ಕೊಡಿಪಾಡಿ ಶಾಲಾ ವಾರ್ಷಿಕೋತ್ಸವ: ವರ್ಗಾವಣೆಗೊಂಡ ಶಿಕ್ಷಕರಿಗೆ ಸನ್ಮಾನ ;ವಿದ್ಯಾರ್ಥಿವೇತನ ವಿತರಣೆ

Puttur_Advt_NewsUnder_1
Puttur_Advt_NewsUnder_1

kodipady2 kodipady1ಪುತ್ತೂರು: ನಮ್ಮ ಊರಿನ ಶಾಲೆ ಅಭಿವೃದ್ಧಿಯಾಗಬೇಕಾದರೆ ಊರವರ ಸಹಕಾರ ಅಗತ್ಯ ಎಂದು ಕೊಡಿಪಾಡಿ ಗ್ರಾಪಂ ಅಧ್ಯಕ್ಷೆ ಲೀಲಾವತಿ ಕೋಂಟ್ರುಪ್ಪಾಡಿ ಹೇಳಿದರು.

ಅವರು ಡಿ.17ರಂದು ಕೊಡಿಪಾಡಿ ಉನ್ನತ ಹಿ.ಪ್ರಾ ಶಾಲಾ ವಾರ್ಷಿಕೋತ್ಸವದ ಸಭಾಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಮ್ಮ ಊರಿನ ಶಾಲೆಯ ವಿಚಾರ ಬಂದಾಗ ನಾವೆಲ್ಲರು ಒಂದಾಗಿ ಅದರ ಕೆಲಸಕಾರ್ಯಗಳಲ್ಲಿ ಭಾಗಿಯಾಗಬೇಕು. ಯಾಕೆಂದರೆ ಈ ಶಾಲೆಯಲ್ಲಿ ನಾವು ಕಲಿತಿರುತ್ತೇವೆ, ನಮ್ಮ ಮಕ್ಕಳು ಕಲಿಯುತ್ತಿರುತ್ತಾರೆ. ಮುಂದಿನ ಪೀಳಿಗೆಯವರಿಗೂ ಈ ಶಾಲೆ ಉಪಯುಕ್ತವಾಗಲಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳೆಲ್ಲಾ ಮುಂದೆ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬೆಳಗಲಿ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ತಾ.ಪಂ ಸದಸ್ಯೆ ದಿವ್ಯಾ ಪುರುಷೋತ್ತಮ ಮಾತನಾಡಿ ಮಕ್ಕಳು ಪಠ್ಯದ ಜೊತೆಗೆ ಪಟ್ಯೇತರ ಚಟುವಟಿಕೆಗಳಲ್ಲಿಯೂ ಮುಂದೆ ಬಂದರೆ ಮಾತ್ರ ಸಮಾಜದಲ್ಲಿ ಮೇಲೆ ಬರಲು ಸಾಧ್ಯ. ಸಿ.ಆರ್.ಪಿ ನಾರಾಯಣ ಪುಣಚ, ಟಿ ಎಸ್ ಸುಬ್ರಹ್ಮಣ್ಯ ಭಟ್, ವಿವೇಕಾನಂದ ಕಾಲೇಜಿನ ಪ್ರಾಧ್ಯಾಪಕ ದೇವಿ ಪ್ರಸಾದ್ ಕೆ.ಎಸ್, ವಿವೇಕ್ ಫ್ರೆಂಡ್ಸ್‌ನ ಅಧ್ಯಕ್ಷ ಪುನೀತ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷ ದಿನೇಶ್ ಗೋಮುಖ, ಎಸ್‌ಡಿಎಂಸಿ ಉಪಾಧ್ಯಕ್ಷೆ ಸುಂದರಿ, ಸದಸ್ಯರಾದ ಭಾರತಿ, ಗುಲಾಬಿ, ವಿನಯ, ಸುನಿತ, ಲೀಲಾವತಿ, ಶೋಭ, ಸುಮಿತ್ರ, ಜಯಂತಿ, ಮೋಹಿನಿ, ಚಂದ್ರಾವತಿ, ನಳಿನಿ, ನಮಿತ, ಅಬ್ದುಲ್ ರಹಿಮಾನ್, ಹಂಝ.ಕೆ, ಆದಂ, ಮಹೇಶ್ ಉಪಸ್ಥಿತರಿದ್ದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ, ಕೊಡಿಪಾಡಿ ಗ್ರಾಪಂ ಸದಸ್ಯ ಗಿರಿಧರ ಗೋಮುಖರವರು ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಹೊರೆಯಾಗಬಾರದೆನ್ನುವ ದೃಷ್ಟಿಯಿಂದ ಯಾವುದೇ ವಿದ್ಯಾರ್ಥಿಗಳಿಗೆ ವಾರ್ಷಿಕೋತ್ಸವಕ್ಕೆ ದೇಣಿಗೆ ನೀಡಬೇಕೆಂದು ಒತ್ತಾಯಿಸದೆ. ಅವರಾಗಿಯೇ ದೇಣಿಗೆ ನೀಡಿದ ಪೋಷಕರಿಂದ ಪಡೆದು ದಾನಿಗಳ ಸಹಕಾರದಿಂದ ಇಷ್ಟೊಂದು ದೊಡ್ಡ ಕಾರ್ಯಕ್ರಮ ಮಾಡುವಲ್ಲಿ ಯಶಸ್ವಿಯಾಗಿzವೆ ಎಂದರು.

ಅತಿಥಿಯಾಗಿ ಆಗಮಿಸಿದ ವಿವೇಕಾನಂದ ಕಾಲೇಜಿನ ಪ್ರಾಧ್ಯಾಪಕ ದೇವಿ ಪ್ರಸಾದ್ ಕೆ.ಎನ್‌ರವರು ವಾರ್ಷಿಕೋತ್ಸವ ಖರ್ಚಿಗಾಗಿ ಹತ್ತು ಸಾವಿರದ ಚಕ್ಕನ್ನು ವೇದಿಕೆಯಲ್ಲಿ ಹಸ್ತಾಂತರಿಸಿದರು.

ಯೋಧರಿಗೆ ಗೌರವ ಸಲ್ಲಿಸುವ ಮೂಲಕ ಸಭಾಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಶಾಲಾ ಎಸ್‌ಡಿಎಂಸಿ ಗೌರವಾಧ್ಯಕ್ಷ ರಾಮಜೋಯಿಸರವರು ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು. ಮುಖ್ಯಶಿಕ್ಷಕ ಪ್ರಕಾಶ್ ಎನ್ ವರದಿ ವಾಚಿಸಿದರು. ಶಿಕ್ಷಕಿಯರಾದ ಆರತಿ ಎಸ್ ರಾವ್ ಹಾಗು ವಿಜಯ ಪಿ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಸ್ಟ್ಯಾನಿ ಪ್ರವೀಣ್ ಮಸ್ಕರೇನ್ಹಸ್ ಧನ್ಯವಾದಗೈದರು. ಪದವೀಧರ ಶಿಕ್ಷಕ ಲಿಂಗರಾಜ್ ಎಸ್,ಶಿಕ್ಷಕಿ ಐರಿನ್ ಮಾರ್ಟಿಸ್, ಆಯಿಷಾ ಸಹಕರಿಸಿದರು. ಸಭಾಕಾರ್ಯಕ್ರಮದ ಬಳಿಕ ಅಂಗನವಾಡಿ, ಶಾಲಾ ಮಕ್ಕಳು, ಹಿರಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು.

ಸನ್ಮಾನ; ಗೌರವಾರ್ಪಣೆ: ವರ್ಗಾವಣೆಗೊಂಡ ಶಿಕ್ಷಕಿ ಶೋಭಾ ಹಾಗು ಶಿಕ್ಷಕ ಲಿಂಗಪ್ಪರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಶಾಲಾ ಹಳೆ ವಿದ್ಯಾರ್ಥಿ, ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಮಹಮ್ಮದ್ ಹಾರುನ್, ಶರಣ್ಯ ಹಾಗು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸುಶ್ಮಿತ, ಮೇಘಲಾ, ಗೌರವ ಶಿಕ್ಷಕಿ ಜಯಶೀಲಾ ಎಂ.ಬಿ ಮತ್ತು ಅಡುಗೆ ಸಿಬ್ಬಂದಿಗಳನ್ನು ಗೌರವಿಸಲಾಯಿತು.

ವಿದ್ಯಾರ್ಥಿವೇತನ ವಿತರಣೆ: ಇಂಡಿಯನ್ ಸ್ಟೀಲ್ ನೆಹರೂನಗರ ಇದರ ಮಾಲಿಕ ಸುಭ್ರಹ್ಮಣ್ಯ ಭಟ್, ವಾಟೆಮನೆ ಬಾಬು ರಾವ್ ಮತ್ತು ರಾಜಮ್ಮ, ನಿವೃತ್ತ ಮುಖ್ಯಗುರು ಮುತ್ತಮ್ಮ ಟೀಚರ್ ಸ್ಮರಣಾರ್ಥ ಮಂಜಪ್ಪ ಸೌಂದರ್ಯ ಎಜುಕೇಶನ್ ಟ್ರಸ್ಟ್ ಬೆಂಗಳೂರು, ಕೊಡಿಪಾಡಿ ಶಾಲೆಯಲ್ಲಿ ಸೇವೆಸಲ್ಲಿಸಿ ಮುಖ್ಯ ಗುರುಗಳಾಗಿ ಭಡ್ತಿಗೊಂಡು ವರ್ಗಾವಣೆಗೊಂಡ ರಂಜಿನಿ ಎಸ್ ರಾವ್‌ರವರ ದತ್ತಿ ನಿಧಿಯಿಂದ ನೀಡಲ್ಪಡುವ ವಿದ್ಯಾರ್ಥಿ ವೇತನವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು. ಬಳಿಕ ಕಲಿಕೆಯಲ್ಲಿ ಮುಂದಿರುವ, ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಹಾಗು ಕ್ರೀಡಾ ಕೂಟದಲ್ಲಿ ಭಾಗವಹಿಸಿದ ಹಳೆ ವಿದ್ಯಾರ್ಥಿಗಳಿಗೆ ಹಾಗು ಪೋಷಕರಿಗೆ ಬಹುಮಾನ ವಿತರಿಸಲಾಯಿತು.

ಬಹುಮಾನ ವಿತರಣೆ: ಡಿ.17ರಂದು ಬೆಳಿಗ್ಗೆ ಶಾಲಾ ಗೌರವಾಧ್ಯಕ್ಷ ರಾಮಜೋಯಿಸ ಧ್ವಜಾರೋಹಣಗೈದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಗಿರಿಧರ ಗೌಡ ಗೋಮುಖ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಸಂಯೋಜಕ ಲೋಕಾನಂದ ಹಾಗು ಎಸ್‌ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕ್ರೀಡಾಕೂಟದಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.