ಕಾವು: ಸರಯೂ ಕ್ಲಿನಿಕ್, ಮೆಡಿಕಲ್ಸ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

salmara123ಪುತ್ತೂರು: ಕಾವು ಮುಖ್ಯರಸ್ತೆ ಬಳಿಯ ಪುಷ್ಪಕ್ ಕಾಂಪ್ಲೆಕ್ಸ್‌ನಲ್ಲಿ ಸರಯೂ ಕ್ಲಿನಿಕ್ ಹಾಗೂ ಸರಯೂ ಮೆಡಿಕಲ್ಸ್ ದ.೨೧ರಂದು ಬೆಳಿಗ್ಗೆ ಶುಭಾರಂಭಗೊಂಡಿತು. ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯರವರು ದೀಪ ಬೆಳಗಿಸಿ ಕಿನಿಕ್‌ನ್ನು ಉದ್ಘಾಟಿಸಿ ಶುಭಹಾರೈಸಿದರು. ಬಿ.ಜಿ ನಾರಾಯಣ ಭಟ್‌ವರು ರಿಬ್ಬನ್ ಕತ್ತರಿಸಿ ಮೆಡಿಕಲ್‌ನ್ನು ಉದ್ಘಾಟಿಸಿ ಶುಭಹಾರೈಸಿದರು. ಮಳಿ ರಾಮಚಂದ್ರ ಭಟ್, ವೆಂಕಟಾಚಲ ಮಳಿ, ಸೂರ್ಯನಾರಾಯಣ ಮಳಿ, ಶ್ರಾರ್ವಿರಿ ಮಳಿ, ಸಾವಿತ್ರಿಯಮ್ಮ, ಜಿ.ಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ,  ಡಾ. ರಾಜಾರಾಮ ವರ್ಮ, ಡಾ. ಅವಿನಾಶ ಕಲ್ಲೂರಾಯ, ಡಾ. ನಝೀರ್ ಅಹಮದ್, ಮಧು ಮಲ್ಟಿಪನ್ಸ್ ನ ವೆಂಕಟಕೃಷ್ಣ ಮಳಿ, ಗೋವಿಂದ ಭಟ್, ಡಾ. ಸಾವಿತ್ರಿ, ಡಾ. ಶಿವಪ್ರಸಾದ ಶೆಟ್ಟಿ ಕೆಯ್ಯೂರು, ಅರಿಯಡ್ಕ ಗ್ರಾ.ಪಂ ಉಪಾಧ್ಯಕ್ಷ ಲೋಕೇಶ್ ಚಾಕೋಟೆ, ಮಾಡ್ನೂರು ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಬಾಲಕೃಷ್ಣ ಕೆದಿಲಾಯ, ಕಾವು ನನ್ಯ ತುಡರ್ ಯುವಕ ಮಂಡಲದ ನಿಕಟಪೂರ್ವ ಅಧ್ಯಕ್ಷ ಭಾಸ್ಕರ ಬಲ್ಯಾಯ, ಸ್ವಸ್ತಿಕ್ ಜನರಲ್ ಸ್ಟೋರ್‍ಸ್‌ನ ಹರೀಶ್ ಕುಂಜತ್ತಾಯ, ನಹುಷ ಭಟ್, ಹರ್ಷ ಜೆ, ಶಂಕರನಾರಾಯಣ ಭಟ್, ಮುಸ್ತಾಫ ಕಾವು, ಗೋವಿಂದ ಭಟ್, ಮುಗೇರು ಗೋಪಾಲಕೃಷ್ಣ, ಶರತ್ ಕುಮಾರ್ ರೈ, ರತ್ನಾಕರ ರೈ, ಕುಮಾರ್ ಪೆರ್ನಾಜೆ, ಡಾ. ಭಾಗ್ಯೇಶ್, ಸೇರಿದಂತೆ ಅನೇಕರು ಆಗಮಿಸಿ ಶುಭಹಾರೈಸಿದರು. ನವೀನ್ ಕುಲಾಲ್ ಸ್ವಾಗತಿಸಿ ವಂದಿಸಿದರು. ಅರ್ಚಕ ಶಿವಪ್ರಸಾದ್ ಕಡಮಣ್ಣಾಯರವರು ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಮಾಲಕ ಡಾ. ನವೀನಶಂಕರ ಎಂ. ಅತಿಥಿಗಳನ್ನು ಸತ್ಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.