ, ಮಂಗಳೂರು ಜಿಲ್ಲಾ ನ್ಯಾಯಾಲಯದ ನಿವೃತ್ತ ಮುಖ್ಯ ಆಡಳಿತಾಧಿಕಾರಿಯಾಗಿದ್ದ ನೋರ್ಬರ್ಟ್ ಮಸ್ಕರೇನ್ಹಸ್‌ರವರು ಚಿಕಿತ್ಸೆ ಫಲಕಾರಿಯಾಗದೆ ದ.೧೯ ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಘಟನೆ ಹಿನ್ನೆಲೆ: ಮೃತ ನೋರ್ಬರ್ಟ್ ಮಸ್ಕರೇನ್ಹಸ್‌ರವರು ಶನಿವಾರದಂದು ಸಂಜೆ ಮಾಯಿದೆ ದೇವುಸ್ ಚರ್ಚ್‌ನಲ್ಲಿ ನಡೆದ ಬಲಿಪೂಜೆಯಲ್ಲಿ ಪಾಲ್ಗೊಂಡು ಮನೆ ಕಡೆಗೆ ಹಿಂತಿರುಗುತ್ತಿದ್ದಾಗ ಘಟನೆ ಸಂಭವಿಸಿದೆ. ರಿಕ್ಷಾವೊಂದು ಶಿವಸಾಗರ್ ಹೋಟೆಲ್ ಬಳಿ ನೋರ್ಬರ್ಟ್‌ರವರ ಆಕ್ಟೀವಾಗೆ ಢಿಕ್ಕಿ ಹೊಡೆದು ಪರಾರಿಯಾಗಿದೆ. ಗಂಭೀರ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ನೋರ್ಬರ್ಟ್‌ರವರನ್ನು ಕಲ್ಲಾರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನೋರ್ಬರ್ಟ್‌ರವರು ಮೃತಪಟ್ಟಿದ್ದಾರೆ. ಮೃತ ನೋರ್ಬರ್ಟ್‌ರವರು ಪುತ್ತೂರು ತಾಲೂಕು ಕಚೇರಿಯಲ್ಲಿ ವೃತ್ತಿಯನ್ನು ಆರಂಭಿಸಿ ಶಿವಮೊಗ್ಗ, ಚಿಕ್ಕಮಗಳೂರು, ಬೆಳ್ತಂಗಡಿ, ಮೈಸೂರು, ಸುಳ್ಯದಲ್ಲಿ ಕರ್ತವ್ಯ ನಿರ್ವಹಿಸಿ ಬಳಿಕ ಭಡ್ತಿ ಹೊಂದಿ ಕಾರವಾರ ಜಿಲ್ಲಾ ನ್ಯಾಯಾಲಯದಲ್ಲಿ ಮುಖ್ಯ ಆಡಳಿತಾಧಿಕಾರಿಯಾಗಿ ತದನಂತರ ಮಂಗಳೂರು ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾವಣೆಗೊಂಡು ೧೯೯೩ರಲ್ಲಿ ನಿವೃತ್ತಿ ಹೊಂದಿದ್ದರು. ನೋರ್ಬರ್ಟ್‌ರವರು ಪುತ್ತೂರು ಮಾದೆ ದೇವುಸ್ ಚರ್ಚ್‌ನ ಪಾಲನಾ ಸಮಿತಿಯ ಪ್ರಪ್ರಥಮ ಉಪಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದರು. ಮೃತರು ಪತ್ನಿ ಆಗ್ನೇಸ್ ಡಿ’ಸೋಜ, ಪುತ್ರಿಯರಾದ ನಿರ್ಮಲ, ಅನಿತಾ, ಸುನಿತಾ, ಪುತ್ರ ವಿವೇಕ್, ಅಳಿಯಂದಿರಾದ ಸ್ಟ್ಯಾನಿಸಲಸ್, ಕ್ಲೀಟಸ್, ಸ್ಟೀವರ್ಟ್, ಸೊಸೆ ಮೀನಾರವರನ್ನು ಅಗಲಿದ್ದಾರೆ. ಮೃತರ ಮನೆಗೆ ಮಾದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ವಂ|ಆಲ್ಫ್ರೆಡ್ ಜಾನ್ ಪಿಂಟೋ, ಸಹಾಯಕ ಧರ್ಮಗುರು ವಂ|ಸಂತೋಷ್ ಡಿ’ಸೋಜ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜ್ಯೋ ಡಿ’ಸೋಜ ಸೇರಿದಂತೆ ಹಲವರು ಮೃತರ ಮನೆಗೆ ಭೇಟಿ ನೀಡಿ ಸಾಂತ್ವನ ಸೂಚಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.