ಕಡಬಕ್ಕೆ ಶ್ರೀ ಆದಿಚುಂಚನಗಿರಿ ಕ್ಷೇತ್ರದ ಡಾ| ಶ್ರೀ ನಿರ್ಮಾಲಾನಂದನಾಥ ಮಹಾಸ್ವಾಮೀಜಿ ಭೇಟಿ ಕಾರ್‍ಯಕ್ರಮ-ಪೂರ್ವಭಾವಿ ಸಭೆ

ಕಡಬ: ಡಿ.28ರಂದು ಶ್ರೀ ಆದಿಚುಂಚನಗಿರಿ ಕ್ಷೇತ್ರದ 72ನೇ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಕಡಬ ವಲಯ ಗ್ರಾಮಗಳ ಭೇಟಿ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜಾ ಕಾರ್‍ಯಕ್ರಮಕ್ಕೆ ಭೇಟಿ ನೀಡುವ ಕಾರ್‍ಯಕ್ರಮದ ಬಗ್ಗೆ ಕಡಬ ಒಕ್ಕಲಿಗ ಗೌಡ ಸೇವಾ ಸಂಘ, ಯುವ ಒಕ್ಕಲಿಗ ಗೌಡ ಸೇವಾ ಸಂಘ, ಹಾಗೂ ಗೌಡ ಮಹಿಳೆಯರ ಉಪಸ್ಥಿತಿಯಲ್ಲಿ ಪೂರ್ವಭಾವಿ ಸಭೆಯು ಕಡಬ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಡಿ.20ರಂದು ನಡೆಯಿತು.

ಸಭೆಯು ಕಡಬ ವಲಯ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ಗೌಡ ಕೋಡಿಬೈಲು ಅಧ್ಯಕ್ಷತೆಯಲ್ಲಿ ನಡೆದು ಕಾರ್‍ಯಕ್ರಮದ ತಯಾರಿ ಬಗ್ಗೆ, ಸ್ವಾಮೀಜಿಯವರಿಗೆ ಅದ್ದೂರಿ ಸ್ವಾಗತ ನೀಡುವ ವಿಚಾರದಲ್ಲಿ ಎಲ್ಲರ ಪಾಲ್ಗೊಳ್ಳುವಿಕೆಯ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಗೌರವಾಧ್ಯಕ್ಷ ತಮ್ಮಯ್ಯ ಗೌಡ ಕುತ್ಯಾಡಿ, ಗೌರವ ಸಲಹೆಗಾರರಾದ ಜನಾರ್ದನ ಗೌಡ ಪಣೆಮಜಲು, ಶಿವರಾಮ ಎಂ.ಎಸ್. ಸ್ವಾಗತ ಸಮಿತಿಯ ಸಂಚಾಲಕ ಸೀತಾರಾಮ ಗೌಡ ಪೊಸವಳಿಕೆ, ನಾರಾಯಣ ಎನ್. ಬಲ್ಯ, ಸಾಂತಪ್ಪ ಗೌಡ ಪಿಜಕಳರವರು, ಮಂಜುನಾಥ ಕೊಲಂತ್ತಾಡಿ ಸಲಹೆ ಸೂಚನೆ ನೀಡಿದರು. ಪ್ರಮುಖರಾದ ಮೋನಪ್ಪ ಗೌಡ ನಾಡೋಳಿ, ಮೇದಪ್ಪ ಗೌಡ ನವದುರ್ಗಾ, ನಿವೃತ್ತ ಶಿಕ್ಷಕ ದೇವಣ್ಣ ಗೌಡ ನೆಲ್ಲ ಉಪಸ್ಥಿತರಿದ್ದರು.

ಮಹಿಳೆಯರಿಗೆ ವಿಶೇಷ ಜವಾಬ್ದಾರಿ: ಕಾರ್‍ಯಕ್ರಮದಲ್ಲಿ ಮಹಿಳೆಯರು ವಿಶೇಷ ಜವಾಬ್ದಾರಿಗಳನ್ನು ನಿರ್ವಹಿಸಬೇಕೆಂದು ಸಲಹೆ ವ್ಯಕ್ತವಾಯಿತು. ಕಡಬ ಗ್ರಾ.ಪಂ. ಮಾಜಿ ಅಧ್ಯಕ್ಷೆ ನೀಲಾವತಿ ಶಿವರಾಮ  ಎಂ.ಎಸ್ ಮಾತನಾಡಿದರು. ಐತ್ತೂರು ಗ್ರಾ.ಪಂ. ಮಾಜಿ ಅಧ್ಯಕ್ಷೆಯರಾದ ಹರ್ಷಮ್ಮ, ಶ್ಯಾಮಲ, ನಿವೃತ್ತ ಮುಖ್ಯ ಶಿಕ್ಷಕಿ ರುಕ್ಮಿಣಿ ಪಿಜಕಳ, ಓಂತ್ರಡ್ಕ ಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ವಿಮಲ, ಕಡಬ ಪ.ಪೂ. ಕಾ. ಉಪನ್ಯಾಸಕಿ ಲಾವಣ್ಯ, ಪ್ರಮುಖರಾದ ಗೀತಾ ಕೇವಳ, ಪ್ರೇಮ ಕಳಾರ, ಯಶೋಧಾ ಮುಳಿಯ, ವೇದಾವತಿ ಅಡೀಲು ಮೂರಾಜೆ, ಚಂದ್ರಾವತಿ ಕುದ್ರಡ್ಕ, ಗಾಯತ್ರಿ ಎಸ್.ಆರ್, ವಾರಿಜಾಕ್ಷಿ ಅಡೀಲು, ವಿಜಯ ಕಡಬ, ಪುಷ್ಪಾವತಿ ಪಾದೆ ಮಜಲು, ರಾಜೀವಿ ಐತ್ತೂರು, ಜಯಲಕ್ಷ್ಮೀ ಐತ್ತೂರು, ದೇವಕಿ ಕಂಪ, ಪುಷ್ಪಾವತಿ ಕುತ್ಯಾಡಿ, ವೀಣಾ ಕೇವಳ, ನಿತ್ಯಾಲತಾ ಸಂಕೇಶ ಸೇರಿದಂತೆ ಹಲವರು ಉಪಸ್ಥಿತರಿದ್ದು ವಿವಿಧ ಸಲಹೆ ಸೂಚನೆ ನೀಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.