ಪಂಚಾಯತ್ ರಸ್ತೆಯಲ್ಲಿ ಅನಧಿಕೃತ ಕೊಳವೆಬಾವಿ ಮುಚ್ಚಿಸಿದ ಕಾಣಿಯೂರು ಗ್ರಾಪಂ-ಪಂಪ್ ಮುಟ್ಟುಗೋಲು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಮೆಸ್ಕಾಂ-ಮಾತಿನ ಚಕಮಕಿ-ಬೆಳ್ಳಾರೆ ಠಾಣೆಗೆ ದೂರು

Puttur_Advt_NewsUnder_1
Puttur_Advt_NewsUnder_1

 

kaliyuga kaniyooru1ಕಾಣಿಯೂರು: ಕಾಣಿಯೂರು ಗ್ರಾಪಂ. ವ್ಯಾಪ್ತಿಯ ಪಂಚಾಯತ್ ರಸ್ತೆಯ ಬದಿಯಲ್ಲಿ ಮಲೆಕೆರ್ಚಿ ಎಂಬಲ್ಲಿ  ಅನಧಿಕೃತವಾಗಿ ಕೊರೆದಿದ್ದೆನ್ನಲಾದ ಕೊಳವೆಬಾವಿಯನ್ನು ಗ್ರಾ.ಪಂ ನೇತೃತ್ವದಲ್ಲಿ ಬೆಳ್ಳಾರೆ ಠಾಣೆಯ ಆರಕ್ಷಕರ ಸಿಬ್ಬಂದಿಗಳ ಸಮ್ಮುಖದಲ್ಲಿ ಕೊಳವೆ ಬಾವಿಯನ್ನು ಮುಚ್ಚಿ, ಮೆಸ್ಕಾಂ ಇಲಾಖೆಯ ಸಿಬ್ಬಂದಿಯವರು ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಕೊಳವೆ ಬಾಪಂಚಾಯತ್ ರಸ್ತೆಯಲ್ಲಿ ಅನಧಿಕೃತ ಕೊಳವೆಬಾವಿ ಮುಚ್ಚಿದ ಕಾಣಿಯೂರು ಗ್ರಾ.ಪಂ- ಪಂಪ್ ಮುಟ್ಟಗೋಲುಗೆ ಇಳಿಸಿರುವ 1.5ಎಚ್.ಪಿ ಪಂಪ್ ಸೇರಿದಂತೆ ಸಾಮಾಗ್ರಿಯನ್ನು ಪಂಚಾಯತ್ ಮುಟ್ಟುಗೋಲು ಮಾಡಿದ ಘಟನೆ ದ 19ರಂದು ನಡೆದಿದೆ.

ಪಂಚಾಯತ್ ರಸ್ತೆಯೆಂದು ಸಾಬೀತುಪಡಿಸಲಿ- ಘಟನಾ ಸ್ಥಳಕ್ಕೆ ಗ್ರಾ.ಪಂ ಅಧ್ಯಕ್ಷೆ ಸೀತಮ್ಮ ಖಂಡಿಗ, ಪಿಡಿಓ ಯೋಗಿನಿ ಎಸ್ ಶೆಟ್ಟಿ, ಉಪಾಧ್ಯಕ್ಷೆ ಕಮಾಲಾಕ್ಷಿ ಬೆದ್ರಂಗಳ, ಸದಸ್ಯರಾದ ಸುರೇಶ್ ಓಡಬಾ, ಗಣೇಶ್ ಉದನಡ್ಕ, ಪದ್ಮನಾಭ ಅಂಬುಲ, ವೀರಪ್ಪ ಉದ್ಲಡ್ಡ, ಮಾಧವಿ ಕೋಡಂದೂರು, ಕುಸುಮಾವತಿ ಕೊಪ್ಪ, ಸುಮಿತ್ರಾ ಕೂರೇಲು, ರುಕ್ಮಿಣಿ ನಾಗಲೋಕ, ಸಿಬ್ಬಂದಿಗಳಾದ ತಿಮ್ಮಪ್ಪ ಗೌಡ ಬೀರುಕುಡಿಕೆ, ಕುಮಾರ್ ಆಗಮಿಸಿದ್ದರು. ಅಲ್ಲಿಗೆ ಆಗಮಿಸಿದ ಮಲೆಕೆರ್ಚಿ ರುಕ್ಮಯ್ಯ ಗೌಡ ಹಾಗೂ ಪತ್ನಿ ವಿಶಾಲಾಕ್ಷಿಯವರು ಕೊಳವೆಬಾವಿಯನ್ನು ಮುಚ್ಚಲು ನಾವು ಬಿಡುವುದಿಲ್ಲ. ಇದು ಪಂಚಾಯತ್ ರಸ್ತೆ ಎಂಬುದಕ್ಕೆ ನಿಮ್ಮಲ್ಲಿ ದಾಖಲೆ ಏನಾದರೂ ಇದೆಯಾ ಎಂದು ಪ್ರಶ್ನಿಸಿದರು. ಪಂಚಾಯತ್ ರಸ್ತೆಯೆಂದು ಸಾಬೀತುಪಡಿಸಿ ತೋರಿಸಿ ಎಂದ ರುಕ್ಮಯ್ಯ ಗೌಡರವರು, ಕಾನೂನು ರೀತಿಯಲ್ಲಿ ಖಂಡಿತ ಹೋರಾಡುತ್ತೇನೆ ಎಂದರು.

ರುಕ್ಮಯ್ಯ ಗೌಡರಿಗೂ ನಮಗೂ ಯಾವುದೇ ಸಂಬಂಧವಿಲ್ಲ- ಗ್ರಾ.ಪಂ: ಪಂಚಾಯತ್ ರಸ್ತೆಯಲ್ಲಿ ಅನಧಿಕೃತ ಕೊಳವೆ ಬಾವಿ ನಿರ್ಮಾಣಗೊಂಡಿದೆ, ಅನಧಿಕೃತ ಕೊಳವೆ ಬಾವಿಯನ್ನು ಮುಚ್ಚಲು ಕ್ರಮಕೈಗೊಳ್ಳಲು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಣಯಗೊಂಡಿದ್ದರಿಂದ ಕೊಳವೆ ಬಾವಿಯನ್ನು ಮುಚ್ಚಲು ನಾವು ಬಂದಿದ್ದೇವೆ ಹೊರತು ರುಕ್ಮಯ್ಯ ಗೌಡರಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಪಂಚಾಯತ್ ಪಿಡಿಓ ಮತ್ತು ಗ್ರಾ.ಪಂ ಸದಸ್ಯರು ಘಟನಾ ಸ್ಥಳದಲ್ಲಿ ತಿಳಿಸಿದರು. ರುಕ್ಮಯ್ಯ ಗೌಡ ಹಾಗೂ ಪಂಚಾಯತ್ ಸದಸ್ಯರುಗಳ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು. ಕಾಣಿಯೂರು ಗ್ರಾಮದ ಪುಣ್ಚತ್ತಾರು-ಬೆದ್ರಂಗಳ-ಕಾರ್ಯ-ಮಲೆಕೆರ್ಚಿ ಗ್ರಾ.ಪಂ. ರಸ್ತೆಯ ಮಾರ್ಜಿನ್‌ನಲ್ಲಿ ಅನಧಿಕೃತ ಕೊಳವೆ ಬಾವಿ ಕೊರೆಯಲ್ಪಟ್ಟಿದ್ದು, ಕೊಳವೆ ಬಾವಿ ಮುಚ್ಚುವಂತೆ ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಿ ಸೂಕ್ತ ರಕ್ಷಣೆ ನೀಡುವಂತೆ ಬೆಳ್ಳಾರೆ ಪೊಲೀಸ್ ಇಲಾಖೆಗೆ ಕೇಳಿಕೊಳ್ಳಲು ನಿರ್ಣಯಿಸಲಾಗಿತ್ತು, ಜೊತೆಗೆ  ಬೋರ್‌ವೆಲ್ ಸಂಪರ್ಕವಿರುವ ಅನಧಿಕೃತ ವಿದ್ಯುತ್ ಲೈನ್‌ನ್ನು ಕಡಿತಗೊಳಿಸುವಂತೆ ಮೆಸ್ಕಾಂಗೆ ಬರೆಯಲು ನಿರ್ಣಯ ಕೈಗೊಳ್ಳಲಾಗಿತ್ತು.

ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನ ,ಗ್ರಾ.ಪಂ ಅಧ್ಯಕ್ಷೆ, ಸದಸ್ಯರಿಂದ ದೂರು

ಕಾಣಿಯೂರು ಗ್ರಾಮದ ಪುಣ್ಚತ್ತಾರು- ಬೆದ್ರಂಗಳ- ಕಾರ್ಯ-ಮಲೆಕೆರ್ಚಿ ಗ್ರಾಮ ಪಂಚಾಯತ್ ರಸ್ತೆಯ ಮಾರ್ಜಿನ್‌ನಲ್ಲಿ ಅನಧಿಕೃತವಾಗಿ ಕೊರೆದಿರುವ ಕೊಳವೆ ಬಾವಿಯನ್ನು ಮುಚ್ಚುವುದಕ್ಕಾಗಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಬೆಳ್ಳಾರೆ ಠಾಣಾಧಿಕಾರಿಗಳು, ಮೆಸ್ಕಾಂ ಇಲಾಖೆಯ ಲೈನ್ ಮ್ಯಾನ್ ಹಾಗೂ ಸ್ಥಳೀಯ ಗ್ರಾಮಸ್ಥರ ಸಮ್ಮುಖದಲ್ಲಿ ಕ್ರಮಕೈಗೊಳ್ಳಲು ದ18ರಂದು ತೆರಳಿದ್ದು, ಸದ್ರಿ ಸ್ಥಳದಲ್ಲಿ ರುಕ್ಮಯ್ಯ ಗೌಡ ಮಲೆಕೆರ್ಚಿ ಮತ್ತು ಅವರ ಪತ್ನಿ ವಿಶಾಲಾಕ್ಷಿ ಇಬ್ಬರೂ ಸೇರಿ ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಅಧಿಕಾರಿಯವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮುಂದೆ ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಜೀವ ಬೆದರಿಕೆ ಹಾಕಿರುವುದಲ್ಲದೇ ಕತ್ತಿಯನ್ನು ಹಿಡಿದುಕೊಂಡು ಹಲ್ಲೆಗೆ ಯತ್ನಿಸಿರುತ್ತಾರೆ ಎಂದು ಗ್ರಾ.ಪಂ ಅಧ್ಯಕ್ಷೆ ಸೀತಮ್ಮ ಖಂಡಿಗ, ಉಪಾಧ್ಯಕ್ಷೆ ಕಮಲಾಕ್ಷೀ ಬೆದ್ರಂಗಳ, ಸದಸ್ಯರಾದ ಮಾಧವಿ ಕೋಡಂದೂರು, ಕುಸುಮಾವತಿ ಕೊಪ್ಪ, ಸುಮಿತ್ರಾ ಕೂರೇಲು, ರುಕ್ಮಿಣಿ ನಾಗಲೋಕ, ಗಣೇಶ್ ಉದನಡ್ಕ, ಸುರೇಶ್ ಓಡಬಾಯಿ, ಪದ್ಮನಾಭ ಅಂಬುಲ, ವೀರಪ್ಪ ಗೌಡ ಉದ್ಲಡ್ಡರವರು ಬೆಳ್ಳಾರೆ ಪೋಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.