Breaking News

ಪುತ್ತೂರು-ಮಂಗಳೂರು ಸಾರಿಗೆಯಲ್ಲಿ ದಿನನಿತ್ಯ ಪ್ರಯಾಣಿಕರಿಗೆ ಮಾಸಿಕ ದರ ಇಳಿಕೆ

Puttur_Advt_NewsUnder_1
Puttur_Advt_NewsUnder_1

 

ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗದಿಂದ ಪುತ್ತೂರು-ಸ್ಟೇಟ್‌ಬ್ಯಾಂಕ್/ಮಂಗಳೂರು ಮಧ್ಯೆ ಕಾರ್ಯಾಚರಿಸುತ್ತಿರುವ ಲಿಮಿಟೆಡ್ ಸ್ಟಾಪ್ ಸಾರಿಗೆಗಳಲ್ಲಿ ದಿನನಿತ್ಯ ಪ್ರಯಾಣಿಸುತ್ತಿರುವ ಪ್ರಯಾಣಿಕರ ಅನುಕೂಲಕ್ಕಾಗಿ ಮಾಸಿಕ ಸೀಸನ್ ಬಸ್ಸು ಪಾಸುಗಳ ದರಗಳಲ್ಲಿ ಭಾರೀ ಇಳಿಕೆ ಮಾಡಲಾಗಿದೆ.

ಪರಿಷ್ಕೃತ ದರ: ಪುತ್ತೂರಿನಿಂದ ಸ್ಟೇಟ್‌ಬ್ಯಾಂಕ್/ಮಂಗಳೂರುವರೆಗೆ ರೂ.1,540, ಪುತ್ತೂರಿನಿಂದ ಬಿ.ಸಿ.ರೋಡ್‌ವರೆಗೆ ರೂ. 1120, ಬಿ.ಸಿ.ರೋಡ್‌ನಿಂದ ಸ್ಟೇಟ್‌ಬ್ಯಾಂಕ್/ಮಂಗಳೂರುವರೆಗೆ ರೂ. 1100, ಕಲ್ಲಡ್ಕದಿಂದ ಸ್ಟೇಟ್‌ಬ್ಯಾಂಕ್/ಮಂಗಳೂರುವರೆಗೆ ರೂ. 1220, ಮಾಣಿಯಿಂದ ಸ್ಟೇಟ್‌ಬ್ಯಾಂಕ್/ಮಂಗಳೂರುವರೆಗೆ ರೂ. 1300. ದಿನನಿತ್ಯ ಪ್ರಯಾಣಿಸುತ್ತಿರುವ ಸಾರ್ವಜನಿಕ ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಇಲಾಖಾ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.