ಮೊರಾರ್ಜಿ ದೇಸಾಯಿ ಶಾಲೆಗೆ ಜಿ.ಪಂ ಅಧ್ಯಕ್ಷರ ದಿಢಿರ್ ಭೇಟಿ

Puttur_Advt_NewsUnder_1
Puttur_Advt_NewsUnder_1

 

morarjiಪುತ್ತೂರು: ಬಲ್ನಾಡಿನಲ್ಲಿರುವ ಮೊರಾರ್ಜಿ ದೇಸಾಯಿ ಶಾಲೆಗೆ ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡುರವರು ದಿಢೀರ್ ಭೇಟಿ ನೀಡಿ ಶಾಲೆಯಲ್ಲಿನ ವಿದ್ಯಾರ್ಥಿಗಳಲ್ಲಿ ಸಮಸ್ಯೆಗಳ ಕುರಿತು ಮಾಹಿತಿ ಪಡೆದು ಕೊಂಡು ಸಿಬಂದಿಗಳಿಗೆ ಸೂಚನೆ ನೀಡಿದ ಘಟನೆ ದ.22ರ ರಾತ್ರಿ ನಡೆದಿದೆ.  ಪುತ್ತೂರಿಗೆ ಬಂದಿದ್ದ ಅಧ್ಯಕ್ಷರು ಮೋರಾರ್ಜಿ ದೇಸಾಯಿ ಶಾಲೆಗೆ ಭೇಟಿ ನೀಡಿದರು. ಮೂರು ತರಗತಿಗಳ ಮಧ್ಯೆ ಶುಚಿತ್ವವಿಲ್ಲದ ಶೌಚಾಲಯದ ಕುರಿತು ಮೊದಲೇ ಮಾಹಿತಿ ಪಡೆದು ಕೊಂಡ ಅವರು ಅಲ್ಲಿ ನೆರೆದಿದ್ದ ಮಕ್ಕಳಲ್ಲೂ ಮಾಹಿತಿ ಪಡೆದರು. ಜೊತೆಗೆ ಅಡುಗೆ ಪದಾರ್ಥಗಳ ಪೈಕಿ ಗೋಧಿಯಲ್ಲಿ ಗುಗ್ಗುರು ಇರುವುದನ್ನು ಸಿಬಂದಿಗಳ ಗಮನಕ್ಕೆ ತಂದರು. ಒಟ್ಟಿನಲ್ಲಿ ಸಮಸ್ಯೆಗಳ ಕುರಿತು ಮಾಹಿತಿ ಪಡೆದ ಅಲ್ಲಿನ ಸಿಬಂದಿಗಳಿಗೆ ಮಕ್ಕಳಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಬೇಕೆಂದು ಸೂಚನೆ ನೀಡಿದರು. ಅಧ್ಯಕ್ಷರು ಭೇಟಿ ನೀಡುವ ಸಂದರ್ಭದಲ್ಲಿ ಅಲ್ಲಿನ ಮೇಲ್ವಿಚಾರಕಿ ಪ್ರಮೀಳಾರವರು ರಜೆಯಲ್ಲಿ ತೆರಳಿದ್ದರು. ತಾ.ಪಂ ಸದಸ್ಯೆ ದಿವ್ಯ ಪುರುಷೋತ್ತಮ ಗೌಡ, ಗ್ರಾ.ಪಂ ಸದಸ್ಯೆ ಪರಮೇಶ್ವರಿ, ಪುರಸಭೆ ಮಾಜಿ ಸದಸ್ಯೆ ಮೋಹಿನಿ, ಬಿಜೆಪಿಯ ಪ್ರಮುಖರಾದ ಪುರುಷೋತ್ತಮ ಮುಂಗ್ಲಿಮನೆ, ಶ್ಯಾಮಪ್ರಸಾದ್ ಮಚ್ಚಿಮಲೆ ಜೊತೆಗಿದ್ದರು.

ಶಿಕ್ಷಕರ ಕೊರತೆ

ಮೊರಾರ್ಜಿ ದೇಸಾಯಿ ಶಾಲೆಗೆ ಶಿಕ್ಷಕರ ಕೊರತೆ ಇದೆ. ಇಲ್ಲಿನ ಪ್ರಾಂಶುಪಾಲರು ಬೇರೆ ಶಾಲೆಯಿಂದ ನಿಯೋಜನೆಗೊಂಡಿದ್ದರಿಂದ ಅವರು ವಾರಕ್ಕೆ ಒಮ್ಮೆ ಬರುತ್ತಾರೆ. 103 ವಿದ್ಯಾರ್ಥಿಗಳು, 113 ವಿದ್ಯಾರ್ಥಿನಿಯರು ಇರುವ ಈ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ ಎಂದು ಹೇಳಿದ ವಿದ್ಯಾರ್ಥಿಗಳು ನಮಗೆ ಈ ಕುರಿತು ಶಿಕ್ಷಕರನ್ನು ಒದಗಿಸುವಂತೆ ವಿನಂತಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.