ಬೆಟ್ಟಂಪಾಡಿ: ನವೀಕೃತ ಭಜನಾ ಮಂದಿರ ಲೋಕಾರ್ಪಣೆ ‘ಸರ್ವರ ಸುಖ ಬಯಸುವುದು ಹಿಂದೂ ಧರ್ಮದ ವಿಶೇಷತೆ ‘

Puttur_Advt_NewsUnder_1
Puttur_Advt_NewsUnder_1

 

7

ನಿಡ್ಪಳ್ಳಿ- ಇನ್ನೊಂದು ಧರ್ಮಕ್ಕೆ ಕೇಡು ಬಯಸದ ಧರ್ಮ ನಮ್ಮ ಹಿಂದೂ ಧರ್ಮ. ಜಗತ್ತಿನ ಎಲ್ಲಾ ಪ್ರಾಣಿ, ಪಕ್ಷಿ.ಜಲಚರಾಚರಗಳು ಮತ್ತು ಇತರ ಎಲ್ಲಾ ಧರ್ಮದವರು ಸುಖಕರವಾಗಿರಲೆಂದು ಬಯಸಿ ಯಾವುದೇ ದ್ರೋಹ ಬಗೆಯದೆ ಇರುವುದೆ ಹಿಂದೂ ಧರ್ಮದ ವಿಶೇಷತೆ ಎಂದು ಕುಂಟಾರು ರವೀಶ ತಂತ್ರಿಗಳ ಶಿಷ್ಯ ವೇದಮೂರ್ತಿ ಮಂಜುನಾಥ ಉಡುಪ ನುಡಿದರು.

ಅವರು ರೆಂಜ ಬೆಟ್ಟಂಪಾಡಿಯಲ್ಲಿ ಡಿ.೨೧ ರಂದು ನಡೆದ ಶ್ರೀ ಅಯ್ಯಪ್ಪ ಸ್ವಾಮಿಯ ನವೀಕೃತ ಭಜನಾ ಮಂದಿರದ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಮಧ್ಯಾಹ್ನ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿದರು. ಭಜನಾ ಮಂದಿರಗಳು ಇಂದು ಪ್ರಸ್ತುತವಾಗಿದೆ. ಯುವ ಜನರ ಮನಸ್ಸನ್ನು ಅರಳಿಸುವ ವಿಷಯದ ಬದಲು ಮನಸ್ಸನ್ನು ಕೆರಳಿಸುವ ಘಟನೆ ನಡೆಯುತ್ತಿರುವುದು ದುರಂತ. ಭಾರತ ಇಡೀ ವಿಶ್ವಕ್ಕೇ ಮಾರ್ಗದರ್ಶಕವಾಗುತ್ತಿದೆ. ಆದ್ದರಿಂದ ದೇವರಲ್ಲಿ ನಂಬಿಕೆ ಭಕ್ತಿಯಿಂದ ಪೂಜಿಸಿ ಕೃತಾರ್ಥರಾಗುವ ಎಂದು ಹೇಳಿ ಶುಭಹಾರೈಸಿದರು.

  ವೇದಿಕೆಯಲ್ಲಿ ಭಜನಾ ಮಂದಿರದ ಗೌರವಾಧ್ಯಕ್ಷ ಕರುಣಾಕರ ಶೆಟ್ಟಿ ಕೊಮ್ಮಂಡ, ಅಧ್ಯಕ್ಷ ಶೇಷಪ್ಪ ರೈ ಮೂರ್ಕಾಜೆ, ಉದ್ಯಮಿ ನಾಗೇಶ ರೈ ಮೂರ್ಕಾಜೆ ಉಪಸ್ಥಿತರಿದ್ದರು. ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಮುಖ್ಯಗುರು ರಾಜೇಶ್ ನೆಲ್ಲಿತ್ತಡ್ಕ ಸ್ವಾಗತಿಸಿ ನಿರೂಪಿಸಿದರು.

ಡಿ.೨೦ರಂದು ರಾತ್ರಿ ಪುಣ್ಯಾಹವಾಚನ. ಸ್ಥಳ ಶುದ್ದಿ, ರಾಕ್ಷೊಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ ಮುಂತಾದ ಕಾರ್ಯಕ್ರಮ ನಡೆಯಿತು. ಧಾರ್ಮಿಕ ವಿಧಿ ವಿಧಾನಗಳನ್ನು ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಇವರ ನೇತೃತ್ವದಲ್ಲಿ ನಡೆಯಿತು. ಡಿ.೨೧ರಂದು ಬೆಳಿಗ್ಗೆ ಗಣಪತಿ ಹೋಮ, ಬ್ರಹ್ಮ ಕಲಶ ಪೂಜೆ ನಂತರ ಪ್ರತಿಷ್ಟೆ ಮಹಾಪೂಜೆ ನಂತರ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಸಂಜೆ ಶ್ರೀ ಮಹಾಲಿಂಗೇಶ್ವರ ದೇವಾಲಯದಿಂದ ದಿವ್ಯಜ್ಯೋತಿ ಭಜನಾ ಮಂದಿರಕ್ಕೆ ಆಗಮಿಸಿತು. ರಾತ್ರಿ ಸಭಾಕಾರ್ಯಕ್ರಮ ನಡೆದ ನಂತರ ಯಕ್ಷಗಾನ ನಾಟ್ಯ ವೈಭವ ನಡೆಯಿತು. ಭಜನಾ ಮಂದಿರದ ಸಂಚಾಲಕ ಪಿ.ಕೃಷ್ಣಪ್ಪ ಗೌಡ ರೆಂಜ, ಕಾರ್ಯದರ್ಶಿ ರವಿನಾಥ ಕೋನಡ್ಕ, ಕೋಶಾಧಿಕಾರಿ ರಮೇಶ್ ಪೂಜಾರಿ ಕುಕ್ಕುಪುಣಿ, ಟ್ರಸ್ಟಿಗಳಾದ ಸೇಸಪ್ಪ ಪೂಜಾರಿ ಇರ್ದೆ, ಜಯರಾಮ ರೈ ಅನಾಜೆ, ಶಶಿಕುಮಾರ್ ರೈ ಬಾಲ್ಯೊಟ್ಟು, ಶಂಕರನಾರಾಯಣ ರಾವ್ ಪಾರ, ದುಗ್ಗಪ್ಪ ನಾಯ್ಕ ಕಜೆ, ಆರ್.ಬಿ.ಸವರ್ಣ ಅಜ್ಜಿಕಲ್ಲು, ಬಾಬು ನಾಯ್ಕ ಚೆಲ್ಯಡ್ಕ, ಅಯ್ಯಪ್ಪ ವ್ರತಧಾರಿಗಳು, ಭಕ್ತಾಭಿಮಾನಿಗಳು ಪಾಲ್ಗೊಂಡರು.

priyadarshini

89

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.