ಅಲಂಕಾರು:ವಿದ್ಯಾರ್ಥಿಗಳಿಗೆ ಸೆಕಲ್ ವಿತರಣೆ

Puttur_Advt_NewsUnder_1
Puttur_Advt_NewsUnder_1

alankaruಅಲಂಕಾರು: ಇಲ್ಲಿನ ಶ್ರೀ ದುರ್ಗಾಂಬ ಪದವಿ ಪೂರ್ವ ಕಾಲೇಜಿನ ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಸರಕಾರದಿಂದ ನೀಡಲಾದ ಸೈಕಲ್‌ಗಳನ್ನು ಡಿ.16ರಂದು ವಿತರಿಸಲಾಯಿತು.

ವಿದ್ಯಾರ್ಥಿಗಳಿಗೆ ಸೈಕಲ್‌ನ ಕೀ ಹಸ್ತಾಂತರಿಸಿ ಮಾತನಾಡಿದ ಅಲಂಕಾರು  ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷ ಸುಧಾಕರ  ಪೂಜಾರಿ, ಸರಕಾರದಿಂದ ವಿದ್ಯಾರ್ಥಿಗಳಿಗೆ ಸಿಗುತ್ತಿರುವ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು. ದುರ್ಗಾಂಬ ವಿದ್ಯಾವರ್ಧಕ ಸಂಘದ  ಅಧ್ಯಕ್ಷರಾದ ದಯಾನಂದ ರೈ ಮನವಳಿಕೆ  ಗುತ್ತು ಮಾತನಾಡಿ,  ವಿದ್ಯಾರ್ಥಿಗಳ   ಹಿತದೃಷ್ಟಿಯಿಂದ   ಸರಕಾರ ನೀಡುವ  ಸೈಕಲ್‌ಗಳನ್ನು ಸರಿಯಾದ ರೀತಿಯಲ್ಲಿ  ಸದ್ಭಳಕೆ  ಮಾಡುವಂತೆ  ವಿದ್ಯಾರ್ಥಿಗಳಿಗೆ ತಿಳಿಸಿದರು.  ಶಾಲಾ ಮುಖ್ಯ  ಗುರುಗಳಾದ   ಸತ್ಯನಾರಾಯಣ  ಭಟ್ ಸ್ವಾಗತಿಸಿ, ಪ್ರಾಸ್ತಾವಿಕ  ಮಾತುಗಳನ್ನಾಡಿದರು. ಶಿಕ್ಷಕಿ  ಸರಸ್ವತಿ ದೇವಿ  ವಂದಿಸಿದರು. ಈ ಸಂದರ್ಭದಲ್ಲಿ  ಶಾಲಾ  ಬೋಧಕ ಹಾಗೂ ಬೋಧಕೇತರ ವರ್ಗದವರು ಮಕ್ಕಳ ಪೋಷಕರು ಉಪಸ್ಥಿರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.