ಸರ್ವೆ: ಎಸ್.ಜಿ.ಎಂ ಪ್ರೌಢಶಾಲೆಯಲ್ಲಿ ಹೆಚ್.ಐ.ವಿ ಅರಿವು ಮೂಡಿಸುವ ಯಕ್ಷಗಾನ

Puttur_Advt_NewsUnder_1
Puttur_Advt_NewsUnder_1

sarveಪುತ್ತೂರು: ಜಿಲ್ಲಾ ಏಡ್ಸ್ ನಿಯಂತ್ರಣಾ ಘಟಕ ಮಂಗಳೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಸರ್ವೆ, ಭುವನ ಇಕೋ ಕ್ಲಬ್ ಹಾಗೂ ಧನ್ವಂತರಿ ಆರೋಗ್ಯ ಕೂಟದ ವತಿಯಿಂದ ಸರ್ವೆ ಎಸ್.ಜಿ.ಎಂ ಪ್ರೌಢ ಶಾಲೆಯಲ್ಲಿ ಶ್ರೀ ಶಂಭುಲಿಂಗೇಶ್ವರ ಯಕ್ಷ ನಾಟ್ಯ ಮೇಳದವರಿಂದ ಹೆಚ್.ಐ.ವಿ ಅರಿವು ಮೂಡಿಸುವ ಯಕ್ಷಗಾನ ಕಾರ್ಯಕ್ರಮ ಡಿ.2ರಂದು ಭಕ್ತಕೋಡಿ ಎಸ್‌ಜಿಎಂ ಪ್ರೌಢ ಶಾಲೆಯಲ್ಲಿ ನಡೆಯಿತು. ಶಾಲಾ ಮುಖ್ಯಗುರು ಶ್ರೀನಿವಾಸ ಹೆಚ್.ಬಿ ಸ್ವಾಗತಿಸಿದರು. ಯಕ್ಷ ನಾಟ್ಯ ಮೇಳದ ಮುಖ್ಯಸ್ಥ ಪ್ರಶಾಂತ್ ಹೆಗ್ಡೆಯವರನ್ನು ಶಾಲಾ ಆಡಳಿತ ಮಂಡಳಿ ಸದಸ್ಯ ಶಶಿಧರ್ ಎಸ್.ಡಿ ಶಾಲು ಹೊದಿಸಿ ಸನ್ಮಾನಿಸಿದರು. ಇಲಾಖೆಯ ಹಿರಿಯ ಆರೋಗ್ಯ ಸಹಾಯಕಿ ಗಾಯತ್ರಿ ಹಾಗೂ ಆರೋಗ್ಯ ಇಲಾಖಾ ಸಿಬ್ಬಂದಿಗಳು, ಶಾಲಾ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಹೆಚ್.ಐ.ವಿ ರೋಗದ ಸ್ವರೂಪ, ಹರಡುತ್ತಿರುವ ರೀತಿ, ಅದರಿಂದಾಗುವ ದುಷ್ಪರಿಣಾಮ ಗಳು, ಹೆಚ್.ಐ.ವಿಯಿಂದ ದೂರವಿರಲು ತೆಗೆದುಕೊಳ್ಳಬೇಕಾದ ಎಚ್ಚರಿಕಾ ಕ್ರಮಗಳು ಹಾಗೂ ಹೆಚ್.ಐ.ವಿ ಸೋಂಕಿತರನ್ನು ಜೀವನ ವಾಹಿನಿಯಲ್ಲಿ ಜೊತೆಗೂಡಿಸಿಕೊಂಡು ಇರಬೇಕಾದ ರೀತಿಯನ್ನು ಯಕ್ಷಗಾನದ ಮೂಲಕ ಪ್ರಸ್ತುತ ಪಡಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.