Breaking News

ಕಲ್ಲಾರೆ: ಹೈಟೆಕ್ ಇಲೆಕ್ಟ್ರಿಕಲ್ಸ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

kallare

ಪುತ್ತೂರು: ಕಲ್ಲಾರೆಯ ಬಾಳಿಯೂರು ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ಇಲೆಕ್ಟ್ರಿಕಲ್ ಉತ್ಪನ್ನಗಳ ಸಂಸ್ಥೆ ಹೈಟೆಕ್ ಇಲೆಕ್ಟ್ರಿಕಲ್ಸ್’ ಸೋಮವಾರ ಶುಭಾರಂಭಗೊಂಡಿತು. ಹೊಸ ಉದ್ಯಮವನ್ನು ಪುತ್ತೂರು ಕೇಂದ್ರ ಜುಮ್ಮಾ ಮಸೀದಿಯ ಗುರುಗಳಾದ ಅಸ್ಸಯದ್ ಪೋಕೋಯ ತಂಙಳ್ ಉದ್ಘಾಟಿಸಿ ಸಂಸ್ಥೆ ಯಶಸ್ವಿಯಾಗಿ ಬೆಳೆದು ಉತ್ತಮ ಸೇವೆ ನೀಡಲಿ ಎಂದು ಶುಭಹಾರೈಸಿದರು. ಮುಖ್ಯ ಅತಿಥಿಯಾಗಿ ಅಸ್ಸಯ್ಯದ್ ಹಾಶೀಂ ಬಾಅಲವಿ ಬಾಖಾವಿ ತಂಙಳ್ ಕೊರಿಂಗಿಲ, ಎಸ್ ಬಿ ದಾರಿಮಿ ಜುಮ್ಮಾ ಮಸೀದಿ ಪುತ್ತೂರು,  ಅಯಾಬ್ ವಹಬಿ ಕೊರಿಂಗಿಲ, ಜಲೀಲ್ ಸಖಾಫಿ ಆಗಮಿಸಿ ಪ್ರಾರ್ಥನೆ ಸಲ್ಲಿಸಿ ಶುಭಾಶೀರ್ವದಿಸಿದರು.

ಅಬ್ದುಲ್ಲಾ ನೆಕ್ಕರೆ, ಮಹಮ್ಮದ್ ಹಾಜಿ ಶಾಲಾಬಳಿ, ಅಬ್ಬಾಸ್ ಶಾಲಾಬಳಿ, ಕಾಸೀಂ ಕೇಕಾನಾಜೆ, ಯೂಸುಫ್ ಅರಿಯಡ್ಕ ಉಪಸ್ಥಿತರಿದ್ದರು. ಸಂಸ್ಥೆಯಲ್ಲಿ ವಿವಿಧ ಪ್ರಖ್ಯಾತ ಕಂಪೆನಿಗಳಾದ ಕ್ರಾಂಪ್ಟನ್ ಗ್ರೀವ್ಸ್, ಲಿವನ್, ಲಿಶಾ, ಜಿಯಮ್, ಬಜಾಜ್, ಫಿನೊಲೆಕ್ಷ್, ಹೆವೆಲ್ಸ್, ವಿ ಗಾರ್ಡ, ಆಂಕರ್, ರೋಮಾ ಇನ್ನಿತರ ಕಂಪೆನಿಗಳ ಇಲೆಕ್ಟ್ರಿಕಲ್ ಉತ್ಪನ್ನಗಳು, ಗೃಹಪಯೋಗಿ ವಸ್ತುಗಳು, ಲೈಟ್ಸ್ ಲಭ್ಯವಿದೆ ಎಂದು ಮಾಲಕರಾದ ನೌಫಲ್ ಬೆಟ್ಟಂಪಾಡಿ, ಮತ್ತು ಮೂಸಾ ಮದನಿ ಇರ್ದೆ (ಅಬುಧಾಬಿ) ತಿಳಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.