Breaking News

ನರಿಮೊಗರು ಗ್ರಾ.ಪಂ. ಮಹಿಳಾ ಗ್ರಾಮ ಸಭೆ

Puttur_Advt_NewsUnder_1
Puttur_Advt_NewsUnder_1

narimogaruನರಿಮೊಗರು: ಗ್ರಾ.ಪಂ. ವ್ಯಾಪ್ತಿಯ 2016-17೭ನೇ ಸಾಲಿನ ಮಹಿಳಾ ಗ್ರಾಮ ಸಭೆ ದ.17ರಂದು ಗ್ರಾ.ಪಂ. ಅಧ್ಯಕ್ಷೆ ಚಂದ್ರಕಲಾ ಎಂ.ರವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣ ದಲ್ಲಿ ನಡೆಯಿತು. ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಜೊಹರಾ ನಿಸಾರ್ ಅಹಮ್ಮದ್‌ರವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. ಸಿಡಿಪಿಓ ಇಲಾಖೆಯ ಆರತಿ, ರೇವತಿ ಬಿ.ರವರು ಮಾಹಿತಿ ನೀಡಿದರು. ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ರವೀಂದ್ರ ರೈ ನೆಕ್ಕಿಲು, ಸದಸ್ಯರುಗಳಾದ ವಸಂತ ಕೆ., ಹೊನ್ನಪ್ಪ ಪೂಜಾರಿ ಕೆ., ಪುರಂದರ ಬಂಗೇರ, ಜ್ಯೋತಿ ನಾಯಕ್, ನಳಿನಿ ಎಂ., ಚಂದ್ರಾವತಿ, ವಿ.ಎಂ. ಲಲಿತ, ಪೂಜಾ ವಸಂತ, ಶಾರದಾ, ಕುಸುಮಾವತಿ, ಸುಂದರಿ, ಇಸಾಕ್ ಮುಕ್ವೆ, ದೇವರಾಜ ಗೌಡ ಕೆ.ರವರು ಉಪಸ್ಥಿತರಿದ್ದರು. ಸಭೆಯಲ್ಲಿ ವಿವಿಧ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.