Breaking News

ಇಚ್ಲಂಪಾಡಿ: ಒಕ್ಕಲಿಗ ಸಮಾಜ ಬಾಂಧವರ ಸಮಾವೇಶ

Puttur_Advt_NewsUnder_1
Puttur_Advt_NewsUnder_1

ichilamppady

ನೆಲ್ಯಾಡಿ: ಒಕ್ಕಲಿಗ ಗೌಡ ಸೇವಾ ಸಂಘ ಇಚ್ಲಂಪಾಡಿ, ಒಕ್ಕಲಿಗ ಸ್ವಸಹಾಯ ಸಂಘ ಇಚ್ಲಂಪಾಡಿ ಒಕ್ಕೂಟ ಇದರ ವತಿಯಿಂದ ಸಮಾಜ ಬಾಂಧವರ ವಾರ್ಷಿಕ ಸಮಾವೇಶ ದ.೧೮ರಂದು ಇಚ್ಲಂಪಾಡಿ ಗ್ರಾಮದ ಅಲೆಕ್ಕಿ ಕೇಶವ ಗೌಡರ ಮನೆಯಲ್ಲಿ ನಡೆಯಿತು.

ಧಾರ್ಮಿಕ ಮುಂದಾಳ ಕುಶಾಲಪ್ಪ ಗೌಡ ಪೂವಾಜೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಮಾಜ ಬಾಂಧವರು ತಮ್ಮ ನಡುವಿನ ಬಂಧುತ್ವದ ಸವಿಯನ್ನು ಕಾಣಲು ಈ ರೀತಿಯ ಸಮಾವೇಶಗಳು ಪೂರಕವಾಗಿವೆ ಎಂದರು. ದ.೩೦ರಂದು ಆದಿಚುಂಚನಗಿರಿ ಮಠದ ೭೨ನೇ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ನೆಲ್ಯಾಡಿ ವಲಯದ ಗ್ರಾಮಗಳಿಗೆ ಭೇಟಿ ನೀಡಿ ಆಶೀರ್ವದಿಸಲಿದ್ದಾರೆ. ಈ ಕಾರ‍್ಯಕ್ರಮದಲ್ಲಿ ಎಲ್ಲರೂ ಭಾಗಿಗಳಾಗಬೇಕೆಂದು ಹೇಳಿದರು.

ತಾಲೂಕು ಯುವ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ ಮುಂಗ್ಲಿಮನೆ, ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ನ ಅಧ್ಯಕ್ಷ ಎ.ವಿ.ನಾರಾಯಣ ಗೌಡ, ಕೊಂಬಾರು ಗ್ರಾ.ಪಂ.ಸದಸ್ಯೆ ರುಕ್ಮಿಣಿ ಕುಶಾಲಪ್ಪ ಗೌಡ, ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ನ ಸದಸ್ಯ ರವಿಚಂದ್ರ ಹೊಸವಕ್ಲು, ಯುವ ಒಕ್ಕಲಿಗ ಗೌಡ ಸೇವಾ ಸಂಘದ ನೆಲ್ಯಾಡಿ ವಲಯ ಉಸ್ತುವಾರಿ ರಾಧಾಕೃಷ್ಣ ಗೌಡ ಕೆರ್ನಡ್ಕ  ಶುಭಹಾರೈಸಿದರು. ಮಾಗಣೆಗೌಡರಾದ ಭಾಸ್ಕರ ಎಸ್.ಗೌಡರವರು ಗ್ರಾಮ ಸಂಘದ ಪರಿಚಯದೊಂದಿಗೆ ಸಮಾಜಬಾಂಧವರ ಸಹಕಾರವನ್ನು ಸ್ಮರಿಸಿದರು. ಇಚ್ಲಂಪಾಡಿ ಒಕ್ಕಲಿಗ ಗೌಡ ಗ್ರಾಮ ಸಮಿತಿ ಅಧ್ಯಕ್ಷ ದಿನೇಶ್ ಗೌಡ ಕಲ್ಯ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಸಮಿತಿ ಗೌರವಾಧ್ಯಕ್ಷ ರಾಮಕೃಷ್ಣ ಗೌಡ ಕೊರಮೇರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ: ಕಾರ‍್ಯಕ್ರಮದಲ್ಲಿ ಮೋನಪ್ಪ ಗೌಡ ಕಲ್ಯ ದಂಪತಿಗೆ ಸನ್ಮಾನ ಮಾಡಲಾಯಿತು. ಇಚ್ಲಂಪಾಡಿ ಮತ್ತು ಕೊರಮೇರು ಶಾಲೆಯಲ್ಲಿನ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಚಂದ್ರಶೇಖರ ಗೌಡ ಕೆರ್ನಡ್ಕ ವರದಿ ವಾಚಿಸಿದರು. ಕಾರ್ಯದರ್ಶಿ ಕೇಶವ ಗೌಡ ಅಲೆಕ್ಕಿ ಸ್ವಾಗತಿಸಿದರು. ಮನೋಜ್ ಕಟ್ಟತ್ತಂಡ ವಂದಿಸಿದರು. ರವೀಂದ್ರ ಗೌಡ ಬಿಜೇರು ಕಾರ್ಯಕ್ರಮ ನಿರೂಪಿಸಿದರು. ದಕ್ಷಾ ಅಲೆಕ್ಕಿ, ಮೇಘ, ಪಾವನ, ಮೋಕ್ಷ ಪ್ರಾರ್ಥಿಸಿದರು. ಪ್ರೇರಕ ವಾಸುದೇವ ಗೌಡ ಸಹಕರಿಸಿದರು. ಮಾಯಿಲಪ್ಪ ಗೌಡ ಪಾದೆ, ವಿಶ್ವನಾಥ ಗೌಡ ಕೊರಮೇರು, ಉದಯ ಗೌಡ ಕೊರಮೇರು, ಆನಂದ ಗೌಡ ನಡುಮನೆ, ಗಣೇಶ್ ಕುಮಾರ್ ಅಲೆಕ್ಕಿ, ಸುಮನ್ ಆರ್.ಕೆ., ದಿನೇಶ್ ಕೊರಮೇರು, ಹರೀಶ್ ಗೌಡ ಅಲೆಕ್ಕಿ, ಅನಿಲ್‌ಕುಮಾರ್ ಉಮೆಸಾಗು, ಅನಿಲ್‌ಕುಮಾರ್ ಕಟ್ಟತ್ತಂಡ, ಕುಶಾಲಪ್ಪ ಗೌಡ ಕುಡಾಲ, ಹರಿಪ್ರಸಾದ್ ಪದಕ, ಭಾಸ್ಕರ ಗೌಡ ಪದಕ, ಹರಿಶ್ಚಂದ್ರ ಗೌಡ ಕೊರಮೇರು, ಹರೀಶ್ ಗೌಡ ನೇರ್ಲ, ಕೃಷ್ಣಪ್ಪ ಗೌಡ ಬಿಜೇರು, ಪೊಡಿಯಾ ಗೌಡ ಬಿಜೇರು, ಗಣೇಶ್ ಗೌಡ ನೆಲ್ಯಾಡಿ, ಪುರುಷೋತ್ತಮ ಗೌಡ ಸವಣೂರು, ಮರಿಯಪ್ಪ ಗೌಡ ಕೆರ್ನಡ್ಕ, ತ್ಯಾಂಪಣ್ಣ ಗೌಡ ಅಲೆಕ್ಕಿ, ಕೃಷ್ಣಪ್ಪ ಗೌಡ ಒಡ್ಯೆತ್ತಡ್ಕ., ವಸಂತ ಗೌಡ ಕೊರಮೇರು, ಆಶಾ ಯಾದವ, ಸೇಸಮ್ಮ ಪೈಸಾರಿ ಸೇರಿದಂತೆ ಹಲವು ಮಂದಿ ಕಾರ‍್ಯಕ್ರಮದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.