ಸರ್ವೆ ಕರ್ಮಿನಡ್ಕ  ನಿವಾಸಿ ರಮೇಶ್ ಉಪ್ಪಿನಂಗಡಿಯಲ್ಲಿ ಶವವಾಗಿ ಪತ್ತೆ

*ಅಣ್ಣನ ಮದುವೆಯ ಹಿಂದಿನ  ದಿನ ನಾಪತ್ತೆಯಾಗಿದ್ದರು

* ವಿಷ ಸೇವಿಸಿ ಆತ್ಮಹತ್ಯೆ

* ಎಸ್ಪಿ, ಶಾಸಕರಿಗೆ ಬರೆದ ಡೆತ್  ನೋಟ್ ಪತ್ತೆಯಾದರೂ ಸಾವಿನ ವಿಚಾರದ ಮಾಹಿತಿ ಇಲ್ಲ

ಉಪ್ಪಿನಂಗಡಿ: ಅವಿವಾಹಿತ ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಪ್ಪಿನಂಗಡಿಯ ನೇತ್ರಾವತಿ ನದಿ ತೀರದಲ್ಲಿ ನಡೆದಿದೆ.

ತಾಲೂಕಿನ ಸರ್ವೆ ಗ್ರಾಮದ ಸೊರಕೆ ಕರ್ಮಿನಡ್ಕದ ಮತ್ತಡಿ ಎಂಬವರ ಪುತ್ರ ರಮೇಶ್ (33ವ.) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಶುಕ್ರವಾರ ಬೆಳಗ್ಗೆ ಉಪ್ಪಿನಂಗಡಿಯ ವನಭೋಜನ ಶ್ರೀ ಆಂಜನೇಯ ದೇವಸ್ಥಾನದ ಸಮೀಪ ನದಿ ದಡದಲ್ಲಿ ತನ್ನಲ್ಲಿದ್ದ ಬೆಡ್‌ಶೀಟ್ ಹಾಸಿ, ವಿಷ ಸೇವಿಸಿ ಮಲಗಿದ್ದ ಸ್ಥಿತಿಯಲ್ಲಿ ಈತನ ಮೃತದೇಹ ಪತ್ತೆಯಾಗಿದೆ. ಎರಡು ವರ್ಷಗಳಿಂದ ಚರ್ಮ ರೋಗದಿಂದ ಬಳಲುತ್ತಿದ್ದ ಇವರಿಗೆ ಚಳಿಗಾಲದಲ್ಲಿ ಚರ್ಮರೋಗ ಉಲ್ಭಣವಾಗುತ್ತಿತ್ತು. ಇದರಿಂದ ಮಾನಸಿಕವಾಗಿ ತೀವ್ರವಾಗಿ ನೊಂದಿದ್ದರು. ತನ್ನ ಅಣ್ಣ ಮೋನಪ್ಪರವರ ಮದುವೆಯ ಹಿಂದಿನ ದಿನವಾದ ಡಿ.17ರಂದು ಕೆಲವು ಬಟ್ಟೆಬರೆಗಳನ್ನು ಹಿಡಿದುಕೊಂಡು ಮನೆ ಬಿಟ್ಟಿದ್ದರು.  ಬಳಿಕ ನಾಪತ್ತೆಯಾಗಿದ್ದ ರಮೇಶ್ ಉಪ್ಪಿನಂಗಡಿಯ ನದಿ ತೀರದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಡೆತ್‌ನೋಟ್: ಮೃತನ ಬಳಿ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಶಾಸಕರಿಗೆ ಬರೆದ ಡೆತ್ ನೋಟ್ ಪತ್ತೆಯಾಗಿದೆ. ಆದರೆ ಇದರಲ್ಲಿ ಮಾತ್ರ ಈತನ ಸಾವಿಗೆ ಸಂಬಂಧಿಸಿದ ಯಾವುದೇ ವಿಚಾರಗಳಿಲ್ಲದೆ, ಮಾನಸಿಕ ಅಸ್ವಸ್ಥರಂತೆ ಪಕ್ಕದ ಮನೆಯವರ, ಊರಿನವರ ವಿಚಾರಗಳನ್ನು ಬರೆಯಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ನನ್ನ ಮದುವೆಗೆ ಒಂದು ದಿನ ಮೊದಲು ನಾನು ತಮ್ಮನಿಗೆ ೧೦೦೦ರೂ ಕೊಟ್ಟು ಮದ್ದು ತೆಗೆದುಕೊಳ್ಳುವಂತೆ ಹೇಳಿದ್ದೆ. ಔಷಧಿ ಚೀಟಿಗಳನ್ನು ತೆಗೆದುಕೊಂಡು ಮದ್ದಿಗೆ ಹೋಗಿದ್ದ ರಮೇಶ್ ಮರಳಿ ನಮ್ಮ ಮನೆಗೆ ಬಂದಿರಲಿಲ್ಲ. ಬಳಿಕ ಉಪ್ಪಿನಂಗಡಿಯಲ್ಲಿ ಆತ ವಿಷ ಸೇವಿಸಿದ ಸುದ್ದಿ ನಮಗೆ ತಿಳಿಯಿತು ಎಂದು ರಮೇಶ್‌ರವರ ಅಣ್ಣ ಮೋನಪ್ಪ ಕರ್ಮಿನಡ್ಕ ತಿಳಿಸಿದ್ದಾರೆ.

ರಮೇಶ್‌ರವರು ನಾಪತ್ತೆಯಾದ ಬಳಿಕ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಲು ಪ್ರಯತ್ನ ಪಟ್ಟಿzವೆ. ಆದರೆ ಅವರು ಕರೆಯನ್ನು ಸ್ವೀಕರಿಸದೆ ಡಿ.೧೯ರಂದು ನನ್ನ ಮೊಬೈಲ್‌ಗೆ ’ನನ್ನ ವಿಚಾರ ಬಿಟ್ಟು ಬಿಡಿ’ ಎಂದು ಸಂದೇಶ ಕಳುಹಿಸಿರುವುದಾಗಿ ಸ್ಥಳೀಯ ಅಟೋ ಚಾಲಕ ಲಿಂಗಪ್ಪ ಸೊರಕೆಯವರು ತಿಳಿಸಿದ್ದಾರೆ. ರಮೇಶ್‌ರವರು ತಂದೆ, ತಾಯಿ ಮೂವರು ಸಹೋದರಿಯರು ಹಾಗೂ ಓರ್ವ ಸಹೋದರನನ್ನು ಅಗಲಿದ್ದಾರೆ. ಮೃತನ ಸಹೋದರ ಮೋನಪ್ಪ ಎಂಬವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.