Breaking News

ಪೆರಾಬೆ ಗ್ರಾ.ಪಂ.ಮಕ್ಕಳ ಗ್ರಾಮಸಭೆ

Puttur_Advt_NewsUnder_1
Puttur_Advt_NewsUnder_1

perabe1 perabe2ಪೆರಾಬೆ: ಪೆರಾಬೆ ಗ್ರಾ.ಪಂ.ನ ಮಕ್ಕಳ ಗ್ರಾಮಸಭೆ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.

ಕುಂತೂರು ಸ.ಹಿ.ಪ್ರಾ. ಶಾಲೆಯ ಶಿವಾನಂದ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ಆಲಂಕಾರು ವಲಯ ಸಿಆರ್‌ಪಿ ಪ್ರದೀಪ್‌ರವರು ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳಿಗೆ ಏನೇ ಸಮಸ್ಯೆಯಾದರೂ ಮಕ್ಕಳ ಸಹಾಯವಾಣಿ ಸಂಖ್ಯೆ 1098ಕ್ಕೆ ಕರೆಮಾಡಿ ತಿಳಿಸಬಹುದು ಎಂದರು. ನಂತರ ವಿದ್ಯಾರ್ಥಿಗಳು ವಿವಿಧ ಬೇಡಿಕೆಗಳನ್ನು ಸಭೆಯಲ್ಲಿ ಪ್ರಸ್ತಾಪಿಸಿದರು. ವಿದ್ಯಾರ್ಥಿಗಳ ಬೇಡಿಕೆಗಳನ್ನು ಸಂಬಂಧಿಸಿದ ಇಲಾಖೆಗಳಿಗೆ ತಿಳಿಸಲು ಹಾಗೂ ಗ್ರಾ.ಪಂ. ವತಿಯಿಂದ ಆಗುವಂತಹ ಕೆಲಸಗಳನ್ನು ಗ್ರಾ.ಪಂ.ನಿಂದ ಕೈಗೊಳ್ಳಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಜಿ.ಪಂ. ಸದಸ್ಯೆ ಆಶಾ ತಿಮ್ಮಪ್ಪ ಗೌಡರವರು ಪ್ಲಾಸ್ಟಿಕ್ ನಿಷೇಧ, ಪ್ಲಾಸ್ಟಿಕ್‌ನಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು. ಯಾವುದೇ ವಸ್ತುವನ್ನು ಪಡೆದುಕೊಂಡರೂ ಆ ವಸ್ತು ನಮ್ಮದು ಎಂಬ ಭಾವನೆ ಮಕ್ಕಳಲ್ಲಿ ಬರಬೇಕು, ಪ್ಲಾಸ್ಟಿಕ್ ನಿಷೇಧ ಮಾಡುವ ಬಗ್ಗೆ ಪ್ರತಿಜ್ಞೆ ಮಾಡೋಣಎಂದರು.  ಗ್ರಾ.ಪಂ. ಅಧ್ಯಕ್ಷೆ ಬೇಬಿ ಸಿ ಪಾಟಾಳಿಯವರು  ಮಾತನಾಡಿ ಲಿಂಗ ತಾರತಮ್ಯ, ಪ್ಲಾಸ್ಟಿಕ್ ನಿಷೇಧ, ಶುಚಿತ್ವದ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಜನ ಶಿಕ್ಷಣ ಟ್ರಸ್ಟ್‌ನ ಸಂಯೋಜಕ ಶೀನ ಶೆಟ್ಟಿಯವರು ಪ್ಲಾಸ್ಟಿಕ್, ಸ್ವಚ್ಛತೆ ಬಗ್ಗೆ ವಿವಿಧ ಘೋಷಣೆಗಳನ್ನು ಮಕ್ಕಳಿಗೆ ತಿಳಿಸಿ, ಪೆರಾಬೆ ಗ್ರಾ.ಪಂ.ನ್ನು ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನಾಗಿ ಮಾಡುವ ಕುರಿತು ಮಕ್ಕಳಲ್ಲಿ ಹಾಗೂ ಸಭೆಯಲ್ಲಿ ಹಾಜರಿದ್ದ ಸದಸ್ಯರಲ್ಲಿ ಪ್ರತಿಜ್ಞೆ ಮಾಡಿಸಿದರು. ಕೃಷ್ಣ ಮೂಲ್ಯ ಮಾಹಿತಿ ನೀಡಿದರು. ಘನ,ದ್ರವ ತ್ಯಾಜ್ಯದ ಬಗ್ಗೆ ಇರುವ ಡಿವಿಡಿಯನ್ನು ಈ ವೇಳೆ ಪ್ರದರ್ಶಿಸಲಾಯಿತು.

ಗ್ರಾ.ಪಂ.ಉಪಾಧ್ಯಕ್ಷ ಜನಾರ್ದನ ಶೆಟ್ಟಿ ಕಲ್ಲಡ್ಕ, ಸದಸ್ಯರುಗಳಾದ ಗಂಗಾರತ್ನ ವಸಂತ್, ಸುಗುಣ, ಗೀತಾ, ದಿನೇಶ, ಚೆನ್ನಪ್ಪ ಗೌಡ, ಜನಶಿಕ್ಷಣ ಟ್ರಸ್ಟ್‌ನ ದಿವ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾ.ಪಂ. ಕಾರ್ಯದರ್ಶಿ ಲಲಿತಾ ಜಿ.ಡಿ. ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.