“ರಿಪೇರಿಗೆ ನೀಡಿದ ಮೊಬೈಲ್‌ನ್ನು ಹಿಂದಕ್ಕೆ ನೀಡದೆ ಸತಾಯಿಸಿದ ಆರೋಪದಲ್ಲಿ ಸೆಲ್ ಸೊಲ್ಯೂಷನ್ ಮಾಲಕ ಪ್ರದೀಪ್ ವಿರುದ್ಧ ಪೊಲೀಸರಿಗೆ ದೂರು, ಕಾನತ್ತೂರು ಕ್ಷೇತ್ರದ ಮೊರೆ ಹೋಗುತ್ತೇನೆ’ ಪತ್ರಿಕಾ ವರದಿಗೆ ಸುದ್ದಿಯ ವಿರುದ್ದ ರಂಜಿತ್ ರೈ ಮತ್ತು ಪ್ರದೀಪ್ ಶೆಟ್ಟಿ ನಡೆಸಿದ  ಪತ್ರಿಕಾ ಗೋಷ್ಠಿಗೂ  ಹಿಂದೂ ಜಾಗರಣ ವೇದಿಕೆಗೂ ಯಾವುದೇ ಸಂಬಂಧವಿಲ್ಲ. ಹಿಂದೂ ಜಾಗರಣ ವೇದಿಕೆಯ ಹೆಸರನ್ನು ಎಳೆದು ತಂದಿರುವುದು ಸರಿಯಲ್ಲ-ಸಚಿನ್ ಪಾಪೆಮಜಲು, ಅಧ್ಯಕ್ಷರು ಹಿಂದೂ ಜಾಗರಣಾ ವೇದಿಕೆ ಪುತ್ತೂರು

Puttur_Advt_NewsUnder_1
Puttur_Advt_NewsUnder_1

sachinಪುತ್ತೂರು ಸುದ್ದಿ ಬಿಡುಗಡೆ ದಿನಪತ್ರಿಕೆಯಲ್ಲಿ ದ.೧೯ರಂದು ರಿಪೇರಿಗೆ ನೀಡಿದ ಮೊಬೈಲ್‌ನ್ನು ಹಿಂದಕ್ಕೆ ನೀಡದೆ ಸತಾಯಿಸಿದ ಆರೋಪದಲ್ಲಿ ಸೆಲ್ ಸೊಲ್ಯೂಷನ್ ಮಾಲಕ ಪ್ರದೀಪ್ ವಿರುದ್ಧ ಪೊಲೀಸರಿಗೆ ದೂರು, ಕಾನತ್ತೂರು ಕ್ಷೇತ್ರದ ಮೊರೆ ಹೋಗುತ್ತೇನೆ ಎಂದು ಕುಸುಮಾಧರ ರೈ ನೀಡಿದ ಹೇಳಿಕೆಯ ಬಗ್ಗೆ ವರದಿ ಪ್ರಕಟಗೊಂಡಿತ್ತು, ಈ ಬಗ್ಗೆ ಪ್ರದೀಪ್ ಮತ್ತು ರಂಜಿತ್ ಶೆಟ್ಟಿಯವರು ಪತ್ರಿಕಾಗೋಷ್ಠಿ ನಡೆಸಿ ಸುದ್ದಿಯ ವರದಿ ಸುಳ್ಳು ಎಂದು ಖಂಡಿಸಿದ್ದರು.

ಅದಾದ ಬಳಿಕ ಪತ್ರಿಕಾಗೋಷ್ಠಿಯ ಫೋಟೋ ಹಾಕಿ ಅದರಲ್ಲಿ ಹಿಂದೂ ಜಾಗರಣಾ ವೇದಿಕೆ ಮತ್ತು ಯುವಭಾರತ್‌ನ್ನು ತಾಗಿಸಿ ಹಾಕಲು ಸುದ್ದಿಯವ ಮಾಡಿದ ಕುತಂತ್ರ ಫೈಲ್: ಸಂಘಟನೆ ಸಾವಿರವಿರಲಿ ಹಿಂದೂಗಳು ಎಂದೆಂದು ಒಂದೇ, ಪುತ್ತೂರಿನ ಹಿಂದೂಗಳು ಗಂಭೀರವಾಗಿ ಚಿಂತಿಸಬೇಕಾದ ವಿಷಯ..! ಎಂದು ವಾಟ್ಸಾಪ್, ಫೇಸ್‌ಬುಕ್‌ಗಳಲ್ಲಿ ಕೆಲವರು ಸುದ್ದಿ ಹರಡಿಸಿದ್ದಾರೆ, ಆದರೆ ಸುದ್ದಿಯಲ್ಲಿ ಪ್ರಕಟಿಸಿದ ವರದಿಗಾಗಲೀ, ಆ ಬಳಿಕ ಪ್ರದೀಪ್ ಶೆಟ್ಟಿ ಹಾಗೂ ರಂಜಿತ್ ರೈ ಯವರು ಕರೆದ ಪತ್ರಿಕಾಗೋಷ್ಠಿಗಾಗಲೀ, ನಂತರ ವಾಟ್ಸಾಪ್ ಫೇಸ್‌ಬುಕ್‌ಗಳಲ್ಲಿ ಹರಡಿದ ವಿಷಯಕ್ಕಾಗಲೀ ಹಿಂದೂ ಜಾಗರಣಾ ವೇದಿಕೆಗೆ ಯಾವುದೇ ಸಂಬಂಧವಿಲ್ಲ, ಮೊಬೈಲ್ ಪ್ರಕರಣದ ವಿಷಯ ಅದು ವೈಯುಕ್ತಿಕ ವಿಚಾರವಾಗಿದೆ, ಪತ್ರಿಕೆಯಲ್ಲಿ ಪ್ರಕಟವಾದದ್ದು ಅದು ಪತ್ರಿಕೆಯ ವಿಚಾರವಾಗಿದೆ, ಆದರೆ ಇದರ ಮಧ್ಯದಲ್ಲಿ ಕೆಲವರು ಹಿಂದೂ ಜಾಗರಣಾ ವೇದಿಕೆಯ ಹೆಸರನ್ನು ಎಳೆದು ತಂದಿರುವುದು ಸರಿಯಲ್ಲ.

– ಸಚಿನ್ ಪಾಪೆಮಜಲು ಅಧ್ಯಕ್ಷರು  ಹಿಂದೂ ಜಾಗರಣಾ ವೇದಿಕೆ ಪುತ್ತೂರು

sachin1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.