ವೀರಮಂಗಲ ಶಾಲಾ ಅಕ್ಷರ ದಾಸೋಹ ಕೊಠಡಿ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಸರಕಾರಿ ಶಾಲೆಗಳು ಉತ್ತಮ ಸ್ಥಿತಿಯಲ್ಲಿವೆ-ಮೀನಾಕ್ಷಿ ಶಾಂತಿಗೋಡು

Puttur_Advt_NewsUnder_1
Puttur_Advt_NewsUnder_1

 

veeramangala* ಕೊಡುಗೆ ನೀಡಿದವರಿಗೆ, ರಾಜ್ಯ ಮಟ್ಟದ ಪ್ರತಿಭೆಗಳಿಗೆ ಸನ್ಮಾನ

* ನವೋದಯಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಭಿನಂದನೆ

* ಹಸ್ತ ಪ್ರತಿ ಹಣತೆ ಬಿಡುಗಡೆ

ಪುತ್ತೂರು: ವೀರಮಂಗಲ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಅಕ್ಷರ ದಾಸೋಹ ಕೊಠಡಿ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ದ.17ರಂದು ನಡೆಯಿತು.

ಅಕ್ಷರ ದಾಸೋಹ ಕೊಠಡಿಯನ್ನು ಉದ್ಘಾಟಿಸಿದ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು ಮಾತನಾಡಿ, ಸರಕಾರಿ ಶಾಲೆಗಳಲ್ಲಿ ಇಂದು ಶಿಕ್ಷಣಕ್ಕೆ ಪೂರಕವಾದ ಎಲ್ಲಾ ಸೌಲಭ್ಯಗಳು ಇವೆ. ಇಲ್ಲಿ ಉತ್ತಮ ಶಿಕ್ಷಣ ದೊರೆಯುತ್ತಿದೆ. ಮಕ್ಕಳ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಒತ್ತನ್ನು ಸರಕಾರ ನೀಡುತ್ತಿದೆ. ಹೆತ್ತವರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸುವ ಮೂಲಕ ಶಾಲೆಗಳ ಉಳಿವಿಗೆ ಸಹಕರಿಸಬೇಕು ಎಂದು ಹೇಳಿದರು.

ಸಭಾ ಕಾರ್ಯಕ್ರಮವನ್ನು ಶಾಲಾ ನಾಯಕ ರಂಜಿತ್ ಕೆ. ದೀಪ ಬೆಳಗಿಸಿ ಉದ್ಘಾಟಿಸಿದರು.

ಸನ್ಮಾನ: ವೀರಮಂಗಲ ಶಾಲೆಗೆ ಚೆಯರ್ ಕೊಡುಗೆ ನೀಡಿದ ಪುತ್ತೂರು ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ರಫೀಕ್ ಎಂ.ಜಿ., ಶಾಲೆಗೆ ಸಹಕಾರ ನೀಡುತ್ತಿರುವ ಸ್ಥಳೀಯ ಉದ್ಯಮಿ ಜನಾರ್ದನ ಗೌಡ ವೀರಮಂಗಲ ಹಾಗೂ ಯೋಗಾಸನದಲ್ಲಿ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ವಿಜೇತ, ವೀರಮಂಗಲ ಶಾಲಾ ವಿದ್ಯಾರ್ಥಿಗಳಾದ ಶಿಲ್ಪ ಮತ್ತು ಲಿಖಿತ್ ಪಿ.ರವರನ್ನು ಸನ್ಮಾನಿಸಲಾಯಿತು. ಅಲ್ಲದೆ ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವೀರಮಂಗಲ ಹಿ.ಪ್ರಾ.ಶಾಲಾ ಹಳೆ ವಿದ್ಯಾರ್ಥಿಗಳನ್ನು ಹಾಗೂ ಅಕ್ಷರ ದಾಸೋಹ ಕೊಠಡಿಯನ್ನು ನಿರ್ಮಿಸಿಕೊಟ್ಟ ಗುತ್ತಿಗೆದಾರ ವೇದನಾಥ ಸುವರ್ಣ ನರಿಮೊಗರು ಇವರನ್ನು ಗೌರವಿಸಲಾಯಿತು. ಸಹ ಶಿಕ್ಷಕಿ ಶೋಭಾ ಸನ್ಮಾನಿತರನ್ನು ಪರಿಚಯಿಸಿದರು.

ನವೋದಯ ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಾದ ದೀಕ್ಷಾ ವಿ.ಕೆ, ರಮ್ಯಶ್ರೀ ಕೆ., ಕೌಶಿಕ್ ಮತ್ತು ಸುಕನ್ಯಾರವನ್ನು ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

ಹಣತೆ ಬಿಡುಗಡೆ: ಮಕ್ಕಳ ಹಸ್ತಪತ್ರ ’ಹಣತೆ’ವನ್ನು ಸವಣೂರು ವಲಯ ಶಿಕ್ಷಣ ಸಂಯೋಜಕ ಕುಕ್ಕ ಎಂ. ಬಿಡುಗಡೆಗೊಳಿಸಿದರು.

ಮುಖ್ಯ ಅತಿಥಿಯಾಗಿದ್ದ ತಾ.ಪಂ.ಅಧ್ಯಕ್ಷೆ ಭವಾನಿ ಚಿದಾನಂದ, ಸಂಪ್ಯ ಅಕ್ಷಯ ಗ್ರೂಪ್ ಮ್ಹಾಲಕ ಜಯಂತ ನಡುಬೈಲು, ಪುತ್ತೂರು ಠಾಣೆ ಪೊಲೀಸ್ ಕಾನ್ಸ್‌ಟೇಬಲ್ ಹರೀಶ್ ಪಿ., ವೀರಮಂಗಲ ಮದರಸದ ಅಧ್ಯಾಪಕ ಎಂ. ಹನೀಫ್ ದಾರಿಮಿ ಅವರು ಸಂದರ್ಭೋಚಿತವಾಗಿ ಮಾತನಾಡಿದರು.

ನರಿಮೊಗರು ಗ್ರಾ.ಪಂ. ಅಧ್ಯಕ್ಷೆ ಚಂದ್ರಕಲಾ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಿ.ಪಂ. ಸದಸ್ಯೆ ಪ್ರಮೀಳಾ ಜನಾರ್ದನ, ನರಿಮೊಗರು ಗ್ರಾ.ಪಂ.ಸದಸ್ಯರಾದ ಬಾಬು ಶೆಟ್ಟಿ, ಶಾರದಾ, ಧರ್ಣಪ್ಪ ಪೂಜಾರಿ, ಸುಂದರಿ ಗಾಣಂತಿ, ಲೆಕ್ಕ ಪರಿಶೀಲನಾಧಿಕಾರಿ ಅರವಿಂದ ಕೃಷ್ಣ, ನರಿಮೊಗರು ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ದೇವಪ್ಪ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರ್ಷ ಗುತ್ತು ಉಪಸ್ಥಿತರಿದ್ದರು. ತಾಪಂ ಸದಸ್ಯ ಪರಮೇಶ್ವರ ಭಂಡಾರಿ ಕಾರ್ಯಕ್ರಮದ ಮೊದಲು ಭೇಟಿ ನೀಡಿದರು.

ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಎಸ್‌ಡಿಎಂಸಿ ಅಧ್ಯಕ್ಷೆ ಕುಸುಮಾ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಚಂದ್ರಿಕಾ, ಕಾರ್ತಿಕ್ ಹೆಚ್, ಜಯಶ್ರೀ, ಜೀವನ್, ಕುಶನ್, ಅಶ್ವಿನ್, ಪ್ರಜ್ವಲ್, ಲಾವಣ್ಯ, ಕೃತಿಕಾ, ಭವ್ಯ, ಸಿಂಚನ, ಸಫಿಬಾರವರು ಅತಿಗಳನ್ನು ಗುಲಾಬಿ ನೀಡಿ ಸ್ವಾಗತಿಸಿದರು. ಪುತ್ತೂರು ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸುರೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯೋಪಾಧ್ಯಾಯಿನಿ ಭವಾನಿ ಎಂ. ವರದಿ ವಾಚಿಸಿದರು. ಶಿಕ್ಷಕಿ ಹರಿಣಾಕ್ಷಿ ವಂದಿಸಿದರು. ವಸಂತ ವೀರಮಂಗಲ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ವೃಂದ, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು, ಎಸ್‌ಡಿಎಂಸಿ ಸದಸ್ಯರು, ಮಕ್ಕಳ ಹೆತ್ತವರು, ಗ್ರಾಮಸ್ಥರು ಸಹಕರಿಸಿದರು.

ಗುಲಾಬಿ ನೀಡಿ ಸ್ವಾಗತ, ಹೂವಿನ ಗಿಡ ನೀಡಿ ಬೀಳ್ಕೊಡುಗೆ

ಕಾರ್ಯಕ್ರಮಕ್ಕೆ ಆಹ್ವಾನಿಸಲಾದ ಮುಖ್ಯ ಅತಿಥಿಗಳನ್ನು ಪ್ರಾರಂಭದಲ್ಲಿ ಶಾಲಾ ವಿದ್ಯಾರ್ಥಿಗಳು ಗುಲಾಬಿ ಹೂ ನೀಡಿ ಸ್ವಾಗತಿಸಿದರೆ ಕಾರ‍್ಯಕ್ರಮದ ಕೊನೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಮುಖ್ಯೋಪಾಧ್ಯಾಯಿನಿಯವರು ಹೂವಿನ ಗಿಡ ನೀಡಿ ಬೀಳ್ಕೊಟ್ಟದ್ದು ವಿಶೇಷವಾಗಿತ್ತು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.