ಗೋಯಾತ್ರೆ ಮಹಾಮಂಗಲದ ತಾಲೂಕು ಕಚೇರಿ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

go-yathreಪುತ್ತೂರು: ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ದಿವ್ಯ ಸಂಕಲ್ಪದಲ್ಲಿ ಮಂಗಳೂರಿನ ಮಂಗಲ ಭೂಮಿ ಕುಳೂರಿನಲ್ಲಿ ಜ.27,28 ಮತ್ತು 29ರಂದು ನಡೆಯಲಿರುವ ಗೋಯಾತ್ರಾ-ಮಹಾಮಂಗಲ ಸಪ್ತರಾಜ್ಯದ ಮಂಗಲಗೋಯಾತ್ರೆಯ ಮಹಾಮಂಗಲ ತಾಲೂಕು ಕಚೇರಿ ಇಲ್ಲಿನ ಏಳ್ಮುಡಿಯಲ್ಲಿರುವ ಕೋಕೋಗುರು ವಠಾರದಲ್ಲಿ ಉದ್ಘಾಟನೆಗೊಂಡಿದೆ.  ಕಾರ್ಯಾಲಯದ ಉದ್ಘಾಟನೆಯನ್ನು ಕಟ್ಟಡದ ಮಾಲಕ ಬೋನಂತಾಯ ಶಿವಶಂಕರ ಭಟ್ ನೆರವೇರಿಸಿದರು. ಮಹಾಮಂಗಲದ ಕರಪತ್ರಲೋಕರ್ಪಣೆಯನ್ನು ಗೋಯಾತ್ರೆಯ ದ.ಕ. ಜಿಲ್ಲಾ ಸಂಚಾಲಕ ರಾಜಾರಾಮ್ ಶೆಟ್ಟಿ ಕೋಲ್ಪೆಗುತ್ತು ನೀಡಿದರು.  ಕಾರ್ಯಕ್ರಮದಲ್ಲಿ ಪುತ್ತೂರು ತಾಲೂಕು ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಕಾರ್ಯಾಧ್ಯಕ್ಷ ಪದ್ಮನಾಭ ಶೆಟ್ಟಿ, ಗೌರವ ಸಲಹೆಗಾರ ಜೀವಂಧರ್ ಜೈನ್, ಪುತ್ತೂರು ತಾಲೂಕಿನ ಅಕ್ಷತಾ ಅಭಿಯಾನದ ಸಂಚಾಲಕಿ  ವಿದ್ಯಾ ಗೌರಿ, ಕಾರ್ಯಾಲಯ ಕಾರ್ಯದರ್ಶಿ ಪುಳು ಈಶ್ವರ ಭಟ್, ತಾಲೂಕು ಸಮಿತಿ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಶೆಟ್ಟಿ, ನಗರ ಸಭಾ ಸದಸ್ಯ ಹರೀಶ್, ಕಾರ್ಯಕರ್ತರಾದ  ಬಾಲಕೃಷ್ಣ ನಾಯಕ್, ಸಂತೋಷ್ ಬೋನಂತಾಯ ಉಪಸ್ಥಿತರಿದ್ದರು. ಗೋ ಯಾತ್ರೆ ಸಮಿತಿ ಪ್ರಧಾನ ಕಾರ್ಯದರ್ಶಿ ಜಯಾನಂದ ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.