ಜಿಲ್ಲಾ ಕರಾವಳಿ ಉತ್ಸವದಲ್ಲಿ ಮೇಳೈಸಲಿದೆ ಡಾ|ಶಿವರಾಮ ಕಾರಂತರಬಾಲವನದ ಸ್ಥಬ್ದಚಿತ್ರ

Puttur_Advt_NewsUnder_1
Puttur_Advt_NewsUnder_1

karavali1 karavali2

 *ಕೇವಲ 5ದಿನದಲ್ಲಿ ನಿರ್ಮಾಣವಾದ ಸ್ತಬ್ದಚಿತ್ರ

 *ಕಲಾಶಿಕ್ಷಕರಿಂದ ನಿರ್ಮಾಣಗೊಂಡಿತು ಸ್ಥಬ್ದಚಿತ್ರ

* ಉತ್ತಮ ಸ್ಥಬ್ದಚಿತ್ರಕ್ಕೆ ಬಹುಮಾನವೂ ಇದೆ

* ಇಂದು ಬೆಳಿಗ್ಗೆ ಪುತ್ತೂರು ಪೇಟೆಯಲ್ಲಿ ಪ್ರದರ್ಶನ ಸಂಚಾರ

* ಸ್ತಬ್ದಚಿತ್ರ ಜಿಲ್ಲೆಯಲ್ಲಿ ಮೊದಲ ಸ್ಥಾನ ಗಳಿಸಲಿ-ಶಕುಂತಳಾ ಶೆಟ್ಟಿ

ವರದಿ: ಸುನೀಲ್ ಕಾವು

ಪುತ್ತೂರು: ದ.23ರಂದು ಸಂಜೆ 4 ಗಂಟೆಗೆ ಮಂಗಳೂರಿನಲ್ಲಿ ಜಿಲ್ಲಾ ಕರಾವಳಿ ಉತ್ಸವಕ್ಕೆ ಚಾಲನೆ ದೊರೆಯಲಿದ್ದು, ಇದೇ ಪ್ರಥಮ ಬಾರಿಗೆ ಪುತ್ತೂರಿನಿಂದಲೂ ಸ್ಥಬ್ದಚಿತ್ರ(ಟ್ಯಾಬ್ಲೋ) ಮೆರವಣಿಗೆಯಲ್ಲಿ ರಂಗು ಪಡೆಯಲಿದ್ದು, ಅದಕ್ಕಾಗಿ ಪುತ್ತೂರಿನ ಆಫೀಸರ‍್ಸ್ ಕ್ಲಬ್ ಬಳಿಯಲ್ಲಿ ಡಾ| ಶಿವರಾಮ ಕಾರಂತರು ಬೆಳೆದ ಬಾಲವನದ ಚಿತ್ರಣದ ಸ್ತಬ್ದಚಿತ್ರ ಈಗಾಗಲೇ ಸಿದ್ಧಗೊಂಡಿದ್ದು ದ.22ರಂದು ಸಂಜೆ ಶಾಸಕಿ ಶಕುಂತಳಾ ಶೆಟ್ಟಿಯವರು ಸ್ತಬ್ದಚಿತ್ರವನ್ನು ಉದ್ಘಾಟಿಸಿದ್ದಾರೆ.

ತಾಲೂಕು ಕರಾವಳಿ ಉತ್ಸವ ಸಮಿತಿ, ತಾಲೂಕು ಆಡಳಿತ ಹಾಗೂ ಇತರ ಎಲ್ಲಾ ಇಲಾಖೆಗಳ ಸಹಕಾರದೊಂದಿಗೆ ಪುತ್ತೂರಿನಿಂದ ಜಿಲ್ಲಾ ಕರಾವಳಿ ಉತ್ಸವದ ಮೆರವಣಿಗೆಯಲ್ಲಿ ಮೇಳೈಸಲಿರುವ ಡಾ. ಶಿವರಾಮ ಕಾರಂತರ ಬಾಲವನವನ್ನು ಬಿಂಬಿಸುವ ಸ್ತಬ್ದ ಚಿತ್ರ ನಿರ್ಮಾಣದ ಬಹುತೇಕ ಕೆಲಸ ಪೂರ್ಣಗೊಂಡಿದ್ದು, ಫಿನಿಶಿಂಗ್ ಕಾರ್ಯ ಹಾಗೂ ಲೈಟಿಂಗ್ ಡೆಕೋರೇಶನ್ ಪೂರ್ಣಗೊಂಡು ದ.೨೩ರಂದು ಬೆಳಿಗ್ಗೆ ಮಂಗಳೂರಿಗೆ ಸಂಚಾರ ನಡೆಸಲಿದೆ.

ಸ್ತಬ್ದಚಿತ್ರ ಜಿಲ್ಲೆಯಲ್ಲಿ ಮೊದಲ ಸ್ಥಾನ ಗಳಿಸಲಿ-ಶಕುಂತಳಾ ಶೆಟ್ಟಿ: ಶಾಸಕಿ ಶಕುಂತಳಾ ಶೆಟ್ಟಿಯವರು ತೆಂಗಿನಕಾಯಿ ಒಡೆಯುವುದರ ಮೂಲಕ ಸ್ತಬ್ದಚಿತ್ರವನ್ನು ಉದ್ಘಾಟಿಸಿ ಮಾತನಾಡಿ ಡಾ| ಶಿವರಾಮ ಕಾರಂತರ ಬಾಲವನದ ಮೂಲ ನೆನಪನ್ನು ಬಿಂಬಿಸುವ ನಮ್ಮ ಪುತ್ತೂರಿನ ಸ್ತಬ್ದಚಿತ್ರವು ಜಿಲ್ಲಾ ಕರಾವಳಿ ಉತ್ಸವದ ಮೆರವಣಿಗೆಯಲ್ಲಿ ಯಶಸ್ವಿಯಾಗಿ ಮೂಡಿಬಂದು ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಗಳಿಸಲಿ ಎಂದು ಹಾರೈಸಿದರು. ತಾ.ಪಂ ಅಧ್ಯಕ್ಷೆ ಭವಾನಿ ಚಿದಾನಂದ, ಸಹಾಯಕ ಆಯುಕ್ತ ರಘುನಂದನ ಮೂರ್ತಿ, ಸಹಾಯಕ ಪೊಲೀಸ್ ಅಧೀಕ್ಷಕ ರಿಷ್ಯಂತ್ ಸಿ.ಬಿ, ತಹಶೀಲ್ದಾರ್ ಅನಂತಶಂಕರ, ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಜಗದೀಶ್ ಎಸ್. ರವರು ಮಾತನಾಡಿ ನಮ್ಮ ತಾಲೂಕಿನ ಸ್ತಬ್ದಚಿತ್ರವು ಜಿಲ್ಲಾ ಕರಾವಳಿ ಉತ್ಸವದ ಮೆರವಣಿಗೆಯಲ್ಲಿ ಒಳ್ಳೆಯ ಪ್ರದರ್ಶನವಾಗಿ ಮೂಡಿಬರಲಿ ಎಂದು ಶುಭಹಾರೈಸಿದರು. ತಾ.ಪಂ ಸದಸ್ಯ ಸಾಜ ರಾಧಾಕೃಷ್ಣ ಆಳ್ವ, ಕಂದಾಯ ನಿರೀಕ್ಷಕ ದಯಾನಂದ ಹೆಗ್ಡೆ, ಉಪತಹಶೀಲ್ದಾರ್ ಶ್ರೀಧರ್ ಜತೆಗಿದ್ದರು. ಬಿ.ಇ.ಒ ಶಶಿಧರ ಜಿ.ಎಸ್ ಸ್ವಾಗತಿಸಿದರು. ವಂದನಾರ್ಪಣೆಗೈದ ನಿವೃತ್ತ ಉಪನ್ಯಾಸಕ ಪ್ರೊ. ಬಿ.ಜೆ ಸುವರ್ಣರವರು ಸ್ತಬ್ದಚಿತ್ರ ನಿರ್ಮಾಣದ ಕುರಿತು ಮಾಹಿತಿ ನೀಡಿದರು.

ಕೇವಲ 5 ದಿನದಲ್ಲಿ ನಿರ್ಮಾಣವಾದ ಸ್ತಬ್ದಚಿತ್ರ: ಈ ಬಾರಿ ಪುತ್ತೂರಿನಿಂದಲೂ ಸ್ತಬ್ದಚಿತ್ರ ನಿರ್ಮಾಣಗೊಳ್ಳಲಿದೆ ಎಂದು ಸಹಾಯಕ ಆಯುಕ್ತರವರು ತಾಲೂಕು ಕರಾವಳಿ ಉತ್ಸವದ ಸಂದರ್ಭದಲ್ಲಿ ಸುಳಿವು ನೀಡಿದ್ದರು, ಆದರೆ ತಾಲೂಕು ಕರಾವಳಿ ಉತ್ಸವ ಮುಗಿದ ಬಳಿಕ ಜಿಲ್ಲಾ ಕರಾವಳಿ ಉತ್ಸವಕ್ಕೆ ಕೇವಲ ೫ ದಿನ ಮಾತ್ರ ಇದ್ದುದರಿಂದ ಈ ಅವಧಿಯಲ್ಲಿ ಸ್ತಬ್ದಚಿತ್ರ ನಿರ್ಮಾಣ ಕಾರ್ಯ ಪೂರ್ಣಗೊಳ್ಳುತ್ತದೆಯೋ ಎಂಬ ಪ್ರಶ್ನೆ ಕಾಡಿತ್ತು, ಆದರೆ ನಿರ್ಮಾಣ ಕಾರ್ಯದ ನೇತೃತ್ವ ವಹಿಸಿದ್ದ ಕಲಾಶಿಕ್ಷಕರ ತಂಡವು ಕೇವಲ ೫ ದಿನದಲ್ಲೇ ಬಹಳ ಅಚ್ಚುಕಟ್ಟಾದ, ಸುಂದರವಾದ ಸ್ತಬ್ದಚಿತ್ರ ನಿರ್ಮಾಣ ಮಾಡಿರುವುದನ್ನು ನೋಡಿ ತಾಲೂಕು ಕರಾವಳಿ ಉತ್ಸವ ಸಮಿತಿಯವರು ಸಂತೋಷಪಟ್ಟು ಕಲಾಶಿಕ್ಷಕರ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಕಲಾಶಿಕ್ಷಕರಿಂದ ನಿರ್ಮಾಣಗೊಂಡಿತು ಸ್ತಬ್ದಚಿತ್ರ: ಪುತ್ತೂರು ತಾಲೂಕಿನಲ್ಲಿ ಬೇರೆಲ್ಲಾ ತಾಲೂಕಿಗಳಿಗಿಂತಲೂ ವಿಭಿನ್ನ ರೀತಿಯಲ್ಲಿ ಸ್ತಬ್ದಚಿತ್ರ ನಿರ್ಮಾಣಗೊಂಡಿದೆ. ಅಂದರೆ ಬೇರೆಲ್ಲಾ ತಾಲೂಕುಗಳಲ್ಲಿ ಸ್ತಬ್ದಚಿತ್ರ ನಿರ್ಮಾಣದ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಗಳಿಗೆ ಕಂಟ್ರಾಕ್ಟ್ ನೀಡಲಾಗುತ್ತದೆ, ಆದರೆ ಪುತ್ತೂರಿನಲ್ಲಿ ಮಾತ್ರ ಕಲಾಶಿಕ್ಷಕರು ಸ್ವಯಂ ಮುಂದೆ ಬಂದು ಸ್ತಬ್ದಚಿತ್ರ ನಿರ್ಮಾಣದ ಜವಾಬ್ದಾರಿ ವಹಿಸಿರುವುದು ಕಲಾಪ್ರೇಮವನ್ನು ಬಿಂಬಿಸಿದೆ.

ಸ್ತಬ್ಧಚಿತ್ರ ನಿರ್ಮಾಣಕ್ಕೆ ಇವರ ಶ್ರಮ, ಸಹಕಾರ ಇದೆ: ಕಡಲತಡಿಯ ಭಾರ್ಗವ ಎಂದೇ ಕರೆಯಲ್ಪಡುವ ಡಾ. ಶಿವರಾಮ ಕಾರಂತರ ಬಾಲವನದ ಸ್ತಬ್ಧಚಿತ್ರ ನಿರ್ಮಾಣಕ್ಕೆ ಮಾಸ್ಟರ್ ಪ್ಲಾನರಿಯ ಎಸ್.ಕೆ ಆನಂದರವರು ಟ್ರಕ್(ಲಾರಿ)ನ್ನು ನೀಡಿ ಸಹಕರಿಸಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್‌ರವರ ನೇತೃತ್ವದಲ್ಲಿ ಚಿತ್ರಕಲಾ ಶಿಕ್ಷಕರ ತಂಡವು ಸ್ತಬ್ಧಚಿತ್ರ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ. ಚಿತ್ರಕಲಾ ಶಿಕ್ಷಕರಾದ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಸಂಸ್ಥೆಯ ಪ್ರವೀಣ್ ವರ್ಣಕುಟೀರ, ಕುಂಬ್ರ ಸರಕಾರಿ ಪ್ರೌಢ ಶಾಲೆಯ ಪ್ರಕಾಶ್ ಎನ್. ವಿಟ್ಲ, ಕೊಂಬೆಟ್ಟು ಸರಕಾರಿ ಪ್ರೌಢ ಶಾಲೆಯ ಜಗನ್ನಾಥ ಪಿ, ಹಿರೇಬಂಡಾಡಿ ಸರಕಾರಿ ಪ್ರೌಢಶಾಲೆಯ ಅನಿಲ್, ಬಿ.ಸಿ ರೋಡ್‌ನ ಸಂದೇಶ್ ಮತ್ತು ಬಳಗದ ಕಾರ್ಮಿಕ ವರ್ಗದವರು ನಿರ್ಮಾಣ ಕಾರ್ಯದಲ್ಲಿ ಶ್ರಮ ವಹಿಸಿದ್ದಾರೆ. ಸ್ತಬ್ದಚಿತ್ರದಲ್ಲಿ ಕೇಳಿಬರಲಿರುವ ಧ್ವನಿಮುದ್ರಣಕ್ಕೆ ಉದಯಶಂಕರ್‌ರವರು ಧ್ವನಿ ನೀಡಿದ್ದಾರೆ, ಪಿಸಿಎನ್‌ರವರು ವಾಯ್ಸ್ ಎಡಿಟಿಂಗ್ ಮಾಡಿದ್ದು, ಸೋನಿ ಮ್ಯೂಸಿಕ್ಸ್‌ನವರು ಸಹಕರಿಸಿದ್ದಾರೆ, ಲೈಟಿಂಗ್‌ನಲ್ಲಿ ಎಂ.ಡಿ.ಎಸ್ ಪುತ್ತೂರುನವರು ಸಹಕಾರ ನೀಡಿದ್ದಾರೆ.

ಬಹುಮಾನವೂ ಇದೆ: ಕರಾವಳಿ ಉತ್ಸವದ ಮೆರವಣಿಗೆಯಲ್ಲಿ ಹೆಚ್ಚು ಆಕರ್ಷಣೆಯನ್ನು ಪಡೆದ ಸ್ತಬ್ದಚಿತ್ರಗಳಿಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಕರಾವಳಿ ಉತ್ಸವ ಸಮಿತಿಯಿಂದ ಬಹುಮಾನವು ಸಿಗಲಿದೆ.

ಸ್ಥಬ್ಧಚಿತ್ರ ಹೀಗಿದೆ:

ಪುತ್ತೂರಿನಿಂದ ಹೊರಡುತ್ತಿರುವ ಸ್ತಬ್ದಚಿತ್ರದಲ್ಲಿ ಡಾ| ಶಿವರಾಮ ಕಾರಂತರ ಅವಧಿಯಲ್ಲಿ ಬಾಲವನದಲ್ಲಿದ್ದ ಮನೆ, ಅಧ್ಯಯನ ಪೀಠವನ್ನು ಕಲ್ಪನೆಯ ಆಧಾರದಲ್ಲಿ ಪ್ರಧಾನವಾಗಿ ಬಿಂಬಿಸಲಾಗಿದೆ, ಜತೆಗೆ ಮನೆಯ ಎದುರಿನಲ್ಲಿ ಎರಡು ಮರಗಳು, ಮಕ್ಕಳು ನಲಿದಾಡುವ ದೃಶ್ಯಗಳು, ಅಧ್ಯಯನ ಪೀಠದ ಎದುರಿನಲ್ಲಿ ಕಾರಂತರು ಪುಸ್ತಕ ಹಿಡಿದುಕೊಂಡು ನಿಂತಿರುವ ದೃಶ್ಯಗಳು ಗಮನ ಸೆಳೆಯುತ್ತಿವೆ, ಅಲ್ಲದೇ ಕಾರಂತರು ಬರೆದಿರುವ ಮೂಕಜ್ಜಿಯ ಕನಸುಗಳು, ಚೋಮನ ದುಡಿ ಸೇರಿದಂತೆ ಸುಮಾರು ೩೦ಕ್ಕೂ ಅಧಿಕ ಪುಸ್ತಕಗಳ ಚಿತ್ರಣವನ್ನು ಪ್ರದರ್ಶಿಸಿರುವುದು ಸ್ತಬ್ಧಚಿತ್ರದ ಅಂದವನ್ನು ಹೆಚ್ಚಿಸಿದೆ, ಅಲ್ಲದೇ ಸ್ತಬ್ದಚಿತ್ರಕ್ಕೆ ಇನ್ನಷ್ಟು ಮೆರುಗು ಹೆಚ್ಚಿಸಲು ಲೈಟಿಂಗ್ ಡೆಕೋರೇಷನ್ ಕೂಡ ಅಳವಡಿಸಲಾಗಿದ್ದು, ಮೆರವಣಿಗೆಯ ಸಂದರ್ಭದಲ್ಲಿ ತುಳು, ಕನ್ನಡ ಹಾಡುಗಳನ್ನೊಳಗೊಂಡ ಧ್ವನಿಸುರುಳಿ, ಹಾಗೂ ಬಾಲವನದ ವಿಶೇಷತೆಯನ್ನು ತಿಳಿಸುವ ಧ್ವನಿಮುದ್ರಣವನ್ನು ಕೂಡ ಹಾಕಲಾಗಿದೆ. ಒಟ್ಟಿನಲ್ಲಿ ಪ್ರಥಮ ಬಾರಿಗೆ ಪುತ್ತೂರಿನಿಂದ ಸಿದ್ಧಗೊಂಡಿರುವ ಸ್ತಬ್ದಚಿತ್ರವು ನೋಡುಗರ ಕಣ್ಮನ ಸೆಳೆಯುತ್ತಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.