ದ.24,25:  ಗಾನ ಸರಸ್ವತಿ ಸಂಗೀತ ಕಲಾ ಶಾಲೆಯ 28ನೇ ವಾರ್ಷಿಕೋತ್ಸವ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನೆಹರುನಗರ ಗಾನ ಸರಸ್ವತಿ ಸಂಗೀತ ಕಲಾ ಶಾಲೆಯ 28ನೇ ವಾರ್ಷಿಕೋತ್ಸವ ದ.24 ಮತ್ತು 25 ರಂದು ನೆಹರುನಗರ ಕಾಡು ಬಯಲು ರಂಗ ಮಂದಿರದಲ್ಲಿ ಜರುಗಲಿದೆ ಎಂದು ಸಂಗೀತ ಕಲಾ ಶಾಲೆಯ ಸಂಚಾಲಕ ಹೆಚ್.ಎಂ.ರಾಘವೇಂದ್ರ ರವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಎರಡು ದಿನ ನಡೆಯುವ ಕಾರ್ಯಕ್ರಮದಲ್ಲಿ ಬೆಳಿಗ್ಗಿನಿಂದ ಸಂಜೆಯ ತನಕ ಕಲಾ ಶಾಲೆಯ ವಿದ್ಯಾರ್ಥಿಗಳಿಂದ ಹಾಡುಗಾರಿಕೆ ನಡೆಯಲಿದ್ದು, ಸಂಜೆ ಶಾಲಾ ವಿದ್ಯಾರ್ಥಿಗಳಿಂದಲೇ ಪಂಚರತ್ನ ಕೃತಿಗಳ ಗೋಷ್ಠಿಗಾಯನ ನಡೆಯಲಿದೆ. ಬಳಿಕ ಪ್ರಧಾನ ಕಾರ್ಯಕ್ರಮ ನಡೆಯಲಿದೆ. ದ.24ರಂದು ಸಂಜೆ ಗಂಟೆ 6ಕ್ಕೆ ಮೈಸೂರಿನ ವಿದ್ವಾನ್ ಎನ್.ಆರ್ ಪ್ರಶಾಂತ್‌ರವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ. ವಯಲಿನ್‌ನಲ್ಲಿ ಅಚ್ಚುತ ರಾವ್ ಬೆಂಗಳೂರು, ಮೃದಂಗದಲ್ಲಿ ಎ ರಾಧೇಶ್ ಮೈಸೂರು, ಮೋರ್ಸಿಂಗ್‌ನಲ್ಲಿ ಬಾಲಕೃಷ್ಣ ಪುತ್ತೂರು ಸಹಕರಿಸಲಿದ್ದಾರೆ ಎಂದ ಅವರು ದ.25ರಂದು ಸಂಜೆ ಗಂಟೆ 6ಕ್ಕೆ ವಿಶೇಷ ಲಘು ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಪ್ರಸ್ತುತ ಮೈಸೂರಿನಲ್ಲಿ ವಾಸ್ತವ್ಯವಿರುವ ಬಲ್ನಾಡು ಮೂಲದ ವಿದ್ವಾನ್ ಶ್ರೀರಾಮ್ ಭಟ್, ವಿದುಷಿ ಶೈಲಜಾ ಶ್ರೀರಾಮ್ ಹಾಡುಗಾರಿಕೆ ನಡೆಸಲಿದ್ದಾರೆ. ಹಾರ್‍ಮೋನಿಯಂನಲ್ಲಿ ರವಿರಾಜ್ ಒಡಿಯೂರು, ತಬಲದಲ್ಲಿ ವಿವೇಕ್ ಮತ್ತು ಆತ್ಮರಾಂ ನಾಯಕ್ ಪುತ್ತೂರು ಸಹಕರಿಸಲಿದ್ದಾರೆ ಎಂದು ಹೇಳಿದರು.

ಸಂಗೀತಕ್ಕೆ ಹೆಚ್ಚು ಮಹತ್ವ ನಮ್ಮದು: ಸಂಗೀತ ಕಲಾ ಶಾಲೆಯ ವಾರ್ಷಿಕೋತ್ಸವದಲ್ಲಿ ಸಭಾ ಕಾರ್ಯಕ್ರಮ ನಡೆಯುವುದಿಲ್ಲ. ಸಭಾ ಕಾರ್ಯಕ್ರಮ ಮಾಡಿದರೆ ಸಮಯವ ವ್ಯರ್ಥವಾಗುತ್ತದೆ. ಸಂಗೀತಕ್ಕೆಂದು ಆಸಕ್ತಿ ವಹಿಸಿ ಬಂದವರಿಗೂ ಸಭಾ ಕಾರ್ಯಕ್ರಮದ ಅವಶ್ಯಕತೆ ಇರುವುದಿಲ್ಲ. ಅವರೆಲ್ಲಾ ಬರುವುದು ಸಂಗೀತದ ಸವಿಯನ್ನು ಪಡೆಯಲು. ಜೊತೆಗೆ ನಮ್ಮಲ್ಲಿರುವ ಸುಮಾರು 75 ವಿದ್ಯಾರ್ಥಿಗಳಿಗೂ ವೇದಿಕೆಯಲ್ಲಿ ಅವಕಾಶ ನೀಡುವ ಸಲುವಾಗಿ ಸಭಾ ಕಾರ್ಯಕ್ರಮವನ್ನು ಬಿಟ್ಟು ಸಾಂಕೇತಿವಾಗಿ ದೀಪ ಬೆಳಗಿಸಿ ಸಂಗೀತ ಕಾರ್ಯಕ್ರಮ ಪ್ರಾರಂಭಿಸಲಾಗುವುದು ಎಂದು ರಾಘವೇಂದ್ರರವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕಲಾ ಶಾಲೆಯ ಮುಖ್ಯಶಿಕ್ಷಕಿ ವಿದುಷಿ ವೀಣಾ ರಾಘವೇಂದ್ರ, ಸದಸ್ಯರಾದ ಡಾ. ಶಶಿಧರ್ ಕಜೆ, ಶ್ರೀನಿವಾಸ್ ಭಟ್ ಮುದ್ಲಾಜೆ, ಶಾಲಿನಿ ಆತ್ಮಭೂಷಣ್, ಹಿರಿಯ ವಿದ್ಯಾರ್ಥಿ ಸವಿತಾ ಅಡಿಗ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.