ಎರಡನೇ ದಾಂಪತ್ಯಕ್ಕೆ ಕಾಲಿರಿಸಿದ ಮುತ್ತಪ್ಪ ರೈ

Puttur_Advt_NewsUnder_1
Puttur_Advt_NewsUnder_1

10

ಪುತ್ತೂರು : ಜಯಕರ್ನಾಟಕ ಸಂಘಟನೆಯ ಸ್ಥಾಪಕ ಅಧ್ಯಕ್ಷರಾದ ಉದ್ಯಮಿ ಪುತ್ತೂರಿನ ಎನ್. ಮುತ್ತಪ್ಪ ರೈ ಯವರು ಬೆಂಗಳೂರಿನ ಉದ್ಯಮಿ  46 ವರ್ಷದ  ಅನುರಾಧರವರನ್ನು ಬಿಡದಿಯ ತನ್ನ ನಿವಾಸದಲ್ಲಿ ಡಿ. 19ರಂದು ಶಾಸ್ತ್ರೋಕ್ತವಾಗಿ ವಿವಾಹ ಮಾಡಿಕೊಂಡು ಎರಡನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ಬೆಂಗಳೂರಿನ ಬಿಡದಿಯ ತನ್ನ ನಿವಾಸದಲ್ಲಿ ತಾನು ಪ್ರತಿನಿತ್ಯ ಆರಾಧಿಸುತ್ತಿರುವ ಆರಾಧ್ಯಮೂರ್ತಿ, ಕುಲದೇವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಸಮ್ಮುಖದಲ್ಲಿ ಹಾರ ಬದಲಾಯಿಸಿಕೊಳ್ಳುವುದರ ಮೂಲಕ ಮಾಂಗಲ್ಯ ಕಟ್ಟಿ ಸರಳ ವಿವಾಹ ಮಾಡಿಕೊಂಡರು.

ಮುತ್ತಪ್ಪ ರೈಯವರ ಪತ್ನಿ ರೇಖಾ ರೈ ರವರು 2013ರಲ್ಲಿ ಅನಾರೋಗ್ಯದಿಂದ ಸಿಂಗಾಪುರದ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದರು. ಅನುರಾಧರವರ ಪತಿ 7 ವರ್ಷಗಳ ಹಿಂದೆ ವಾಹನ ಅಪಘಾತದಲ್ಲಿ ನಿಧನರಾಗಿದ್ದರು. ಇವರಿಬ್ಬರಿಗೂ ಇಬ್ಬಿಬ್ಬರು  ಮಕ್ಕಳಿದ್ದಾರೆ. ಮುತ್ತಪ್ಪ ರೈಯವರ ಕಿರಿಯ ಪುತ್ರ ರಿಕಿ ರೈಯವರ ವಿವಾಹ ವಾರದ ಹಿಂದೆ ಶ್ರೀ ಕ್ಷೇತ್ರ ಸುಬ್ರಹ್ಮಣ್ಯದಲ್ಲಿ ನಡೆದಿದೆ.

ಮಕ್ಕಳ ಮೇಲಿನ ಜವಾಬ್ದಾರಿಯನ್ನು ಈರ್ವರೂ ಸಮರ್ಥವಾಗಿ ನಿಭಾಯಿಸಿದ್ದು, ಈರ್ವರೂ ಒಂಟಿಯಾಗಿರುವ ಹಿನ್ನೆಲೆಯಲ್ಲಿ ಬದುಕನ್ನು ಜಂಟಿಯಾಗಿ ಸಂತೋಷದಿಂದ ಮತ್ತು  ನೆಮ್ಮದಿಯಿಂದ ಕಳೆಯುವುದಕ್ಕಾಗಿ ವಿಧವೆಯಾಗಿರುವ ಅನುರಾಧರವರನ್ನು ಬಾಳ ಸಂಗಾತಿಯನ್ನಾಗಿ ಸ್ವೀಕರಿಸಿರುವುದಾಗಿ ಮುತ್ತಪ್ಪ ರೈಯವರು ‘ಸುದ್ದಿ’ಗೆ ತಿಳಿಸಿದ್ದಾರೆ.

ಕಳೆದ 3 ವರ್ಷಗಳಿಂದ ರೈ ಕುಟುಂಬದೊಂದಿಗೆ ಅನುರಾಧರವರು ಆತ್ಮೀಯತೆಯನ್ನು ಹೊಂದಿದ್ದು, ವಿಧವೆಯನ್ನು ಮದುವೆಯಾಗುವ ಮೂಲಕ ರೈಯವರು ಸಮಾಜಕ್ಕೆ  ಆದರ್ಶನೀಯ ಸಂದೇಶವನ್ನು ನೀಡಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.