Breaking News

1000, 500ರ ನೋಟಿನ ಅಪನಗದೀಕರಣ ಹಾಗೂ 2000ದ ನಗದೀಕರಣ ಬಗ್ಗೆ

Puttur_Advt_NewsUnder_1
Puttur_Advt_NewsUnder_1

 

notu2ನಮ್ಮ ದೇಶವನ್ನು ಇನ್ನೊಂದು ದೇಶದ ಮುಂದೆ ಹೋಲಿಸಿದಾಗ ನಮ್ಮ ದೇಶದ ಶ್ರೀಮಂತರು ಮತ್ತು ಬಡವರ ಅಂತರ ಆನೆಗೂ ಇಲಿಗೂ ಇದ್ದಷ್ಟು. ಈ ಅಂತರವನ್ನು ಬಹಳಷ್ಟು ಕಡಿಮೆ ಮಾಡುವ ಪ್ರಯತ್ನವೇ ನಮ್ಮ ಪ್ರಧಾನಿಯವರ ನೋಟು ಬದಲಾವಣೆ ಎನ್ನಬಹುದು. ಹಳ್ಳಿ ಹಳ್ಳಿಗಳಲ್ಲಿಯೂ ಆರ್ಥಿಕ ಸ್ಥಿತಿ ಸುಧಾರಣೆ ಆಗಬಹುದು. ಅದಲ್ಲದೆ ಪ್ರತಿಯೊಂದು ವ್ಯವಹಾರವು ಬ್ಯಾಂಕ್ ಮುಖಾಂತರ ಆಗುವುದರಿಂದ ಭ್ರಷ್ಟಾಚಾರ ನಿರ್ಮೂಲನೆ ಆಗಬಹುದು. ಕಪ್ಪು ಹಣ ಬಿಳಿ ಹಣ ಎಂಬ ಬೇಧ ಭಾವಗಳು ನಾಶವಾಗಬಹುದು. ಭ್ರಷ್ಟಾಚಾರದಿಂದ ಗಳಿಸಿದ ಕೋಟಿ ಕೋಟಿ ಕಪ್ಪು ಹಣ ಕೋಟಿ ಜನರ ಜೇಬಿನಲ್ಲಿರಬೇಕಾದದ್ದು ಒಬ್ಬ ಭ್ರಷ್ಟಾಚಾರಿಯ ಜೇಬಿನಲ್ಲಿದೆ. ಆತ ಮೇಲ್ನೋಟಕ್ಕೆ ಅಧಿಕಾರಿಯಾಗಿರಬಹುದು, ಉದ್ಯಮಿಯಾಗಿರಬಹುದು. ಆತನಲ್ಲಿರುವುದು ಕಪ್ಪು ಹಣವೆಂದು ಆತನ ಮನಸ್ಸಿಗೆ ಗೊತ್ತಾದದ್ದೇ ಈ ಪ್ರಧಾನಿಯವರಿಂದ. ಈ ನೋಟು ರದ್ಧತಿಯ ಕಾಯಕಕ್ಕೆ ಆರ್‌ಬಿಐ ಬ್ಯಾಂಕ್‌ನ ಗವರ್ನರ್ ಆಗಿರುವ ಉರ್ಜಿತ್ ಪಟೇಲರ ಒಪ್ಪಿಗೆ ಹಣಕಾಸು ಸಚಿವರಾದ ಅರುಣ್ ಜೇಟ್ಲಿಯವರ ಬೆಂಬಲ ಪ್ರಧಾನಿಯವರಿಗಿದೆ. 2012ರಲ್ಲಿ ಅಹಮದಾಬಾದ್‌ನ ಸಿ.ಎ. ಒಬ್ಬರು ಮೋದಿಯವರಲ್ಲಿ 500 ರೂ. ನೋಟಿನ ರದ್ಧತಿಯನ್ನು ಅಂದೇ ಪ್ರಸ್ತಾಪಿಸಿದರಂತೆ. ಆದರೆ ಆ ಕಥೆ ಬೇರೆ. ಯಾವುದೇ ಒಂದು ಮಣ್ಣಿನ ಗೋಡೆಯ ಹಳೆಯ ಮನೆಯನ್ನು ರಿಪೇರಿ ಮಾಡುವಾಗ ಆ ಹಳೇ ಮನೆಯನ್ನು ಬಿಚ್ಚಿಸುವಾಗ ಅದನ್ನು ರಿಪೇರಿ ಮಾಡುವ ಎರಡು ಕೆಲಸಗಾರರನ್ನು ನೇಮಿಸುವುದು ಆ ಮನೆಯ ಯಜಮಾನನ ಮೊದಲನೇ ಕರ್ತವ್ಯ.

ಅದೇ ರೀತಿ ಒಂದು ದೇಶದ ನೋಟಿಗೆ ಸಂಬಂಧಪಟ್ಟ ಬ್ಯಾಂಕಿನ ವ್ಯವಹಾರಗಳನ್ನು ಹತೋಟಿಯಲ್ಲಿಡುವುದು ಹಾಗೂ ಅದರ ಅಧಿಕಾರಿಗಳನ್ನು ಹತೋಟಿಯಲ್ಲಿಟ್ಟು ಈ ರದ್ಧತಿಯ ಕಾರ್ಯಕ್ಕೆ ಇಳಿದಾಗ ಇದರ ವಿಧಾನವೇ ಬೇರೆಯಾಗುತ್ತಿತ್ತು. 2000ದ ಹೊಸ ನೋಟಿನ ಕಂತೆಗಳು ಭ್ರಷ್ಟರ ಕೈ ಸೇರುವುದು ನಿಲ್ಲುತ್ತಿತ್ತು. ಬೇಸರದ ಸಂಗತಿಯೇನೆಂದರೆ ಕೋಟಿ ಇದ್ದ ಕೆಲವು ಕಪ್ಪು ಕುಳಗಳು ಸಂಪೂರ್ಣವಾಗಿ ಕೋಟಿಯಾಗಿ ಬದಲಾಯಿಸಿಕೊಂಡರು. ಇದರಿಂದಾಗಿ ಜನ ಸಾಮಾನ್ಯರಿಗೆ ಇಡೀ ದಿನ ಬ್ಯಾಂಕಲ್ಲಿ ಕಾದು ಹಣ ಸಿಗದೆ ಬಂದವರೂ ಇದ್ದಾರೆ. ತಿಂಗಳ ಸಂಬಳಕ್ಕೆ ದುಡಿದು ಸಂಬಳ ಸಿಗದಿದ್ದವರೂ ಇದ್ದಾರೆ. ಎಟಿಎಂನಿಂದ ಎಟಿಎಂಗೆ ಅಲೆದವರೂ ಇದ್ದಾರೆ. ಹೇಗಿದ್ದರೂ ಇದು ತಾತ್ಕಾಲಿಕ ಕಷ್ಟ ಎನ್ನಬಹುದು. ಭಾರತದ ಆರ್ಥಿಕತೆ ಸುಧಾರಣೆಯಂತು ಅದು ಮರೆಯಲಾಗದ ಸತ್ಯ.

ತುಳಸೀದಾಸರು ಒಂದು ಪದವನ್ನು ಹೇಳುತ್ತಾರೆ. ಒಂದು ಹಗ್ಗವನ್ನು ಕೈಯಲ್ಲಿ ಹಿಡಿದು ಈ ಹಗ್ಗದಿಂದ ಕಲ್ಲಿನ ಮೇಲೆ ಒಂದು ಗುರುತು ಮಾಡಬೇಕು ಎಂಬ ಮನಸ್ಸಿನಿಂದ ಕಲ್ಲಿನ ಮೇಲೆ ಆ ಹಗ್ಗವನ್ನು ಆಚೆ ಈಚೆ ನೂರಾರು ಸಲ ಎಳೆದಾಗ ಹಗ್ಗ ತುಂಡಾಗಬಹುದು. ಆದರೆ ಕಲ್ಲಿನ ಮೇಲೆ ಒಂದು ಸಣ್ಣ ಗುರುತಾಗುವುದು ಗ್ಯಾರಂಟಿ. ಬಹುಶಃ ಇದು ಪ್ರಧಾನಿಯವರಿಗೆ ಅನ್ವಯಿಸುತ್ತದೆ. ತುಳಸೀದಾಸರ ಇನ್ನೊಂದು ಮಾತು ದೀಪವು ಉರಿಯುತ್ತಿದೆ. ಅದರ ಸುತ್ತಲೂ ಪ್ರಕಾಶವನ್ನು ಬೀರುತ್ತಿದೆ. ಆದರೆ ಅದರ ಬುಡದಲ್ಲಿಯೇ ಕತ್ತಲಿದೆ ಎಂದು ಆ ದೀಪಕ್ಕೆ ಗೊತ್ತಿಲ್ಲ. ತುಳಸೀದಾಸರ ಈ ಮಾತು ನಮ್ಮ ನೋಟಿನ ಅಮಾನ್ಯತೆಗೂ 2000ದ ನೋಟಿನ ನ್ಯೂನ್ಯತೆಗೂ ಸಂಬಂಧ ಕಲ್ಪಿಸುತ್ತದೆಯೇ? ಎಂದು ನಾವು ಆಲೋಚಿಸಬೇಕು. ರಾಜ್ಯದ ಮುಖ್ಯ ಮಂತ್ರಿಗಳು ಈ ಪದವನ್ನು ಓದಿರಬೇಕು.

ಫಾತಿಮ ರಿಝಾ ಎ., 8ನೇ ತರಗತಿ

ಸ.ಪ.ಪೂ. ಕಾಲೇಜು, ಪುತ್ತೂರು, ದ.ಕ. ಮೊ:9972380594

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.