ಬಜತ್ತೂರು: ಅಂಬೇಡ್ಕರ್ ಭವನ ವಿಚಾರ-ತಹಶೀಲ್ದಾರ್ ಕಚೇರಿಯಲ್ಲಿ ಟೇಬಲ್ ಸರ್ವೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

bajathooruಪುತ್ತೂರು: ಬಜತ್ತೂರು ಗ್ರಾಮದ ಕಾಂಚನ ಮಂಜಿಪಳ್ಳದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯ ಮಧ್ಯೆ ಇರುವ ಗೊಂದಲಕ್ಕೆ ಅಂತಿಮ ತೆರೆ ಎರೆಯಲು ದ.21ರಂದು ಪುತ್ತೂರು ತಹಸೀಲ್ದಾರ್ ಕಚೇರಿಯಲ್ಲಿ ಟೇಬಲ್ ಸರ್ವೆ ನಡೆಸಲಾಯಿತು.

ಅಂಬೇಡ್ಕರ್ ಭವನ ನಿರ್ಮಿಸಲು ಜಾಗ ಮೀಸಲಿಟ್ಟ ಬಳಿಕ ಅಲ್ಲಿ ಅರಣ್ಯ, ಇಲಾಖೆ ಮತ್ತು ಕಂದಾಯ ಇಲಾಖೆ ನಡುವೆ ಜಾಗ ಮಾಲಕತ್ವದ ಕುರಿತು ಸಮಸ್ಯೆ ಉದ್ಭವವಾಗಿತ್ತು. ಈ ನಿಟ್ಟಿನಲ್ಲಿ ಪ್ರತಿ ಬಾರಿ ತಾ.ಪಂ ಸಾಮಾನ್ಯ ಸಭೆ, ಕೆಡಿಪಿ ಸಭೆಯಲ್ಲೂ ಚರ್ಚೆ ನಡೆದಿದ್ದು, ಕೊನೆಗೆ ಸಂಬಂಧಿಸಿದ ಅಧಿಕಾರಿಗಳು ಒಟ್ಟಿಗೆ ಸೇರಿ ಸರ್ವೆ ಕಾರ್ಯಕ್ಕೆ ಟೇಬಲ್ ಸರ್ವೆ ಮಾಡುವ ಕುರಿತು ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ ತಹಸೀಲ್ದಾರ್ ಅನಂತಶಂಕರ್, ಪುತ್ತೂರು ವಲಯ ಅರಣ್ಯಾಧಿಕಾರಿ ಕಾರ್ಯಪ್ಪ, ಡಿಎಫ್‌ಒ ಹರೀಶ್ ಬಿ.ಎನ್.,  ನೆಡುತೋಪು ಅಧೀಕ್ಷಕ ಸುರೇಶ್, ಸರ್ವೆ ಇಲಾಖೆಯ ಸೂಪರ್‌ವೈಸರ್ ಮಂಜುನಾಥ್, ಉಪ ತಹಸೀಲ್ದಾರ್ ಗುಡ್ಡಪ್ಪ ಶೆಟ್ಟಿ, ಪುತ್ತೂರು ತಾಪಂ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಮುಕುಂದ ಬಜತ್ತೂರು ಉಪಸ್ಥಿತರಿದ್ದರು. ಜಮೀನಿನ ನಕ್ಷೆ ಮತ್ತಿತರ ದಾಖಲೆಗಳನ್ನು ಮುಂದಿಟ್ಟುಕೊಂಡು ಟೇಬಲ್ ಸರ್ವೆ ನಡೆಯಿತು.

ಸಭೆಯ ಪ್ರಾರಂಭದಲ್ಲಿ ತಾ.ಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮುಕುಂದರವರು ಮಾತನಾಡಿ ಮಂಜಿಪಳ್ಳದಲ್ಲಿ 2 ಎಕರೆ 10 ಸೆಂಟ್ಸ್ ಜಾಗ ಡೀಸಿ ಮನ್ನಾ ಭೂಮಿ ಇದೆ ಎನ್ನಲಾಗಿದ್ದು, ಇದರಲ್ಲಿ 10 ಸೆಂಟ್ಸ್‌ನ್ನು (ಸರ್ವೆ ನಂಬರ್ -355) ಅಂಬೇಡ್ಕರ್ ಭವನ ನಿರ್ಮಿಸಲು ಗಡಿ ಗುರುತು ಮಾಡಲಾಗಿದೆ. ಆದರೆ ಇದು ಕಂದಾಯ ಇಲಾಖೆಗೆ ಸಂಬಂಧಿಸಿದ್ದಲ್ಲ, ಅರಣ್ಯ ಇಲಾಖೆಯ ಜಮೀನು ಎಂದು ಅರಣ್ಯ ಇಲಾಖೆಯವರು ವಾದಿಸುತ್ತಿರುವ ಕಾರಣ ಸಮಸ್ಯೆ ಉಂಟಾಗಿತ್ತು.  4/1 ಸರ್ವೆ ನೋಟಿಫಿಕೇಶನ್ ಆಧಾರದಲ್ಲಿ ಈ ಜಮೀನು ನಮ್ಮದು ಎಂದು ಅರಣ್ಯ ಇಲಾಖೆ ಹೇಳಿದೆ.  ಆದರೆ ಇದು ಡೀಸಿ ಮನ್ನಾ ಭೂಮಿ ಎಂಬುದು ಕಂದಾಯ ಇಲಾಖೆಯ ವಾದವಾಗಿತ್ತು. ತಾಲೂಕು ಪಂಚಾಯತ್ ಸಭೆ, ಕೆಡಿಪಿ ಸಭೆಗಳಲ್ಲಿ ಕೂಡ ಸಾಕಷ್ಟು ಚರ್ಚೆಯಾಗಿದೆ. ಆದರೂ ಫಲ ಸಿಕ್ಕಿಲ್ಲ. ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ನಾವು ಹೋರಾಡುತ್ತಿದ್ದೇವೆ. ಜಮೀನು ವಿವಾದ ಇತ್ಯರ್ಥವಾಗದಿದ್ದರೆ ಹಣ ವಾಪಸ್ ಹೋಗುವ ಸಾಧ್ಯತೆ ಇರುವ ಕಾರಣ ಈ ವಿವಾದ ಇತ್ಯರ್ಥ ಆಗಲೇ ಬೇಕಾಗಿದೆ. ಇಲ್ಲದಿದ್ದರೆ ನಾವು ಹೋರಾಟಕ್ಕೂ ಸಿದ್ಧ ಎಂದು ತಿಳಿಸಿದರು. ಉತ್ತರಿಸಿದ ತಹಶೀಲ್ದಾರ್ ಅನಂತ್‌ಶಂಕರ್‌ರವರು ನಾನು ಅಧಿಕಾರ ಸ್ವೀಕರಿಸಿದ ಬಳಿಕ ಎರಡು ಬಾರಿ ಬಜತ್ತೂರಿಗೆ ಹೋಗಿ ಸ್ಥಳ ವೀಕ್ಷಣೆ ನಡೆಸಿದ್ದೇನೆ. ಜಂಟಿಯಾಗಿ ಸಮೀಕ್ಷೆ ನಡೆಸಲು ಕೈಗೊಂಡ ತೀರ್ಮಾನದ ಪ್ರಕಾರ ಈಗ ಅರಣ್ಯ ಇಲಾಖೆ ಅಧಿಕಾರಿಗಳು ಬಂದಿದ್ದಾರೆ. ನಾವೆಲ್ಲ ಸೇರಿ ಟೇಬಲ್ ಸರ್ವೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ಒಮ್ಮತಕ್ಕೆ ತೀರ್ಮಾನ : ಜಾಗಕ್ಕೆ ಕೆಲವೊಂದು ತಾಂತ್ರಿಕ ಅಂಶಗಳು ತೊಡಕಾಗಿರುವುದು ಈಗಾಗಲೇ ಟೇಬಲ್ ಸರ್ವೆಯಲ್ಲಿ ಬೆಳಕಿಗೆ ಬಂದಿದೆ. ಈ ಕುರಿತು ಜಿಲ್ಲಾಧಿಕಾರಿ ಜತೆ ಚರ್ಚಿಸಿ ಹತ್ತು ಸೆಂಟ್ಸ್ ಜಾಗ ಬಿಟ್ಟು ಕೊಡುವ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಮುಕುಂದ ಬಜತ್ತೂರುರವರು ಸಭೆಯ ಬಳಿಕ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.