Breaking News

ಕಲಾಶ್ರೀ ಪ್ರಶಸ್ತಿಗಾಗಿ ಮಕ್ಕಳ ಆಯ್ಕೆ ಶಿಬಿರ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬಾಲ ಭವನ ಸೊಸೈಟಿ ರಾಜ್ಯಮಟ್ಟದ ಕಲಾಶ್ರೀ ಪ್ರಶಸ್ತಿಗೆ ಮಕ್ಕಳನ್ನು ಆಯ್ಕೆ ಮಾಡಲು ಬೆಂಗಳೂರು ಉತ್ತರ/ದಕ್ಷಿಣ ಭಾಗದ ಸೃಜನಾತ್ಮಕ ಹಾಗೂ ಕ್ರಿಯಾತ್ಮಕ ಚಟುವಟಿಕೆಗಳಲ್ಲಿರುವ ಮಕ್ಕಳಿಗಾಗಿ ಜ.1ರಂದು ಸ್ಥಳೀಯ ಮಟ್ಟದ ಆಯ್ಕೆ ಶಿಬಿರವನ್ನು ಏರ್ಪಡಿಸಿದೆ. ವಿವಿಧ ಪ್ರಕಾರಗಳಲ್ಲಿ ಪ್ರಾವೀಣ್ಯತೆ ಹೊಂದಿರುವ, 9ರಿಂದ 16 ವರ್ಷದ ಮಕ್ಕಳು ಸ್ಥಳೀಯ ಮಟ್ಟದ ಆಯ್ಕೆಯಲ್ಲಿ ಪಾಲ್ಗೊಳ್ಳಲು ನಿಗದಿತ ಸಮಯಕ್ಕಿಂತ ಅರ್ಧ ಗಂಟೆ ಮುಂಚಿತವಾಗಿ ಹಾಜರಿರತಕ್ಕದ್ದು. ಆಯ್ಕೆಯಾದ ಮಕ್ಕಳಿಗೆ ರಾಜ್ಯಮಟ್ಟದ ಶಿಬಿರದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುವುದು.

ಸೃಜನಾತ್ಮಕ ಪ್ರದರ್ಶನ ಕಲೆ: ಶಾಸ್ತ್ರೀಯ, ನೃತ್ಯ, ಜಾನಪದ ನೃತ್ಯ, ಕರ್ನಾಟಕ ಅಥವಾ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ವಾದ್ಯ, ಸಂಗೀತ, ಸುಗಮ ಸಂಗೀತ, ಯಕ್ಷಗಾನ, ಯಕ್ಷಿಣಿ ಪ್ರದರ್ಶನ, ಏಕಪಾತ್ರಾಭಿನಯ, ಯೋಗದೊಂದಿಗೆ ನೃತ್ಯ ಇತ್ಯಾದಿ ಯಾವುದಾದರೊಂದು ಕಲೆಯನ್ನು ಮಾತ್ರ ಪ್ರದರ್ಶಿಸಲು ಅವಕಾಶವಿರುತ್ತದೆ.

ವಿಜ್ಞಾನದಲ್ಲಿ ನೂತನ ಆವಿಷ್ಕಾರ: ವಿಜ್ಞಾನಕ್ಕೆ ಸಂಬಂಧಪಟ್ಟಂತೆ ಒಂದು ವಿಷಯದ ಬಗ್ಗೆ ಮಾದರಿ ಪ್ರದರ್ಶನ ಹಾಗೂ ವಿವರಣೆ ಮತ್ತು ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ತೀರ್ಪುಗಾರರ ಇನ್ನಿತರ ಪ್ರಶ್ನೆಗಳಿಗೆ ಉತ್ತರ ಬೆಳಗ್ಗೆ 11 ಗಂಟೆಗೆ.

ಸೃಜನಾತ್ಮಕ ಕಲೆ: ಚಿತ್ರಕಲೆ, ಕರಕುಶಲ, ಜೇಡಿಮಣ್ಣಿನ ಕಲೆ (ಮೂರರಲ್ಲೂ ಕಡ್ಡಾಯವಾಗಿ ಭಾಗವಹಿಸಬೇಕು) (ಹಾಳೆ ಮತ್ತು ಜೇಡಿ ಮಣ್ಣು ನೀಡಲಾಗುವುದು, ಕರಕುಶಲಕ್ಕೆ ಅಗತ್ಯ ಸಾಮಾಗ್ರಿಗಳನ್ನು ತಂದು ಸ್ಥಳದಲ್ಲೇ ತಯಾರಿಸುವುದು) ಬೆಳಗ್ಗೆ 11.30ಕ್ಕೆ ನಡೆಯಲಿದೆ.

ಸೃಜನಾತ್ಮಕ ಬರವಣಿಗೆ: ಕಥೆ, ಕವನ, ಪ್ರಬಂಧ ಬರೆಯುವುದು (ಮೂರರಲ್ಲೂ ಕಡ್ಡಾಯವಾಗಿ ಭಾಗವಹಿಸಬೇಕು). ಮಧ್ಯಾಹ್ನ 12.30ಕ್ಕೆ ಹೆಚ್ಚಿನ ವಿವರಗಳಿಗೆ ಹಾಗೂ ನೋಂದಣಿಗಾಗಿ ಕಾರ್ಯದರ್ಶಿಗಳ ಕಚೇರಿ, ಬಾಲ ಭವನ, ಸೊಸೈಟಿ, ಬೆಂಗಳೂರು ಇಲ್ಲಿ ಖುದ್ದಾಗಿ ಅಥವಾ ದೂ.ಸಂ.-080-22864189, 22861423 ಅಥವಾ ಇ-ಮೇಲ್ [email protected]ನ್ನು ಸಂಪರ್ಕಿಸಲು ಕೋರಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.