ಉಪ್ಪಿನಂಗಡಿ: ಅತಿಕ್ರಮಣ ತೆರವಿಗೆ ನೊಟೀಸು- ವರ್ತಕ ಸಂಘದ ಸಭೆ

Puttur_Advt_NewsUnder_1
Puttur_Advt_NewsUnder_1

uppinangady1 uppinangady2

ಉಪ್ಪಿನಂಗಡಿ: ಪೇಟೆಯಲ್ಲಿ ಚರಂಡಿ ಅತಿಕ್ರಮಣ ಮಾಡಲಾಗಿ ನಡೆಸಿರುವ ಕಾಮಗಾರಿಗಳು ಹಾಗೂ ವಿಸ್ತರಿತ ಮಾಡುಗಳ ಗುರುತು ಕಾರ್ಯ ನಡೆಸಿದ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅತಿಕ್ರಮಣದಾರರಿಗೆ ನೊಟೀಸ್ ನೀಡಿ, ತೆರವಿಗೆ ಒಂದು ವಾರಗಳ ಕಾಲಾವಕಾಶ ನೀಡಿದ್ದು, ಇದರಿಂದ ಅಸಮಾಧಾನಗೊಂಡಿರುವ ವರ್ತಕ ಸಂಘ ಸಭೆ ನಡೆಸಿ ಮಾನವೀಯತೆ ನೆಲೆಯಲ್ಲಿ ವರ್ತಕರಿಗೆ ಸಹಕಾರ ನೀಡುವಂತೆ ವರ್ತಕರ ನಿಯೋಗ ಪಂಚಾಯಿತಿ ಆಡಳಿತವನ್ನು ಭೇಟಿ ಮಾಡಿ ಮನವೊಲಿಸುವ ಬಗ್ಗೆ ನಿರ್ಣಯ ಅಂಗೀಕರಿಸಿತು.

 ವಿಸ್ತರಣೆ ಮಾಡಲಾಗಿರುವ ಮಾಡುಗಳನ್ನು ತೆರವು ಮಾಡುವಂತೆ ಗ್ರಾಮ ಪಂಚಾಯಿತಿ ಈಗಾಗಲೇ ಗುರುತು ಹಾಕಿದುದನ್ನು ತೆರವು ಕಾರ‍್ಯಾಚರಣೆ ನಡೆಸದಂತೆ ಮತ್ತು ಇದಕ್ಕೆ ಕಾಲಾವಕಾಶ ನೀಡುವಂತೆ, ಅನಿವಾರ‍್ಯ ಕಂಡು ಬಂದಲ್ಲಿ ವರ್ತಕರೇ ವಿಸ್ತರಿತ ಮಾಡುಗಳನ್ನು ತೆರವು ಮಾಡುವುದಾಗಿ ಗ್ರಾಮ ಪಂಚಾಯಿತಿಗೆ ಮನವರಿಕೆ ಮಾಡುವ ಬಗ್ಗೆ ಅಭಿಪ್ರಾಯಕ್ಕೆ ಬರಲಾಗಿ ನಿರ್ಣಯ ಅಂಗೀಕರಿಸಲಾಯಿತು.

 ಡಿ. ೨೨ರಂದು ಉಪ್ಪಿನಂಗಡಿ ವರ್ತಕ ಸಂಘದ ಅಧ್ಯಕ್ಷ ಪ್ರಶಾಂತ್ ಡಿ’ಕೋಸ್ತ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಅಂಗೀಕರಿಸಲಾಯಿತು. ವರ್ತಕ ಸಂಘದ ನಿಯೋಗ ಪಂಚಾಯಿತಿ ಆಡಳಿತವನ್ನು ಭೇಟಿ ಮಾಡಿ ಮನವಿ ಸಲ್ಲಿಸುವ ಬಗ್ಗೆ ಸಭೆ ನಿರ್ಧರಿಸಿತು.

 ಅರ್ಧ ತೆರವಿಗೆ ಸಮ್ಮತಿ-ಮೂಡದ ಒಮ್ಮತ:  ವರ್ತಕ, ಗ್ರಾಮ ಪಂಚಾಯಿತಿ ಸದಸ್ಯ ಯು.ಟಿ. ತೌಶೀಫ್ ಮಾತನಾಡಿ ಪಂಚಾಯಿತಿ ತೀರ್ಮಾಣದ ಹಿಂದೆ ಯಾರದೇ ಸ್ವಾರ್ಥ ಇಲ್ಲ, ಸಾರ್ವಜನಿಕ ಹಿತದೃಷ್ಠಿಯಿಂದ ಸಹಾಯಕ ಕಮೀಷನರ್‌ಗೆ ಹೋದ ದೂರಿನ ಮೇರೆಗೆ ಅವರ ಆದೇಶದಂತೆ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಬರುವ ಒತ್ತಡದ ಮೇರೆಗೆ ಈ ಕ್ರಮ ಅನಿವಾರ‍್ಯವಾಗಿದೆ. ಈ ಬಗ್ಗೆ ಅಧ್ಯಕ್ಷರ ಜೊತೆ ಈಗಾಗಲೇ ನಾನು ಮಾತುಕತೆ ನಡೆಸಿದ್ದು, ಈಗಾಗಲೇ ತೆರವಿಗೆ ಗುರುತಿಸಿರುವುದರಲ್ಲಿ ತೀರಾ ಸಮಸ್ಯೆ, ಅನಿವಾರ‍್ಯ ಎಂದು ಕಂಡು ಬರುವಲ್ಲಿ ಶೇಕಡಾ ೫೦ರಷ್ಟು ತೆರವು ಮಾಡುವುದು ಮತ್ತು ವರ್ತಕರು ತಮ್ಮ ಸರಂಜಾಮುಗಳನ್ನು ಚರಂಡಿ ಮೇಲೆ, ಫುಟ್‌ಪಾತ್ ಮೇಲೆ ಇಡದೆ ಸಾರ್ವಜನಿಕರಿಗೆ, ಪಾದಚಾರಿಗಳಿಗೆ ತೊಂದರೆ ಆಗದ ರೀತಿಯಲ್ಲಿ ನೋಡಿಕೊಳ್ಳುವ ಭರವಸೆ ನೀಡುವ ಬಗ್ಗೆ ಮಾತನಾಡಿzನೆ, ಇದಕ್ಕೆ ಅಧ್ಯಕ್ಷರು ಸಹಮತ ಸೂಚಿಸಿದ್ದಾರೆ. ವರ್ತಕ ಸಂಘವೂ ಈ ಬಗ್ಗೆ ತೀರ್ಮಾನ ಮಾಡಿ ಪಂಚಾಯಿತಿ ಆಡಳಿತಕ್ಕೆ ಮನವರಿಕೆ ಮಾಡುವುದು ಸೂಕ್ತ ಎಂದರು.

 ಇದಕ್ಕೆ ಸಭೆಯಲ್ಲಿ ಬಹುತೇಕ ಮಂದಿ ಸಹಮತ ವ್ಯಕ್ತಪಡಿಸಿದರು. ಆದರೆ ಕೆಲವರು ತಮ್ಮದೇ ಆದ ರೀತಿಯಲ್ಲಿ ಅಡ್ಡಿಪಡಿಸುವ ರೀತಿಯಲ್ಲಿ ಮಾತು ಮುಂದುವರಿಸಿದರು. ಒಂದು ಹಂತದಲ್ಲಿ ಈ ಬಗ್ಗೆ ವರ್ತಕ ಸಂಘ ಪಂಚಾಯಿತಿಗೆ ನಿಯೋಗ ತೆರಳಿ ಸಹಕಾರ ಕೋರುವುದಾಗಿ ಅಭಿಪ್ರಾಯಕ್ಕೆ ಬರಲಾಗಿತ್ತು. ಆದರೆ ಸಭೆ ಮುಗಿಯುವ ಹೊತ್ತಿಗೆ ಈ ತೀರ್ಮಾನಕ್ಕೆ ಒಮ್ಮತ ಮೂಡದೆ ಇದಕ್ಕೆ ವ್ಯತಿರಿಕ್ತ ಧೋರಣೆ ವ್ಯಕ್ತವಾಯಿತು.

 ವ್ಯಾಪಾರದ ಆಚೆ ಸಮಾಜದ ಬಗ್ಗೆಯೂ ಚಿಂತನೆ ಬೇಕು:  ವರ್ತಕ ಸಂಘದ ಮಾಜಿ ಅಧ್ಯಕ್ಷ ಯು.ಜಿ. ರಾಧಾ ಮಾತನಾಡಿ ನಾವು ಕಾನೂನು ರೀತಿಯಲ್ಲಿ ಹೋದರೆ ನಮ್ಮ ಬುಡಕ್ಕೇ ನೀರು ಬರುತ್ತದೆ, ಈ ಬಗ್ಗೆಯೂ ನಾವು ಚಿಂತಿಸಬೇಕು, ವರ್ತಕರ ನಿಯೋಗ ವರ್ತಕರ ಬಳಿ ಹೋಗಿ ನೈಜ ಸಮಸ್ಯೆಗಳನ್ನು ಗುರುತಿಸಿ, ಅರ್ಧ ತೆರವಿಗೆ ಸಮ್ಮತಿ ಸೂಚಿಸಬಹುದಾಗಿದೆ. ಈ ನಿಟ್ಟಿನಲ್ಲಿ ನಾವುಗಳು

ವ್ಯಾಪಾರದ ಆಚೆ ಸಮಾಜದ ಬಗ್ಗೆಯೂ ನಮ್ಮ ಚಿಂತೆ ಬೇಕು ಎಂದರು.

ಎರಡೂ ಕಡೆ ಎಡವಿದೆ:   ವರ್ತಕ ಸಂಘದ ಕಾನೂನು ಸಲಹೆಗಾರ ರವಿಕಿರಣ ಮಾತನಾಡಿ ಇಲ್ಲಿ ವರ್ತಕರೂ ಎಡವಿದ್ದಾರೆ, ಗ್ರಾಮ ಪಂಚಾಯಿತಿಯೂ ಎಡವಿದೆ. ಹೀಗಾಗಿ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಮುಗಿಸುವುದು ಒಳ್ಳೆಯದು ಎಂದರು.

 ವರ್ತಕ ಸಂಘದ ಸದಸ್ಯರುಗಳಾದ ರೂಪೇಶ್ ಅಲಿಮಾರ, ಫೈಝಲ್, ಸಂತೋಷ್ ಕುಮಾರ್, ಯು.ಟಿ. ಇರ್ಷಾದ್ ಸಂದರ್ಭೋಚಿತವಾಗಿ ಮಾತನಾಡಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಹಾರೂನ್ ರಶೀದ್, ಕೋಶಾಧಿಕಾರಿ ಕೈಲಾರ್ ರಾಜ್‌ಗೋಪಾಲ ಭಟ್ ಉಪಸ್ಥಿತರಿದ್ದರು. ಸಂಘದ ಕಾರ‍್ಯದರ್ಶಿ ಅಬ್ದುಲ್ ರಹಿಮಾನ್ ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.