Breaking News

ಒತ್ತುವರಿ ತೆರವು: ಗ್ರಾ.ಪಂ ನಿರ್ಧಾರದ ವಿರುದ್ಧ ವರ್ತಕರ ಸಭೆ ಮೂಡದ ಒಮ್ಮತ: ಡಿ.22ರಂದು ಮತ್ತೆ ಸಭೆ ಕರೆಯಲು ನಿರ್ಧಾರ

Puttur_Advt_NewsUnder_1
Puttur_Advt_NewsUnder_1

 

varthakara-sabheಉಪ್ಪಿನಂಗಡಿ: ರಸ್ತೆಯಂಚಿನವರೆಗೆ ಅಂಗಡಿಯ ಛಾವಣಿಯನ್ನು ಇಳಿಸಿಬಿಟ್ಟ ಅಂಗಡಿ ಮಾಲಕರಿಗೆ ಅದನ್ನು ತೆರವುಗೊಳಿಸಲು ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸೂಚಿಸಿದ್ದು, ಈ ಹಿನ್ನೆಲೆಯಲ್ಲಿ ಬುಧವಾರ ವರ್ತಕರ ಸಭೆ ಕರೆದು ಈ ಬಗ್ಗೆ ಚರ್ಚಿಸಲಾಯಿತಾದರೂ, ಸಭೆಯಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಡಿ.22ರಂದು ಮತ್ತೊಂದು ಸಭೆ ಕರೆದು ಒಮ್ಮತದ ಅಭಿಪ್ರಾಯಕ್ಕೆ ಬರಲು ನಿರ್ಧರಿಸಲಾಯಿತು.

ಉಪ್ಪಿನಂಗಡಿಯ ಸುವ್ಯ ಹಾಲ್‌ನಲ್ಲಿ ಕರೆಯಲಾದ ಉಪ್ಪಿನಂಗಡಿ ವರ್ತಕ ಸಂಘದ ಕಾರ್ಯಕಾರಿ ಸಭೆಯಲ್ಲಿ ವರ್ತಕ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ಟಾ ಮಾತನಾಡಿ, ಪಂಚಾಯತ್ ಆಡಳಿತದೊಂದಿ ಹಿತಾಸಕ್ತಿಯಿಂದ  ಸ್ವಾಗತಾರ್ಹ. ಆದರೆ ಸ್ವತಹ ಪಂಚಾಯತ್ ಆಡಳಿತ ನಿಯಮವನ್ನು ಉಲ್ಲಂಸಿಕೊಂಡು, ಜನತೆಗೆ ಮಾತ್ರ ನಿಯಮ ಪಾಲನೆ ಮಾಡಿ ಎನ್ನುವುದರಲ್ಲಿ ಅರ್ಥವಿಲ್ಲ. ನೈತಿಕತೆ ಬೋಧಿಸುವಾತ ಮೊದಲು ತಾನು ನೈತಿಕ ನೆಲೆಗಟ್ಟಿನಲ್ಲಿ ಕಾರ್ಯನಿರ್ವಹಿಸುವಂತವನಾಗಿರಬೇಕು ಎಂದು  ಪ್ರತಿಪಾದಿಸಿದರು.  ಪಂಚಾಯತ್ ಕ್ರಮವನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ದಾವೆ ದಾಖಲಿಸೋಣ ಎಂಬ ಸಲಹೆ ಸಭೆಯಲ್ಲಿ ಬಂದಿತ್ತಾದರೂ, ಕಳೆದ 50 ವರ್ಷಗಳ ಹಿಂದಿನ ಕಟ್ಟಡ ರಚನೆಯ ವೇಳೆ ಪಾಲನೆಯಾಗುತ್ತಿದ್ದ ನಿಯಮವನ್ನು ಬಳಿಕದ ದಿನಗಳಲ್ಲಿ ಉಲ್ಲಂಸಿ ರಸ್ತೆ ಅಂಚಿನ ವರೆಗೆ ಅಂಗಡಿ ಕಟ್ಟಡಗಳನ್ನು ವಿಸ್ತರಿಸಿ ಸ್ವತಹ ಅಂಗಡಿ ಕಟ್ಟಡಗಳ ಮಾಲಕರೇ ತಪ್ಪೆಸಗಿದ್ದು, ಒಂದು ವೇಳೆ ಶೀಟ್ ತೆರವು ಸೂಚನೆಯನ್ನು ಪ್ರಶ್ನಿಸಿ ದಾವೆ ಹೂಡಿ ಇಡೀ ಕಟ್ಟಡವನ್ನೇ ತೆರವುಗೊಳಿಸುವ ತೀರ್ಪು ಬರುವ ಸಾಧ್ಯತೆಯನ್ನೂ ಅಂದಾಜಿಸಿಕೊಂಡೇ ಹೆಜ್ಜೆ ಇರಿಸಬೇಕೆಂದು ಸದಸ್ಯರಿಂದ  ಸಲಹೆ ಬಂದಿತು.

ಒಟ್ಟಾರೆ ಪಂಚಾಯತ್ ಕ್ರಮವನ್ನು ಒಕ್ಕೊರಳಿನಿಂದ ಖಂಡಿಸಲಾಗದೆ, ಉಪ್ಪಿನಂಗಡಿಯ ಸಮಸ್ತ ವರ್ತಕರ  ಸಭೆಯನ್ನು ಡಿ 22 ರ ಗುರುವಾರ ಸಾಯಂಕಾಲ 4.30 ಕ್ಕೆ ಉಪ್ಪಿನಂಗಡಿ ಸರಕಾರಿ ಮಾದರಿ ಶಾಲಾ ಸಭಾಂಗಣದಲ್ಲಿ ಸಭೆ ಕರೆದು ಒಮ್ಮತದ ನಿರ್ಧಾರ ತಳೆಯುವುದೆಂದು ನಿರ್ಣಯಿಸಲಾಯಿತು. ಸಭೆಯಲ್ಲಿ ವರ್ತಕ ಸಂಘದ ಪೂರ್ವಾಧ್ಯಕ್ಷ ಕಿಶೋಕ್ ಅಧಿಕಾರಿ, ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಯೂನಿಕ್, ಹಾರೂನ್ ರಶೀದ್ ಅಗ್ನಾಡಿ, ರಾಜ್ ಗೋಪಾಲ ಭಟ್ ಕೈಲಾರ್, ಗಣೇಶ್ ಶೆಣೈ, ಝಕಾರಿಯಾ ಕೊಡಿಪ್ಪಾಡಿ, ಸುರೇಶ್ ಜಿ., ಇಸ್ಮಾಯಿಲ್ ಇಕ್ಬಾಲ್, ಪೂವಪ್ಪ ಗೌಡ, ಲೋಕೇಶ್ ಆಚಾರ್ಯ, ಜಯಂತ ಪೋರೋಳಿ, ಉದಯ್ ಕುಮಾರ್ ಉಪಸ್ಥಿತರಿದ್ದರು.

ಪಂಚಾಯತ್ ಯಾಕೆ ನಿಯಮ ಪಾಲನೆ ಮಾಡುತ್ತಿಲ್ಲ?

ಈಗಾಗಲೇ ಮಿನಿ ವಿಧಾನ ಸೌಧ ಎಂಬಂತೆ ಬಿಂಬಿಸಲ್ಪಟ್ಟು ನಿರ್ಮಾಣ ಗೊಳ್ಳುತ್ತಿರುವ ಉಪ್ಪಿನಂಗಡಿಯ ಗ್ರಾಮ ಪಂಚಾಯತ್ ಕಟ್ಟಡವನ್ನು ಯಾವುದೇ ಸೆಟ್ ಬ್ಯಾಕ್ ಇಲ್ಲದೆ, ರೋಡ್ ಮಾರ್ಜಿನ್  ಉಳಿಸಿಕೊಳ್ಳದೆ, ವಾಹನ ಪಾರ್ಕಿಂಗ್ ವ್ಯವಸ್ಥೆಯನ್ನೂ ಕಲ್ಪಿಸದೆ ನಿರ್ಮಿಸಲಾಗುತ್ತಿದೆ. ಅಲ್ಲದೇ, ಹಳೇ ಬಸ್ ನಿಲ್ದಾಣದಲ್ಲಿ ಪಂಚಾಯತ್ ಆಡಳಿತ ನಿರ್ಮಿಸಿದ ವಾಣಿಜ್ಯ ಕಟ್ಟಡವನ್ನು ರಸ್ತೆಯಂಚಿನಲ್ಲಿ ನಿರ್ಮಿಸಿದ್ದು, ಜನತೆಗೆ ಬೋಧಿಸುವ ನಿಯಮವನ್ನು ಪಂಚಾಯತ್ ಆಡಳಿತ ಸ್ವಯಂ ಪಾಲನೆ ಯಾಕೆ ಮಾಡುತ್ತಿಲ್ಲ ಎಂಬ ಪ್ರಶ್ನೆಗಳು ಸಭೆಯಲ್ಲಿ ಕೇಳಿಬಂತಲ್ಲದೆ,   ಈ ದಿಶೆಯಲ್ಲಿ ಕಾನೂನು ಹೋರಾಟ ನಡೆಸಬಹುದೇ ಎಂಬಿತ್ಯಾದಿ ಚರ್ಚೆ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.