ರೆಂಜ ಅಯ್ಯಪ್ಪ ಸ್ವಾಮಿಗೆ ಛಾಯಾಚಿತ್ರ ಪ್ರತಿಷ್ಠಾ ಮಹೋತ್ಸವ ನಾಳೆ ನವೀಕೃತ ಭಜನಾ ಮಂದಿರ ಲೋಕಾರ್ಪಣೆ

Puttur_Advt_NewsUnder_1
Puttur_Advt_NewsUnder_1

renjaಪುತ್ತೂರು: ಬೆಟ್ಟಂಪಾಡಿಯ ರೆಂಜ ಶ್ರೀರಾಮನಗರದ ಶ್ರೀ ಅಯ್ಯಪ್ಪ ಸ್ವಾಮಿಯ ನವೀಕೃತ ಭಜನಾ ಮಂದಿರದ ಲೋಕಾರ್ಪಣೆ ಕಾರ್ಯಕ್ರಮ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ದ.21ರಂದು ನಡೆಯಲಿದೆ.

18 ವರ್ಷಗಳ ಸಾರ್ಥಕ್ಯ ಧರ್ಮ ಜಾಗೃತಿಯನ್ನು ಮೂಡಿಸಿರುವ ಮಂದಿರ ಹತ್ತು ಹಲವು ಜೀರ್ಣೋದ್ಧಾರ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪ್ರತೀ ಬಾರಿ ನೂರಾರು ಅಯ್ಯಪ್ಪ ವೃತಧಾರಿಗಳು ಇರುಮುಡಿ ಕಟ್ಟಿ ಸ್ವಾಮಿ ಸನ್ನಿಧಿಗೆ ಹೋಗುತ್ತಿದ್ದಾರೆ. ಪ್ರತೀ ವರ್ಷ ಹಲವು ರೀತಿಯ ಜೀರ್ಣೋದ್ಧಾರ ಕಾರ್ಯಗಳು ಅಯ್ಯಪ್ಪ ಸ್ವಾಮಿ ಟ್ರಸ್ಟ್ ನೇತೃತ್ವದಲ್ಲಿ ಊರ ಪರವೂರ ಭಕ್ತರ ಸಹಕಾರದಲ್ಲಿ ನಡೆಯುತ್ತಿದೆ. ಈ ಬಾರಿ ಸ್ವಾಮಿಯ ಛಾಯಾಚಿತ್ರ ಗುಡಿಗೆ ಟೈಲ್ಸ್ ಅಳವಡಿಕೆ, ನೆಲಕ್ಕೆ ಗ್ರಾನೈಟ್ಸ್ ಹಾಸುವಿಕೆ ಕಾರ್ಯಗಳು ನಡೆದಿದ್ದು ನವೀಕರಣಗೊಂಡಿದೆ.

ನವೀಕೃತ ಭಜನಾ ಮಂದಿರದ ಲೋಕಾರ್ಪಣೆಯ ಪ್ರಯುಕ್ತ ದ. 21ರಂದು ಬೆಳಿಗ್ಗೆ ಗಣಪತಿ ಹೋಮ, ಬ್ರಹ್ಮಕಲಶ ಪೂಜೆ, ಪ್ರತಿಷ್ಠೆ ನಡೆದು, ಮಹಾಪೂಜೆಯಾಗಿ ನಿತ್ಯನೈಮಿತ್ತಾದಿಗಳ ನಿರ್ಣಯ, ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ ಧಾರ್ಮಿಕ ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಸಂಜೆ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದಿಂದ ದಿವ್ಯಜ್ಯೋತಿ ಮೆರವಣಿಗೆ ನಡೆಯಲಿದೆ. ಸಂಜೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಬೆಟ್ಟಂಪಾಡಿ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ಸದಾಶಿವ ರೈ ಸೂರಂಬೈಲು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುತ್ತೂರು ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲು, ಮಂಗಳೂರಿನ ಎಂಆರ್‌ಪಿಎಲ್ ಉದ್ಯೋಗಿ ಸೀತರಾಮ ರೈ ಚೆಲ್ಯಡ್ಕ, ಪುತ್ತೂರು ಆಡ್ ಮೀಡಿಯಾ ಮಾಲಕ ಆರ್.ಸಿ. ನಾರಾಯಣ ರೆಂಜ, ಕ್ಯಾಂಪ್ರೋ ನೌಕರರ ಸಂಘದ ಅಧ್ಯಕ್ಷ ಎಸ್. ವಿಶ್ವನಾಥ ಶೆಟ್ಟಿ ಪೆರ್ಣೆ ಭಾಗವಹಿಸಲಿದ್ದಾರೆ. ಅಪರಾಹ್ನ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

ಪ್ರಪ್ರಥಮ ಬಾರಿಗೆ ’ಯಕ್ಷಗಾನ ನಾಟ್ಯ ವೈಭವ’

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ ಯಕ್ಷಗಾನ ನಾಟ್ಯ ವೈಭವ ನಡೆಯಲಿದೆ. ಹಿಮ್ಮೇಳದಲ್ಲಿ ಪ್ರಸಿದ್ದ ಯುವ ಭಾಗವತರುಗಳಾದ ಗಿರೀಶ್ ರೈ ಕಕ್ಯಪದವು, ಪ್ರಫುಲ್ಲಚಂದ್ರ ನೆಲ್ಯಾಡಿ, ಚೆಂಡೆಯಲ್ಲಿ ಚಂದ್ರಶೇಖರ ಭಟ್ ಕೊಂಕಣಾಜೆ, ಮದ್ದಳೆಯಲ್ಲಿ ಕೃಷ್ಣಪ್ರಕಾಶ ಉಳಿತ್ತಾಯ, ಚಕ್ರತಾಳದಲ್ಲಿ ನಾಗೇಶ್ ಆಚಾರ್ಯ ಪಡುಮಲೆ, ಮುಮ್ಮೇಳದಲ್ಲಿ ದಿವಾಕರ ರೈ ಸಂಪಾಜೆ, ಶಶಿಧರ ಕುಲಾಲ್ ಕನ್ಯಾನ, ರಕ್ಷಿತ್ ಶೆಟ್ಟಿ ಪಡ್ರೆ ಭಾಗವಹಿಸಲಿದ್ದಾರೆ. ಅಧ್ಯಾಪಕ ಭಾಸ್ಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಲಿದ್ದಾರೆ. ಶಶಿಕಿರಣ್ ಕಾವು ಹಾಗೂ ತಾರನಾಥ ರೈ ಕುಂಬ್ರ ಸಂಯೋಜಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.