Breaking News

ಪುತ್ತೂರಿನಲ್ಲಿ ವಿ ಬಿಲ್ಡ್ ಅಸೋಸಿಯೇಟ್ಸ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

vbuild vbuild1 vbuild2

ವಿಶ್ವಾಸಾರ್ಹ ಸೇವೆಯಿಂದ ಯಶಸ್ಸು ಸಾಧ್ಯ-ಕುಂಬೋಳ್ ತಂಙಳ್

* ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್‌ರಿಂದ ಸಂಸ್ಥೆ ಉದ್ಘಾಟನೆ

* ಪುತ್ತೂರು ತಂಙಳ್‌ರಿಂದ ಎಂ.ಡಿ. ಕಛೇರಿ ಉದ್ಘಾಟನೆ

*  ಉಮ್ಮರ್ ಕುಂಞಿಕೋಯ ತಂಙಳ್ ಕುಂಬೋಳ್‌ರಿಂದ ವೆಬ್‌ಸೈಟ್ ಉದ್ಘಾಟನೆ

*ಹಲವು ಸಾಮಾಜಿಕ, ಧಾರ್ಮಿಕ, ರಾಜಕೀಯ ಮುಖಂಡರ ಉಪಸ್ಥಿತಿ

ಪುತ್ತೂರು: ಕಮರ್ಷಿಯಲ್ ಹಾಗೂ ರೆಸಿಡೆನ್ಸಿಯಲ್ ಬಿಲ್ಡಿಂಗ್‌ಗಳನ್ನು ನಿರ್ಮಿಸಿ ಕೊಡುವ ’ವಿ ಬಿಲ್ಡ್ ಎಸೋಸಿಯೇಟ್ಸ್ ಪ್ರೈವೆಟ್ ಲಿಮಿಟೆಡ್’ ಸಂಸ್ಥೆಯು ಇಲ್ಲಿನ ಎ.ಪಿ.ಎಂ.ಸಿ ರಸ್ತೆಯಲ್ಲಿರುವ ಕ್ರಿಸ್ತೋಫರ್ ಕಾಂಪ್ಲೆಕ್ಸ್‌ನಲ್ಲಿ ಡಿ.22ರಂದು ಶುಭಾರಂಭಗೊಂಡಿತು. ಅಸ್ಸಯ್ಯದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ಉದ್ಘಾಟಿಸಿ ದುವಾ ಮಾಡಿದರು. ಬಳಿಕ ಮಾತನಾಡಿದ ಅವರು ವಿಶ್ವಾಸಾರ್ಹ ಸೇವೆಯಿಂದ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಹೇಳಿ ಶುಭ ಹಾರೈಸಿದರು. ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು ಎಂ.ಡಿ. ಕಛೇರಿಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಬೆಳೆಯುತ್ತಿರುವ ಪುತ್ತೂರಿಗೆ ’ವಿ ಬಿಲ್ಡ್‌ನಂತಹ ಸಂಸ್ಥೆಗಳು ಅಗತ್ಯವಾಗಿದೆ ಈ ನಿಟ್ಟಿನಲ್ಲಿ ನಿಮ್ಮಿಂದ ಉತ್ತಮ ಸೇವೆ ಜನರಿಗೆ ದೊರಕುವಂತಾಗಲಿ ಎಂದು ಆಶಿಸಿದರು. ಅಸ್ಸಯ್ಯದ್ ಕೆ.ಎಸ್. ಉಮ್ಮರ್ ಕುಂಞಿಕೋಯ ತಂಙಳ್ ಕುಂಬೋಳ್ ಸಂಸ್ಥೆಯ ವೆಬ್‌ಸೈಟ್ ಅನಾವರಣಗೊಳಿಸಿದರು. ತಾ.ಪಂ ಸದಸ್ಯೆ ಉಷಾ ಅಂಚನ್, ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು, ಪೌರಾಯುಕ್ತೆ ರೂಪಾ ಶೆಟ್ಟಿ, ಸದಸ್ಯರಾದ ಹೆಚ್ ಮುಹಮ್ಮದ್ ಆಲಿ, ಎನ್ ಚಂದ್ರ ಸಿಂಗ್, ರಾಜೇಶ್ ಬನ್ನೂರು, ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯ ಪಿ.ಬಿ ಹಸನ್ ಹಾಜಿ ಯುನಿಟಿ, ಸಂಪ್ಯ ಠಾಣಾ ಉಪನಿರೀಕ್ಷಕ ಅಬ್ದುಲ್ ಖಾದರ್, ಕ್ರಿಸ್ತೋಫರ್ ಕಾಂಪ್ಲೆಕ್ಸ್ ಮಾಲಕ ವಲೇರಿಯನ್ ಡಾಯಸ್, ಆರ್ಯಾಪು ಗ್ರಾ.ಪಂ ಸದಸ್ಯ ಜಬ್ಬಾರ್ ಸಂಪ್ಯ, ಹಮೀದಾಲೀಸ್ ಸಂಟ್ಯಾರ್, ಸುರಯ್ಯಾ ಡ್ರೆಸ್ಸಸ್‌ನ ಅಬ್ದುಲ್ ಖಾದರ್ ಹಾಜಿ, ಸಂಪ್ಯ ಮಸೀದಿ ಖತೀಬ್ ಹಮೀದ್ ದಾರಿಮಿ ಸಂಪ್ಯ, ಅಧ್ಯಕ್ಷ ಅಬ್ದುಲ್ ಜಲೀಲ್ ಹಾಜಿ ಸಂಪ್ಯ, ಮುಸ್ತಾಫಾ ಸಹದಿ ಮೂಲೂರು, ಜೆ.ಡಿ.ಎಸ್ ಮುಖಂಡ ಅಶ್ರಫ್ ಕಲ್ಲೇಗ, ಸಂಪ್ಯ ಕೆ.ಎಂ.ಕೆ ವುಡ್‌ನ ಮಾಲಕ ಅಬ್ದುಲ್ ರಝಾಕ್, ಉಪ್ಪಿನಂಗಡಿ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಮುಸ್ತಾಫಾ ಕೆಂಪಿ, ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಸತೀಶ್ ನಾಯ್ಕ್, ಶಾಹುಲ್ ಹಮೀದ್ ಕಂಬಳಬೆಟ್ಟು, ಡಾ.ಬಿ ರಘು, ಕರ್ನಾಟಕ ಮಲಾಮೆ ಸಾಹಿತ್ಯ ಅಕಾಡೆಮಿಯ ಪ್ರ.ಕಾರ್ಯದರ್ಶಿ ಹೈದರಾಲಿ ಐವತ್ತೊಕ್ಲು ಮತ್ತಿತರ ಹಲವಾರು ಮಂದಿ ಆಗಮಿಸಿ ಶುಭ ಹಾರೈಸಿದರು.  ಸಂಸ್ಥೆಯ ಮಾಲಕ ಇಬ್ರಾಹಿಂ ಅಲೆಕ್ಕಾಡಿಯವರ ತಂದೆ ಪಳ್ಳಿಕುಂಞಿ ಹಾಜಿ ಅಲೆಕ್ಕಾಡಿ ಹಾಗೂ ಮಾಲಕರ ಕುಟುಂಬಸ್ಥರು ಉಪಸ್ಥಿತರಿದ್ದರು. ವಿ ಬಿಲ್ಡ್ ಅಸೋಸಿಯೇಟ್ಸ್‌ನ ಟೆಕ್ನಿಕಲ್ ಡೈರೆಕ್ಟರ್ ಎನ್ ಇಸಾಕ್ ಡಿ.ಸಿ.ಇ, ಮಾರ್ಕೆಟಿಂಗ್ ಡೈರೆಕ್ಟರ್ ಅಬ್ದುಲ್ ರಝಾಕ್ ಕೆಮ್ಮನ್, ಮಾರ್ಕೆಟಿಂಗ್ ಮ್ಯಾನೇಜರ್ ಅಬ್ದುಲ್ ರಹ್ಮಾನ್ ಅನ್ಸಾರ್ ಚೇವರ್ ಮತ್ತು ನಿಸಾರ್ ಸಂಪ್ಯ ಅತಿಥಿಗಳನ್ನು ಸತ್ಕರಿಸಿದರು. ಪಂಡಿತರಾದ ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲುರವರು ಡಿ.21ರಂದು ಸಂಸ್ಥೆಗೆ ಆಗಮಿಸಿ ಶುಭ ಹಾರೈಸಿದ್ದರು.

ನಮ್ಮಲ್ಲಿ ಅತ್ಯಾಧುನಿಕ ಶೈಲಿಯಲ್ಲಿ ಗ್ರಾಹಕರಿಗೆ ಅನುಕೂಲಕರವಾಗಿ ಅಂದವಾದ ವಿವಿಧ ಡಿಸೈನ್‌ಗಳೊಂದಿಗೆ ಕಮರ್ಷಿಯಲ್ ಮತ್ತು ರೆಸಿಡೆನ್ಸಿಯಲ್ ಬಿಲ್ಡಿಂಗ್‌ಗಳನ್ನು ಮಾಡಿಕೊಡಲಾಗುವುದು. ಗ್ರಾಹಕರ ಸಹಕಾರವನ್ನು ಬಯಸುತ್ತಿzವೆ.

-ಇಬ್ರಾಹಿಂ ಅಲೆಕ್ಕಾಡಿ(ಸಂಪ್ಯ)

ಮ್ಯಾನೇಜಿಂಗ್ ಡೈರೆಕ್ಟರ್ ವಿ ಬಿಲ್ಡ್ ಅಸೋಸಿಯೇಟ್ಸ್ ಪ್ರೈವೆಟ್ ಲಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.