Breaking News

ಕುರಿಯ: ಮತಪ್ರವಚನ ಸಮಾರೋಪ-ಸೌಹಾರ್ದ ಸಂಗಮ ಸೌಹಾರ್ದ ಭಾವನೆಯಿಂದ ಸಮಾಜದಲ್ಲಿ ಶಾಂತಿ- ಸಾಜ ರಾಧಾಕೃಷ್ಣ ಆಳ್ವ

Puttur_Advt_NewsUnder_1
Puttur_Advt_NewsUnder_1

 

kuriya* ಮಾನವೀಯ ಸಂಬಂಧ ಕ್ಷೀಣಿಸುತ್ತಿದೆ-ಅಬ್ದುಲ್ ರಹ್ಮಾನ್ ಮುಸ್ಲಿಯಾರ್

*ಸೌಹಾರ್ದತೆಗೆ ಎಲ್ಲರೂ ತಲೆ ಬಾಗಲೇಬೇಕು-ಬೂಡಿಯಾರ್ ರಾಧಾಕೃಷ್ಣ ರೈ

* ಹಕ್ಕುಗಳು ಕಸಿಯಲ್ಪಟ್ಟಾಗ ಸೌಹಾರ್ದತೆ ನಾಶವಾಗುತ್ತದೆ-ಕೂಸಪ್ಪ

* ನಂಬಿಕೆ, ವಿಶ್ವಾಸದಿಂದ ಸಾಮರಸ್ಯ ಸಾಧ್ಯ-ಅಶ್ರಫ್ ಪಣೆಮಜಲು

* ಯುವಕರು ಇತಿಹಾಸವನ್ನು ತಿಳಿಯಬೇಕು-ಬೂಡಿಯಾರ್ ಪುರುಷೋತ್ತಮ ರೈ

* ತನ್ನ ಧರ್ಮವನ್ನು ಸರಿಯಾಗಿ ಅನುಸರಿಸಿ-ಅಬ್ರಹಾಂ ಎಸ್.ಎ

* ಎಲ್ಲ ಧರ್ಮಗಳೂ ಮಾನವೀಯತೆಯನ್ನೇ ಬೋಧಿಸುತ್ತದೆ-ಸಮದ್ ನೆಕ್ಕರೆ

ಪುತ್ತೂರು: ಪ್ರತಿಯೊಬ್ಬರೂ ಸೌಹಾರ್ದತೆಯ ಭಾವನೆ ಹೊಂದಿದ್ದಲ್ಲಿ ಸಮಾಜದಲ್ಲಿ ಎಂದಿಗೂ ಶಾಂತಿ ನೆಲೆಸಲು ಸಾಧ್ಯ ಎಂದು ತಾ.ಪಂ ಸದಸ್ಯ ಸಾಜ ರಾಧಾಕೃಷ್ಣ ಆಳ್ವ ಹೇಳಿದರು. ಅವರು ಈದ್ ಮಿಲಾದ್ ಸಮಿತಿ ಮತ್ತು ಅಲ್‌ನೂರ್ ಯೂತ್ ಫೆಡರೇಶನ್ ಕುರಿಯ ಇದರ ಜಂಟಿ ಆಶ್ರಯದಲ್ಲಿ ಕುರಿಯ ಬಳ್ಳಮಜಲು ನೂರುಲ್ ಹುದಾ ಮದ್ರಸದ ಬಳಿ ಡಿ.15ರಂದು ನಡೆದ ಸೌಹಾರ್ದ ಸಂಗಮದಲ್ಲಿ ಮಾತನಾಡಿದರು.

ಸಮಾಜದಲ್ಲಿ ಯಾವುದೇ ಧರ್ಮದ ಒಬ್ಬ ವ್ಯಕ್ತಿ ತಪ್ಪು ಮಾಡಿದಾಗ ಇಡೀ ಸಮುದಾಯವನ್ನು ಗುರಿಪಡಿಸುವುದದ ಬದಲು ತಪ್ಪು ಮಾಡಿದ ವ್ಯಕ್ತಿಯನ್ನು ಮಾತ್ರ ಹಿಡಿದು ಶಿಕ್ಷಿಸಬೇಕು ಆಗ ನಾಗರಿಕ ಸಮಾಜದಲ್ಲಿ ಯಾವುದೇ ತಪ್ಪು ಕಲ್ಪನೆ ಮೂಡುವುದಿಲ್ಲ ಎಂದರು. ಸೌಹಾರ್ದತೆಗೆ ಹೆಸರುವಾಸಿಯಾಗಿರುವ ಕುರಿಯದಲ್ಲಿ ಮುಂದೆಯೂ ಇದೇ ರೀತಿಯ ವಾತಾವರಣ ಮುಂದುವರಿಯಲಿ ಎಂದು ಅವರು ಆಶಿಸಿದರು. ಬಲ್ಲಮಜಲು, ಕುರಿಯ ನೂರುಲ್ ಹುದಾ ಮದ್ರಸದ ಸದರ್ ಮುಅಲ್ಲಿಂ ಹಾಜಿ ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಮಾತನಾಡಿ ಹಿಂದಿನ ಕಾಲದಲ್ಲಿದ್ದ ಪರಸ್ಪರ ಮಾನವೀಯ ಸಂಬಂಧ ಇಂದು ಇಲ್ಲದಾಗುತ್ತಿದೆ ಇದು ವಿಷಾಧನೀಯ ಎಂದರು. ಎಲ್ಲ ಧರ್ಮದವರೂ ಪರಸ್ಪರ ಅನ್ಯೋನ್ಯತೆಯಿಂದ ಇದ್ದಾಗ ಮಾತ್ರ ಸಮಾಜದಲ್ಲಿ ನೆಮ್ಮದಿ ಸಾಧ್ಯ ಎಂದು ಅವರು ಹೇಳಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಮಾತನಾಡಿ ತಮ್ಮ ಮನಸ್ಸಿನಲ್ಲಿ ವಿಷಬೀಜ ಬಿತ್ತನೆಗೆ ಅವಕಾಶ ಕೊಡದೆ ದೇಶದ ಪ್ರತಿಯೊಬ್ಬ ನಾಗರಿಕರೂ ಸೌಹಾರ್ದತೆಗೆ ತಲೆ ಬಾಗಬೇಕು ಎಂದು ಹೇಳಿದರು. ದ.ಸಂ.ಸ ಸಂಘಟನಾ ಸಂಚಾಲಕ ಎಂ.ಕೂಸಪ್ಪ ಮಾತನಾಡಿ ದೇಶದ ಪ್ರಜೆಗಳಿಗೆ ಸಿಗಬೇಕಾದ ಹಕ್ಕುಗಳು ನಿರಾಕರಿಸಲ್ಪಟ್ಟಾಗ ಮತ್ತು ದೇಶದ ಸಂವಿಧಾನ ನೀಡಿದ ಹಕ್ಕುಗಳು ಕಸಿಯಲ್ಪಟ್ಟಾಗ ಒಗ್ಗಟ್ಟು ನಾಶವಾಗುತ್ತದೆ ಎಂದು ಹೇಳಿದರು. ಪ್ರವಾದಿ ಪೈಗಂಬರ್ 1400 ವರ್ಷಗಳ ಹಿಂದೆಯೇ ಶಾಂತಿ, ಸೌಹಾರ್ದತೆಗಾಗಿ ತನ್ನ ಜಿವನವನ್ನು ಮುಡಿಪಾಗಿಟ್ಟ ವಿಚಾರಗಳು ಚರಿತ್ರೆಗಳಿಂದ ತಿಳಿಯಬಹುದಾಗಿದೆ ಎಂದ ಅವರು ಸೌಹಾರ್ದತೆ ಎಂಬುವುದು ಭಾಷಣದ ವೇದಿಕೆಗಳಿಗೆ ಸೀಮಿತವಾಗದೆ ಪ್ರತೀ ವ್ಯಕ್ತಿಯ ಹೃದಯದಲ್ಲಿ ಮೂಡಿ ಬರಬೇಕಾಗಿದೆ ಎಂದರು. ಪುತ್ತೂರು ಭೂ ನ್ಯಾಯ ಮಂಡಳಿ ಸದಸ್ಯ ಬೂಡಿಯಾರ್ ಪುರುಷೋತ್ತಮ ರೈ ಮಾತನಾಡಿ ಮುಖ್ಯವಾಗಿ ಎಲ್ಲ ಧರ್ಮಗಳ ಯುವಕರು ಇತಿಹಾಸವನ್ನು ತಿಳಿಯಬೇಕು ಆ ಮೂಲಕ ಸಣ್ಣ ಪುಟ್ಟ ವಿಚಾರಗಳಿಗೂ ಹಿಂದೂ, ಮುಸ್ಲಿಂ ಎಂದು ಪ್ರತ್ಯೇಕಿಸಿ ನೋಡುವ ಪ್ರಮೇಯ ನಿಲ್ಲಬೇಕು ಆಗ ನಾಗರಿಕ ಸಮಾಜ ಸುಖವಾಗಿರುತ್ತದೆ ಎಂದರು. ದೇಶದ ಸೌಹಾರ್ದತೆಯ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಮೂಲಕ ಸುಂದರ ಸಮಾಜ ಮತ್ತು ಸುಭದ್ರ ದೇಶ ಕಟ್ಟುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಅವರು ಹೇಳಿದರು. ಪುತ್ತೂರು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ ಎಸ್.ಎ ಮಾತನಾಡಿ ತನ್ನ ಧರ್ಮವನ್ನು ಸರಿಯಾಗಿ ಅನುಸರಿಸುವವ ಇನ್ನೊಂದು ಧರ್ಮವನ್ನು ಎಂದಿಗೂ ಕೀಳಾಗಿ ಕಾಣಲಾರ, ಇನ್ನೊಂದು ಧರ್ಮವನ್ನು ಮತ್ತು ಜನರನ್ನು ನೋಯಿಸುವುದನ್ನು ಯಾವ ಧರ್ಮವೂ ಕಲಿಸಿಲ್ಲ ಎಂದು ಹೇಳಿದರು. ಮದದ್ ಚಾರಿಟೇಬಲ್ ಟ್ರಸ್ಟ್‌ನ ಸಮದ್ ನೆಕ್ಕರೆ ಮಾತನಾಡಿ ಎಲ್ಲ ಧರ್ಮಗಳೂ ಮಾನವೀಯತೆಯನ್ನೇ ಬೋಧಿಸುತ್ತದೆ ಅದನ್ನು ಅಳವಡಿಸಿಕೊಳ್ಳಲು ಮಾತ್ರ ಧರ್ಮದ ಅನುಯಾಯಿಗಳು ವಿಫಲವಾಗಿರುವುದೇ ಸಮಾಜದಲ್ಲಿ ಅಶಾಂತಿ ಘಟಿಸಲು ಕಾರಣವಾಗುತ್ತದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಅಶ್ರಫ್ ಪಣೆಮಜಲುರವರು ಪರಸ್ಪರ ನಂಬಿಕೆ ಮತ್ತು ವಿಶ್ವಾಸದಿಂದ ಎಲ್ಲ ಧರ್ಮದವರು ಜೀವಿಸಿದಾಗ ನಾಗರಿಕ ಸಮಾಜವೇ ಸಾಮರಸ್ಯವನ್ನು ಕಾಣುತ್ತದೆ ಎಂದು ಹೇಳಿ ಶುಭ ಹಾರೈಸಿದರು. ವೇದಿಕೆಯಲ್ಲಿ ಮುಂಡೂರು ನೂರುಲ್ ಇಸ್ಲಾಂ ಮದ್ರಸದ ಅಧ್ಯಕ್ಷ ಯಾಕೂಬ್ ಮುಲಾರ್, ಅಮೆಚೂರ್ ಕಬಡ್ಡಿ ಎಸೋಸಿಯೇಶನ್ ತಾಲೂಕು ಅಧ್ಯಕ್ಷ ಸುರೇಂದ್ರ ರೈ ಬಳ್ಳಮಜಲು, ನಸೀಬ್ ಬೊರ್‌ವೆಲ್ಸ್‌ನ ಅಬೂಬಕ್ಕರ್ ಮುಲಾರ್, ತಾ.ಪಂ ಮಾಜಿ ಸದಸ್ಯ ಸಂಕಪ್ಪ ಓಟೆತ್ತಿಮಾರ್, ಕುರಿಯ ನೂರುಲ್ ಹುದಾ ಮದ್ರಸದ ಕೋಶಾಧಿಕಾರಿ ಬಶೀರ್ ಬೂಡಿಯಾರ್, ಅಮ್ಮುಂಜೆ ರಹ್ಮಾನಿಯಾ ಜುಮಾ ಮಸೀದಿಯ ಕಾರ್ಯದರ್ಶಿ ನಾಸಿರ್ ಇಡಬೆಟ್ಟು, ಮುಂಡೂರು ಖುವ್ವತುಲ್ ಇಸ್ಲಾಂ ಮದ್ರಸದ ಅಧ್ಯಕ್ಷ ಮುಹಮ್ಮದ್ ಉಪಸ್ಥಿತರಿದ್ದರು. ಅಶ್ರಫ್ ಕುರಿಯ ಕಾರ್ಯಕ್ರಮ ನಿರೂಪಿಸಿದರು. ಸೌಹಾರ್ದ ಸಂಗಮದ ಮೊದಲು ಸ್ಥಳೀಯ ಮದ್ರಸ ವಿದ್ಯಾರ್ಥಿಗಳ ಮಿಲಾದ್ ಕಾರ್ಯಕ್ರಮ ಹಾಗೂ ಬುರ್ದಾ ಮಜ್ಲಿಸ್ ನಡೆಯಿತು. ಸೌಹಾರ್ದ ಸಂಗಮದ ಬಳಿಕ ಕಟ್ಟತ್ತಾರು ಜುಮಾ ಮಸೀದಿ ಖತೀಬ್ ದಾವೂದ್ ಸಹದಿಯವರಿಂದ ಧಾಮಿಕ ಮತಪ್ರವಚನ ನಡೆಯಿತು. ಡಿ.೧೪ರಂದು ಬಾಯಾರು ಮುದರ್ರಿಸ್ ಆದಂ ದಾರಿಮಿ ಮತ ಪ್ರವಚನ ನೀಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.