ಅರಿಯಡ್ಕ ಎಂಡೆಸಾಗು ಅಣ್ಣಪ್ಪ ಪಂಜುರ್ಲಿ, ಪರಿವಾರ ದೈವಗಳ ಪುನಃ ಪ್ರತಿಷ್ಠೆ, ನೇಮೋತ್ಸವ

ariyadka3 ariyadka1 ariyadka2ಪುತ್ತೂರು: ಅರಿಯಡ್ಕ ಗ್ರಾಮದ ಎಂಡೆಸಾಗು ಸ್ವಾಮಿನಗರದಲ್ಲಿರುವ ಶ್ರೀ ಅಣ್ಣಪ್ಪ ಪಂಜುರ್ಲಿ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ದೈವಗಳ ಪುನಃ ಪ್ರತಿಷ್ಠೆ ಮತ್ತು ನೇಮೋತ್ಸವವು ದ.18ರಿಂದ ಆರಂಭಗೊಂಡು 20 ರತನಕ ನಡೆಯಿತು. ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ಆಶೀರ್ವಾದದೊಂದಿಗೆ, ಬ್ರಹ್ಮಶ್ರೀ ಶಿವಪ್ರಸಾದ ಕಡಮಣ್ಣಾಯ ಕಾವುರವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ,ವೈಧಿಕ ಕಾರ‍್ಯಕ್ರಮಗಳು ನಡೆಯಿತು. ದ.18 ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಪ್ರಸಾದ ಶುದ್ಧಿ, ನೂತನ ಬಿಂಬಗಳಿಗೆ ಚೈತನ್ಯ ಲಯನ ಕ್ರಿಯೆ, ಪಂಚಗವ್ಯ ಶುದ್ಧಿ, ವಾಸ್ತುಹೋಮ, ವಾಸ್ತುಬಲಿ ನಡೆಯಿತು.19 ರಂದು ಬೆಳಿಗ್ಗೆ ಪುರಸ್ವರ ಗಣಪತಿ ಹೋಮ, ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ಮುಡಿಪು ಪೂಜೆ, ಶ್ರೀ ಸತ್ಯನಾರಾಯಣ ಪೂಜೆ, ದೈವಗಳ ತಂಬಿಲ, ಮಹಾಪೂಜೆ, ಪ್ರಸಾದ ವಿತರಣೆ ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ಶ್ರೀ ದೈವದ ಭಂಡಾರ ತೆಗೆದು ಅನ್ನಸಂತರ್ಪಣೆ, ಗುಳಿಗ ಕಲ್ಲುರ್ಟಿ ದೈವಗಳ ನೇಮ ನಡೆಯಿತು. 20 ರಂದು ಬೆಳಿಗ್ಗೆ ಡೊಂಬಯ್ಯ ಕಾಪೆಜಾಲು ಇವರಿಂದ ಶ್ರೀಧರ್ಮದೈವ ಅಣ್ಣಪ್ಪ ಪಂಜುರ್ಲಿ ದೈವದ ನೇಮ, ಪ್ರಸಾದ ವಿತರಣೆ, ಶ್ರೀ ಕೊರಗಜ್ಜ ದೈವದ ನೇಮ ನಡೆದು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸುಮಾರು ಐನ್ನೂರಕ್ಕೂ ಅಧಿಕ ಮಂದಿಗೆ ಅನ್ನಸಂತರ್ಪಣೆ ನಡೆಯಿತು. ಎಂಡೆಸಾಗು ಸ್ವಾಮಿನಗರದ ನೇಮು ಅಜಿಲ ಮತ್ತು ಸಹೋದರರು ಭಕ್ತಾಧಿಕಗಳನ್ನು ಬರಮಾಡಿಕೊಂಡು ಸತ್ಕರಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.