Breaking News

ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ ಹಿನ್ನಲೆ ಷಡ್ಯಂತ್ರ ರೂಪಿಸಿ ಪಂಪ್ ದರೋಡೆ ಮಾಡಿ ನೀರಿನ ಸೌಲಭ್ಯಕ್ಕೆ ತಡೆ ಕಾಣಿಯೂರು ಗ್ರಾ.ಪಂ.ವಿರುದ್ಧ ರುಕ್ಮಯ್ಯ ಗೌಡ ಆರೋಪ

Puttur_Advt_NewsUnder_1
Puttur_Advt_NewsUnder_1

 

ಪುತ್ತೂರು : ಕಾಣಿಯೂರು ಪಂಚಾಯತ್ ಆಡಳಿತದ ಮೇಲಿರುವ ಹಗರಣ ಮತ್ತು ಹಣ ದುರುಪಯೋಗದ ಕುರಿತು ನಾನು ಲೋಕಾಯುಕ್ತ ಅಧಿಕಾರಿಗಳಿಗೆ ಸೂಕ್ತ ಪುರಾವೆಗಳೊಂದಿಗೆ ದೂರು ನೀಡಿದ್ದು ಈ ದ್ವೇಷದಿಂದ ಪಂಚಾಯತ್ ಆಡಳಿತವು ಷಡ್ಯಂತ್ರ ರೂಪಿಸಿ ನನ್ನ ಮನೆಯ ನೀರಾವರಿ ಸೌಲಭ್ಯವನ್ನು ಹಾಳು ಮಾಡಿ ಬೋರ್ ಪಂಪನ್ನು ದರೋಡೆ ಮಾಡಿದೆ ಎಂದು ಮಲೆಕೆರ್ಚಿ ನಿವಾಸಿ ರುಕ್ಮಯ್ಯ ಗೌಡರವರು ಪತ್ರಿಕಾಗೋಷ್ಠಿಯಲ್ಲಿ ಆರೋಪ ಮಾಡಿದ್ದಾರೆ.

ನನ್ನ ದೂರಿನ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ನ.18ರಂದು ಕಾಣಿಯೂರು ಗ್ರಾ.ಪಂಗೆ ಹಠಾತ್ ದಾಳಿ ಮಾಡಿ ಕಡತಗಳ ಪರಿಶೀಲನೆ ಮಾಡಿದ್ದಾರೆ.ಹಗರಣಗಳ ಕಡತಗಳನ್ನು ವಶಕ್ಕೆ ಪಡೆದುಕೊಂಡು ಪಂಚಾಯತ್ ಉಪಾಧ್ಯಕ್ಷೆ ಕಮಲಾಕ್ಷಿ ಬೆದ್ರಂಗಳ ಅವರು ಪೈಕದಮಲೆ ಎಂಬಲ್ಲಿ ಮೀಸಲು ಅರಣ್ಯಕ್ಕೆ ಸೇರಿದ ಸ್ಥಳದಲ್ಲಿ ಪರವಾನಿಗೆ ಇಲ್ಲದೆ ನಿರ್ಮಿಸಿರುವ ಆರ್‌ಸಿಸಿ ಮನೆಯನ್ನು ಪರಿಶೀಲಿಸಿ ಸೂಕ್ತ ಕ್ರಮಕ್ಕೆ ಮುಂದಾಗಿದ್ದಾರೆ.ಮಲೆಕೆರ್ಚಿ ಎಂಬಲ್ಲಿ ಹುಕ್ರಪ್ಪ ಎಂಬವರು ಪಟ್ಟಾಸ್ಥಳದಲ್ಲಿ ಭೂಪರಿವರ್ತನೆ ಮಾಡಿ ಅರಣ್ಯ ಬಫರ್ ಸ್ಥಳದಲ್ಲಿ ನಿರ್ಮಿಸುತ್ತಿರುವ ಆರ್‌ಸಿಸಿ ಮನೆಯನ್ನು ಪರಿಶೀಲಿಸಿ ಕಡತಗಳನ್ನು ವಶಪಡಿಸಿಕೊಂಡಿದ್ದಾರೆ.ಪುಣ್ಚತ್ತಾರು-ಬೆದ್ರಂಗಳ-ಕಾರ್ಯ-ಮಲೆಕೆರ್ಚಿ  ರಸ್ತೆಯ ಹೆಸರಿನಲ್ಲಿ ಸರಕಾರದ ಖಜಾನೆಯಿಂದ ಹಣ ದುರುಪಯೋಗ ಮಾಡಿದ ಬಗ್ಗೆಯೂ ಕ್ರಮಕೈಗೊಳ್ಳಲು ಮುಂದಾಗಿದ್ದಾರೆ. ಈ ಮೂರು ಗಂಭೀರ ಆರೋಪಗಳಾಗಿರುವುದರಿಂದ ವಿಚಾರಗಳಾಗಿರುವುದರಿಂದ ಗ್ರಾ.ಪಂ ಬರ್ಖಾಸ್ತುಗೊಂಡು ತಮ್ಮ ಸ್ಥಾನಕ್ಕೆ ಧಕ್ಕೆಯಾಗಬಹುದೆಂಬ ನಿರೀಕ್ಷೆಯಿಂದ ದ್ವೇಷ ಸಾಧನೆಗಾಗಿ ಈ ಕೃತ್ಯ ಎಸಗಿದ್ದಾರೆ, ಮನೆ ಬಳಕೆಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಬಳಸುತ್ತಿದ್ದ ಕೊಳವೆಬಾವಿಯನ್ನು ಮುಚ್ಚಿ ಕೊಳವೆಬಾವಿಗೆ ಅಳವಡಿಸಲಾಗಿದ್ದ ಪಂಪ್ ದರೋಡೆ ಮಾಡಿದ್ದಾರೆ.ತನ್ನ ವಿರುದ್ಧ ಷಡ್ಯಂತ್ರ ರೂಪಿಸಿ ಈ ಕೃತ್ಯ ಎಸಗಿದ್ದಾರೆ ಎಂದು ಅವರು ಆರೋಪಿಸಿದರು.ಕಾಣಿಯೂರು ಗ್ರಾ.ಪಂ ಆಡಳಿತವು ಬಡವರಿಗೊಂದು ನೀತಿ, ಶ್ರೀಮಂತರಿಗೊಂದು ನೀತಿಯ ಮೂಲಕ ತಾರತಮ್ಯ ಧೋರಣೆ ಅನುಸರಿಸುತ್ತಿದ್ದು, ಏಕ ಪಕ್ಷೀಯವಾಗಿ ಆಡಳಿತ ನಡೆಸುತ್ತಿದ್ದಾರೆ.ಪಂಚಾಯತ್‌ನ ಸದಸ್ಯ ಗಣೇಶ್ ಉದನಡ್ಕ ಎಂಬವರಿಂದ ನನಗೆ ಪರೋಕ್ಷವಾಗಿ ಕೊಲೆ ಬೆದರಿಕೆ ಮಾಹಿತಿಗಳು ಬಂದ ಹಿನ್ನಲೆಯಲ್ಲಿ ಅವರ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ ಎಂದು ರುಕ್ಮಯ್ಯ ಗೌಡ ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.