ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್‌ನಿಂದ ಉದ್ಯಮಶೀಲಾ ತರಬೇತಿ ಕಾರ್ಯಾಗಾರ

Puttur_Advt_NewsUnder_1
Puttur_Advt_NewsUnder_1

saraswathiಪುತ್ತೂರು: ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ನಿ. ಪುತ್ತೂರು ಇದರ ಸಹ ಸಂಸ್ಥೆಯಾದ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ಮತ್ತು ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಡಿ. ದೇವರಾಜು ಅರಸು ಹಿಂದುಳಿದ ಅಭಿವೃದ್ಧಿ ನಿಗಮದ ಫಲಾನುಭವಿಗಳಿಗೆ ಉದ್ಯಮಶೀಲಾ ತರಬೇತಿ ಕಾರ್ಯಾಗಾರವು ದರ್ಬೆಯ ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘದಲ್ಲಿ ನಡೆಯಿತು.

ಕಾರ್ಯಾಗಾರದ ಉದ್ಘಾಟಿಸಿ ಮಾತನಾಡಿದ ಹಾರ್ದಿಕ್ ಹರ್ಬಲ್ಸ್‌ನ ಸಿ.ಇ.ಓ ಮುರಳೀಧರ್ ಕೆ. ಉದ್ಯಮದಲ್ಲಿ ಸತತ ಪರಿಶ್ರಮ, ನಿರ್ಧಿಷ್ಟ ಗುರಿ, ಆರ್ಥಿಕ ಶಿಸ್ತು ಹಾಗೂ ನಾವು ತಯಾರಿಸುವ ವಸ್ತುಗಳ ಗುಣಮಟ್ಟವನ್ನು ಕಾಪಾಡಿಕೊಂಡು ನಗುಮುಖದ ಸೇವೆಯನ್ನು ನೀಡಬೇಕು. ಇದರಿಂದ ಉದ್ಯಮ ಬೆಳೆಯಲಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿಯ ಉಪಪ್ರಧಾನ ವ್ಯವಸ್ಥಾಪಕಿ ಭವಾನಿ ಪ್ರಭುರವರು ಮಾತನಾಡಿ, ಯಾವುದೇ ಕೆಲಸ ಮಾಡಬೇಕಾದರೆ ನಮಗೆ ಅಡೆ-ತಡೆಗಳು ತೊಂದರೆಗಳು ಎದುರಾಗುತ್ತವೆ. ಆದರೆ ನಾವು ಯಶಸ್ಸನ್ನು ಗಳಿಸಬೇಕಾದರೆ ಸಕಾರಾತ್ಮಕ ಚಿಂತನೆಯೊಂದಿಗೆ  ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಶುಭಹಾರೈಸಿದರು.  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿಯ ನಿರ್ದೇಶಕ ಸರ್ವೋತ್ತಮ ಬೋರ್ಕರ್, ನಮ್ಮ ಜೀವನದ ಶಿಲ್ಪಿಗಳು ನಾವೇ, ಉದ್ಯಮದಲ್ಲಿ ಸ್ಪಷ್ಟವಾದ ಗುರಿ, ಆತ್ಮವಿಶ್ವಾಸ, ಹಣಕಾಸಿನ ವಿಷಯದಲ್ಲಿ  ಶಿಸ್ತಿನ ನಿರ್ವಹಣೆ, ಗ್ರಾಹಕರೇ ಉದ್ಯಮದ ಜೀವಾಳವೆಂಬುದನ್ನು ಅರಿತು ಸೇವೆ ನೀಡುವುದು ಮುಖ್ಯ, ಇದರೊಂದಿಗೆ ದೇಶದ ಆಭಿವೃದ್ಧಿಗೆ ನಮ್ಮದೇ ಆದಂತಹ ಕೊಡುಗೆ ನೀಡಬೇಕು ಎಂದರು.

ಕಾರ್ಯಾಗಾರದಲ್ಲಿ ಡಿ ದೇವರಾಜ ಅರಸು ಹಿಂ.ವ.ಅ. ನಿಗಮದ ಜಿಲ್ಲಾ ವ್ಯವಸ್ಥಾಪಕ ರಾಮಮೂರ್ತಿ ಮಯ್ಯರವರು ಇಲಾಖೆಯ ವಿವಿಧ ಯೋಜನೆಗಳ ಕುರಿತ ಮಾಹಿತಿಯನ್ನು ನೀಡಿದರು.ಜ್ಞಾನಜ್ಯೋತಿ ಟ್ರಸ್ಟ್‌ನ ಹಿರಿಯ ಕೌನ್ಸ್‌ಲರ್ ಕೆ ಶಿವಶಂಕರ್‌ರವರು ಮುದ್ರಾ ಯೋಜನೆ ಹಾಗೂ ಕ್ಯಾಶ್‌ಲೆಸ್ ವ್ಯವಹಾರಗಳ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲಾ ಕೈಗಾರಿಕಾ ಕೇಂದ್ರ, ಮಂಗಳೂರು ಇದರ ಉಪನಿರ್ದೇಶಕ ಅರವಿಂದ ಬಾಲೇರಿಯವರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳು, ಬ್ಯಾಂಕ್‌ನಿಂದ ದೊರೆಯುವ ವಿವಿಧ ಸೌಲಭ್ಯಗಳ  ಕುರಿತು ಮಾಹಿತಿ ನೀಡಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಹಿರಿಯ ಅಧಿಕಾರಿ  ಸತೀಶ್ ಮೊಬೆನ್‌ರವರು ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಸುಜಾತ ಪ್ರಾರ್ಥಿಸಿ, ಅರವಿಂದ ಬಾಲೇರಿ ಸ್ವಾಗತಿಸಿದರು,  ಸತೀಶ್ ಮೊಬೆನ್ ವಂದಿಸಿದರು, ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ಬಿಪಿನ್ ಚಂದ್ರ ನಿರೂಪಿಸಿದರು. ಚಂದ್ರಶೇಖರ್ ಸಹಕರಿಸಿದರು, ಕಾರ್ಯಾಗಾರದಲ್ಲಿ 70 ಮಂದಿ ಪಾಲ್ಗೊಂಡಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.