Breaking News

ಮಂಗಲಗೋಯಾತ್ರೆ ಮಹಾಮಂಗಲ – ಪೂರ್ವ ಸಿದ್ಧತಾ ಸಭೆ

Puttur_Advt_NewsUnder_1
Puttur_Advt_NewsUnder_1

mangala-go mangala-go1

* ದೇಶಕ್ಕಾಗಿ ಸಮಾಜಕ್ಕಾಗಿ ಹೋರಾಟ – ಡಾ.ಪ್ರಭಾಕರ್ ಭಟ್ ಕಲ್ಲಡ್ಕ

* ಗೋವಿನ ಅಸ್ತಿತ್ವದಿಂದ ಹಿಂದೂ ಸಮಾಜದ ಉದ್ಧಾರ – ರಾಜಶೇಖರಾನಂದ ಸ್ವಾಮೀಜಿ

* ಮನೆ ಮನೆಗಳ ಮನಗಳಲ್ಲಿ ಪರಿವರ್ತನೆ ಆಗಬೇಕು – ರಾಮಚಂದ್ರ ಸ್ವಾಮೀಜಿ

* ಪುತ್ತೂರು ಜಿಲ್ಲೆಯಿಂದ ೮೦ಸಾವಿರ ಸಂಖ್ಯೆ –  ರಾಜಾರಾಮ ಶೆಟ್ಟಿ

ಪುತ್ತೂರು: ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ದಿವ್ಯ ಸಂಕಲ್ಪದಲ್ಲಿ ಮಂಗಳೂರಿನ ಮಂಗಲ ಭೂಮಿ ಕುಳೂರಿನಲ್ಲಿ ಜ.೨೭,೨೮ ಮತ್ತು ೨೯ರಂದು ನಡೆಯಲಿರುವ ಗೋಯಾತ್ರಾ-ಮಹಾಮಂಗಲ ಸಪ್ತರಾಜ್ಯದ ಮಂಗಲಗೋಯಾತ್ರೆಯ ಮಹಾಮಂಗಲ ಸಮಾರಂಭದ ಪೂರ್ವ ಸಿದ್ಧತಾ ಸಭೆಯು ದ.೧೯ರಂದು ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

ಉತ್ತಮ ಔಷಧೀಯ ಗುಣಗಳುಳ್ಳ ದೇಸೀ ಗೋತಳಿಯನ್ನು ಸಂರಕ್ಷಿಸುವ ಸಲುವಾಗಿ ರಾಘವೇಶ್ವರ ಶ್ರೀಗಳು ಹಮ್ಮಿಕೊಂಡ ಮಂಗಲ ಗೋಯಾತ್ರೆಯನ್ನು ಯಶಸ್ವಿಗೊಳಿಸುವುದು ಹೊಣೆಯಾಗಿದ್ದು ಒಗ್ಗಟ್ಟಿನಿಂದ ಮುನ್ನಡೆಯೋಣ ಎಂದು ಸಭೆಯಲ್ಲಿ ನಿರ್ಣಯಿಸಿ, ಕಾರ್ಯಕ್ರಮದ ಕುರಿತು ವಿವಿಧ ಸಮಿತಿಗಳಿಂದ ವರದಿ ಪಡೆಯಲಾಯಿತು. ಜ.೨೭ಕ್ಕೆ ನಡೆಯುವ ವಿಚಾರ ಸಂಕೀರ್ಣಕ್ಕೆ ಪುತ್ತೂರಿನಿಂದ ನಿತ್ಯ ಭಾಗವಹಿಸುವಂತೆ ವಿನಂತಿಸಲಾಯಿತು.

ದೇಶಕ್ಕಾಗಿ, ಸಮಾಜಕ್ಕಾಗಿ ಹೋರಾಟ: ಡಾ. ಪ್ರಭಾಕರ್ ಭಟ್ ಕಲ್ಲಡ್ಕರವರು ಮಾತನಾಡಿ ದೇಶ ಒಡೆದವರಿಗೆ ಸ್ವಾತಂತ್ರ್ಯ ಸಿಕ್ಕಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರಿಗೆ ಸರಿಯಾದ ಸ್ವಾತಂತ್ರ್ಯ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ನಾವು ಗೋವಿನ ರಕ್ಷಣೆ ಮೂಲಕ ದೇಶಕ್ಕಾಗಿ ಮತ್ತು ಸಮಾಜಕ್ಕಾಗಿ ಹೋರಾಟದ ಮೂಲಕ ಅಭಿಯಾನ ಮಾಡಬೇಕಾಗಿದೆ ಎಂದು ಹೇಳಿದರು. ನಮ್ಮ ಹೋರಾಟ ಕೇವಲ ಗೋವಿನ ಪ್ರಶ್ನೆಯಲ್ಲ. ಹಿಂದೂ ಸಮಾಜದ ಪ್ರಶ್ನೆಯಾಗಿದೆ ಎಂದರು.

ಗೋವಿನ ಅಸ್ತಿತ್ವದಿಂದ ಹಿಂದೂ ಸಮಾಜದ ಉದ್ಧಾರ:

ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿ ಧರ್ಮ ಕಾರ್ಯ ಮತ್ತು ಗೋವನ್ನು ಉಳಿಸುವ ಮೂಲಕ  ಸಮಾಜದಲ್ಲಿ ಜಾಗೃತಿ ಉಂಟಾಗಬೇಕು. ಗೋವಿನ ಅಸ್ತಿತ್ವ ಇರುವುದೇ ಹಿಂದೂ ಸಮಾಜದ ಉದ್ಧಾರದಲ್ಲಿ. ಈ ನಿಟ್ಟಿನಲ್ಲಿ ಗೋವಿನ ಜೊತೆ ಜೊತೆ ಹಿಂದೂ ಸಮಾಜವನ್ನು ಬೆಳೆಸಬೇಕು ಎಂದು ಹೇಳಿದರು.

ಮನೆ ಮನೆಗಳ ಮನಗಳಲ್ಲಿ ಪರಿವರ್ತನೆ ಆಗಬೇಕು:

ಉತ್ತರ ಕಾಶಿ ಕಪಿಲಾಶ್ರಮ ಮಠದ ರಾಮಚಂದ್ರ ಸ್ವಾಮೀಜಿಯವರು ಆಶೀರ್ವಚನ ನೀಡಿ ಗೋವಿನ ಹತ್ಯೆಂiiನ್ನು ನಿಷೇಧಿಸಬೇಕೆಂದು ಸಂವಿಧಾನ ಬರೆದ ಡಾ.ಬಿ.ಆರ್ ಅಂಬೇಡ್ಕರ್‌ರವರು ೪೮ರ ಅಧ್ಯಾಯದಲ್ಲಿ ಉಲ್ಲೇಖವಿದೆ. ಇಂತಹ ಸಂದರ್ಭದಲ್ಲಿ ನಾವು ಮನೆ ಮನೆ ಭೇಟಿ ಮೂಲಕ ಜನರ ಮನಗಳಲ್ಲಿ ಗೋವಿನ ಕುರಿತು ಜಾಗೃತಿ ಮೂಡುವಂತಾಗಬೇಕು ಎಂದು ಹೇಳಿದರು.

ಪುತ್ತೂರು ಜಿಲ್ಲೆಯಿಂದ ೮೦ಸಾವಿರ ಸಂಖ್ಯೆ : ಗೋ ಯಾತ್ರಾ ಸಮಿತಿ ಸಂಚಾಲಕ ಕೋಲ್ಪೆ ಗುತ್ತು ರಾಜಾರಾಮ ಶೆಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ಗೋ ಮಹಾಮಂಗಲ ಕಾರ್ಯಕ್ರಮಕ್ಕೆ ಪುತ್ತೂರು, ಸುಳ್ಯ, ಬೆಳ್ತಂಗಡಿಯಿಂದ ಒಟ್ಟು ೮೦ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಒಟ್ಟು ೨ ಲಕ್ಷ ಮಂದಿ ಸೇರಲಿದ್ದಾರೆ. ೧,೫೦೦ ಮಂದಿ ಸಂತರ ಸಂಪರ್ಕ ಮಾಡಲಾಗಿದ್ದು ೫೦೦ ಮಂದಿ ಸಂಪರ್ಕದಲ್ಲಿದ್ದಾರೆ. ಅಂತೂ ೨ಸಾವಿರ ಮಂದಿ ಸಂತರು ಸಭಾ ವೇದಿಕೆಯಲ್ಲಿ ಭಾಗವಹಿಸಲಿದ್ದಾರೆ. ಒಟ್ಟು ೧೨ ಎಕ್ರೆಯ ಸಭಾಂಗಣ ನಿರ್ಮಾಣವಾಗಲಿದೆ ಎಂದು ಹೇಳಿದರು. ವೇದಿಕೆಯಲ್ಲಿ ಮಂಗಲ ಗೋ ಮಹಾಮಂಗಲ ಕಾರ್ಯಕ್ರಮದ ಪುತ್ತೂರು ಸಮಿತಿಯ ಹರಿಪ್ರಸಾದ್, ಧರ್ಮಜಾಗೃತಿ ಅಭಿಯಾನದ ಪದ್ಮನಾಭ ಶೆಟ್ಟಿ, ಗೋ ಮಂಗಲೋತ್ಸವದ ಪುತ್ತೂರು ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಉಪಸ್ಥಿತರಿದ್ದರು. ನ್ಯಾಯವಾದಿ ಜಯಾನಂದ ಸ್ವಾಗತಿಸಿ, ವಂದಿಸಿದರು.

ಮಹಾಮಂಗಲದ ಪುತ್ತೂರು ಸಮಿತಿ ರಚನೆ

ಮಹಾಮಂಗಲದ ಪುತ್ತೂರು ಸಮಿತಿ ಗೌರವಾಧ್ಯಕ್ಷ ಉರಿಮಜಲು ರಾಮ ಭಟ್, ಕಾರ್ಯಾಧ್ಯಕ್ಷ ಪದ್ಮನಾಭ ಶೆಟ್ಟಿ, ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಪ್ರಧಾನ ಕಾರ್ಯದರ್ಶಿಯಾಗಿ ಜಯಾನಂದ, ಉಪಾಧ್ಯಕ್ಷರಾಗಿ ರಾಮದ್‌ದಾಸ್ ಹಾರಾಡಿ, ಶಶಿಧರ್, ಮುರಳಿಕೃಷ್ಣ ಹಸಂತಡ್ಕ, ಶರತ್, ಜಯಂತ್ ನಡುಬೈಲು, ವಿಶ್ವಾಸ್ ಶೆಣೈ, ಗೋಪಾಲಕೃಷ್ಣ ಹೇರಳೆ, ಶಿವರಂಜನ್, ಕಾರ್ಯದರ್ಶಿಗಳಾಗಿ ಕೃಷ್ಣಪ್ರಸಾದ್ ಬೆಟ್ಟ, ಕಿರಣ್ ಬಲ್ನಾಡು, ಅನಿಲ್ ಕುಮಾರ್, ಕೃಷ್ಣಪ್ರಸಾದ್ ಶೆಟ್ಟಿ, ಸಂಘಟನಕಾರ್ಯದರ್ಶಿ ಹೇರಂಭ ಶಾಸ್ತ್ರಿ, ಅಕ್ಷತೆ ಅಭಿಯಾನಕ್ಕೆ ಹರಿಣಿ ಪುತ್ತೂರಾಯ ಮತ್ತು ವಿದ್ಯಾಗೌರಿ, ಗೌರವ ಸಲಹೆಗಾರರಾಗಿ ಕೃಷ್ಣ ನಾರಾಯಣ ಮುಳಿಯ, ಚನಿಲ ತಿಮ್ಮಪ್ಪ ಶೆಟ್ಟಿ, ಕಾರ್ಯಾಲಯ ಪ್ರಮುಖರಾಗಿ ಮುಕುಂದ ಶರ್ಮ, ಪುಳು ಈಶ್ವರ ಭಟ್, ಜೀವಂಧರ್ ಜೈನ್‌ರವರನ್ನು ಆಯ್ಕೆ ಮಾಡಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.