ಉಪ್ಪಿನಂಗಡಿ ಸರ್ಕಾರಿ ಪ.ಪೂ. ಕಾಲೇಜು ಪ್ರಾಚಾರ್ಯರಾಗಿ ನರಸಿಂಹ ಭಟ್

Puttur_Advt_NewsUnder_1
Puttur_Advt_NewsUnder_1

 

12

ಉಪ್ಪಿನಂಗಡಿ: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ನರಸಿಂಹ ಭಟ್ ಎಂ. ಎಂಬವರು ಆಗಮಿಸಿ, ಕರ್ತವ್ಯಕ್ಕೆ ಹಾಜರಾಗಿದ್ದಾರೆ. ನರಸಿಂಹ ಭಟ್‌ರವರು ಪುತ್ತೂರು ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯ ರಾಗಿದ್ದವರು ಇಲ್ಲಿಗೆ ವರ್ಗಾವಣೆ ಹೊಂದಿ ಆಗಮಿಸಿರುತ್ತಾರೆ. ಮೂಲತಃ ಪೆರ್ಲ ನಿವಾಸಿ ಆಗಿರುವ ನರಸಿಂಹ ಭಟ್ ಮುಡಿಪು, ಕಬಕ, ಬೆಟ್ಟಂಪಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದರು. ಉಪ್ಪಿನಂಗಡಿಯಲ್ಲಿ ಪ್ರಾಚಾರ್ಯರಾಗಿದ್ದ ಜಯರಾಮ ಎಂಬವರು 2014 ಆಗಸ್ಟ್ 5ರಂದು ಕೋಲಾರ ಜಿಲ್ಲೆಯ ಚಿಂತಾಮಣಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯರಾಗಿ ವರ್ಗಾವಣೆ ಆಗಿ ತೆರಳಿದ್ದರು. ಬಳಿಕ ಹುದ್ದೆ ಖಾಲಿ ಇದ್ದು, ಕಾಲೇಜಿನ ಉಪನ್ಯಾಸಕರಾದ ಮಂಜುನಾಥ್‌ರವರು ಪ್ರಭಾರ ಪ್ರಾಚಾರ್ಯರಾಗಿ ಕೆಲಸ ನಿರ್ವಹಿಸುತ್ತಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.