ರೆಂಜ: ಅಯ್ಯಪ್ಪ ಸ್ವಾಮಿ ನವೀಕೃತ ಭಜನಾ ಮಂದಿರ ಲೋಕಾರ್ಪಣೆ

Puttur_Advt_NewsUnder_1
Puttur_Advt_NewsUnder_1

renja renja1

ನಂಬಿಕೆಗಳೇ ನಮ್ಮ ಒಳ್ಳೆಯ ಶಕ್ತಿ-ಆರ್.ಸಿ. ನಾರಾಯಣ

ಪುತ್ತೂರು: ನಂಬಿಕೆಗಳು ನಮ್ಮ ಒಳ್ಳೆಯ ಶಕ್ತಿ. ಪ್ರತಿಯೊಂದು ಕ್ಷೇತ್ರದಲ್ಲಿ ನಾವು ಮಾಡುವ ಕಾರ‍್ಯಗಳಲ್ಲಿ ಮೊದಲು ನಂಬಿಕೆ ಇರಿಸಿಕೊಳ್ಳಬೇಕು. ಈ ನಂಬಿಕೆಗಳೇ ಭಕ್ತಿಯ ಪ್ರತೀಕ’ ಎಂದು ಪುತ್ತೂರು ಆಡ್ ಮೀಡಿಯಾ ಮಾಲಕ ಆರ್.ಸಿ. ನಾರಾಯಣ ರೆಂಜ ಹೇಳಿದರು.

ರೆಂಜ ಶ್ರೀ ಅಯ್ಯಪ್ಪ ಸ್ವಾಮಿ ನವೀಕೃತ ಭಜನಾ ಮಂದಿರದ ಲೋಕಾರ್ಪಣೆ ಪ್ರಯುಕ್ತ ದ. 21ರಂದು ರಾತ್ರಿ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಭಕ್ತಿಯಿಂದ ಮುಗಿಯುವ ಕೈಗಳಿಗಿಂತ ದಾನ ಮಾಡುವ ಕೈಗಳು ಶ್ರೇಷ್ಠವಾದುದು. ನಾವು ಮಾಡುವ ಕಾಯಕದಲ್ಲಿ ಧರ್ಮ, ಭಕ್ತಿಯನ್ನು ಕಂಡಾಗ ದೇವರ ಅನುಗ್ರಹವನ್ನು ತನ್ನಿಂತಾನೆ ಪಡೆಯಬಹುದಾಗಿದೆ ಎಂದು ಹೇಳಿದ ಅವರು ಸಂಪಾದನೆ ಮತ್ತು ಸಂಬಂಧ ಎರಡೂ ಜೊತೆ ಜೊತೆಯಾಗಿ ಇರಬೇಕು. ಸಂಪಾದನೆಯಾದಾಗ ಸಂಬಂಧ ಮರೆಯಬಾರದು’ ಎಂದು ಹೇಳಿ ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿದ್ದ ಮಂಗಳೂರಿನ ಎಂಆರ್‌ಪಿಎಲ್ ಉದ್ಯೋಗಿ ಸೀತರಾಮ ರೈ ಚೆಲ್ಯಡ್ಕ ಮಾತನಾಡಿ, ’ಭಕ್ತಿಯಲ್ಲಿ ದೃಢತೆ ಇರಬೇಕಾಗುತ್ತದೆ. ಅಯ್ಯಪ್ಪ ಸ್ವಾಮಿ ವೃತಧಾರಿಗಳು ದೃಢಭಾವದಿಂದ ಭಕ್ತಿಯನ್ನು ಸ್ವಾಮಿಯಲ್ಲಿ ಕಂಡರೆ ಮಾತ್ರ ಮಾಲಾಧಾರಣೆ ಮಾಡಿದ ಪ್ರತಿಫಲ ಲಭಿಸುತ್ತದೆ. ಮಾಲಾಧಾರಣೆಯ ಸಂದರ್ಭದ ಆಚಾರಗಳು, ನಿಯಮಗಳು ವ್ಯಕ್ತಿಯ ಜೀವನದುದ್ದಕ್ಕೂ ಅನ್ವಯವಾದಾಗ ಭಕ್ತಿಯ ಸಾರ್ಥಕತೆ ಕಂಡು ಬರುತ್ತದೆ’ ಎಂದು ಹೇಳಿ ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಪುತ್ತೂರು ಕ್ಯಾಂಪ್ಕೋ ನೌಕರರ ಸಂಘದ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಪೆರ್ಣೆ ಶುಭ ಹಾರೈಸಿದರು. ಬೆಟ್ಟಂಪಾಡಿ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ಸದಾಶಿವ ರೈ ಸೂರಂಬೈಲು ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಭಜನಾ ಮಂದಿರದ ಗೌರವಾಧ್ಯಕ್ಷ ಕರುಣಾಕರ ಶೆಟ್ಟಿ ಕೊಮ್ಮಂಡ, ಅಧ್ಯಕ್ಷ ಶೇಷಪ್ಪ ರೈ ಮೂರ್ಕಾಜೆ, ಕಾರ್ಯದರ್ಶಿ ರವಿನಾಥ ಕೋನಡ್ಕ, ಗುರುಸ್ವಾಮಿಗಳಾದ ಪಿ. ಕೃಷ್ಣಪ್ಪ ಗೌಡ ರೆಂಜ ಹಾಗೂ ಶೇಷಪ್ಪ ಪೂಜಾರಿ ಇರ್ದೆ ಉಪಸ್ಥಿತರಿದ್ದರು. ಅಯ್ಯಪ್ಪ ಸೇವಾ ಟ್ರಸ್ಟ್ ಸದಸ್ಯ ಶಶಿಕುಮಾರ್ ರೈ ಬಾಲ್ಯೊಟ್ಟು ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ಭಜನಾ ಮಂದಿರದ ಅಧ್ಯಕ್ಷ ಶೇಷಪ್ಪ ರೈ ಮೂರ್ಕಾಜೆ ವಂದಿಸಿದರು. ಶ್ರೀಮತಿ ಭವ್ಯಾ ಪ್ರಾರ್ಥಿಸಿದರು. ರಮೇಶ್ ಪೂಜಾರಿ ಕುಕ್ಕುಪುಣಿ, ಆರ್.ಬಿ. ಸುವರ್ಣ ರವರು ಅತಿಥಿಗಳನ್ನು ಗೌರವಿಸಿದರು. ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಮುಖ್ಯಗುರು ರಾಜೇಶ್ ನೆಲ್ಲಿತ್ತಡ್ಕ ಕಾರ್ಯಕ್ರಮ ನಿರೂಪಿಸಿದರು.

ಬೆಳಿಗ್ಗೆ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳ ನೇತೃತ್ವದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಛಾಯಾಚಿತ್ರ ಪ್ರತಿಷ್ಠಾ ಮಹೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ ನಡೆಯಿತು. ಸುಮಾರು ೧೫೦೦ ಕ್ಕೂ ಅಧಿಕ ಮಂದಿ ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸಿದರು.

ಮನರಂಜಿಸಿದ ಯಕ್ಷಗಾನ ನಾಟ್ಯ ವೈಭವ

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ ಯಕ್ಷಗಾನ ನಾಟ್ಯ ವೈಭವ ನಡೆಯಿತು.  ಗಿರೀಶ್ ರೈ ಕಕ್ಯಪದವು, ಪ್ರಫುಲ್ಲಚಂದ್ರ ನೆಲ್ಯಾಡಿಯವರ ಭಾಗವತಿಕೆಯಲ್ಲಿ, ಕೃಷ್ಣಪ್ರಕಾಶ ಉಳಿತ್ತಾಯರವರ ಮದ್ದಳೆಯಲ್ಲಿ, ಚಂದ್ರಶೇಖರ ಕೊಂಕಣಾಜೆಯವರ ಚೆಂಡೆಯಲ್ಲಿ, ದಿಶಾ ಪಟ್ಲ, ರಕ್ಷಿತ್ ಶೆಟ್ಟಿ ಪಡ್ರೆ, ಸಬ್ಬಣಕೋಡಿ ರಾಮ ಭಟ್‌ರವರ ಮುಮ್ಮೇಳದೊಂದಿಗೆ ಕಾರ್ಯಕ್ರಮ ಮನರಂಜಿಸಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.