ರಿಪೇರಿಗೆ ನೀಡಿದ ಮೊಬೈಲ್‌ನ್ನು ಹಿಂದಕ್ಕೆ ನೀಡದೆ ಸತಾಯಿಸಿದ ಆರೋಪ- ಸೆಲ್ ಸೊಲ್ಯೂಷನ್ ಮಾಲಕ ಪ್ರದೀಪ್ ವಿರುದ್ಧ ಪೊಲೀಸರಿಗೆ ದೂರು; ಸುದ್ದಿ ವರದಿಗೆ ಪತ್ರಿಕಾಗೋಷ್ಠಿ

Puttur_Advt_NewsUnder_1
Puttur_Advt_NewsUnder_1

pathri

* ದೂರು ಕೊಟ್ಟದ್ದು, ಠಾಣೆಗೆ ಕರೆಸಿದ್ದು, ಮುಚ್ಚಳಿಕೆ ಬರೆಸಿದ್ದು ಹೌದು

* ಪ್ರಕರಣ ಇತ್ಯರ್ಥಗೊಂಡ ಬಳಿಕವೂ ಕಪೋಲಕಲ್ಪಿತ ವರದಿ ಪ್ರಕಟಿಸಿದ್ದಾರೆ

* ಪತ್ರಿಕೆಯ ವರದಿ ನನ್ನ, ತಂದೆಯ ಮನಸ್ಸಿಗೆ ನೋವುಂಟು ಮಾಡಿದೆ

ಪುತ್ತೂರು: ಮೊಬೈಲ್ ವಿಚಾರದಲ್ಲಿ ದೂರು ನೀಡಿ ಬಳಿಕ ಇತ್ಯರ್ಥಗೊಂಡ ಬಳಿಕವೂ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಅವಹೇಳನಕಾರಿಯಾಗಿ ಸೆಲ್ ಸೊಲ್ಯೂಷನ್ ಮತ್ತು ನನ್ನ ಹಾಗೂ ತಂದೆ ಮತ್ತು ಸ್ನೇಹಿತನ ಕುರಿತು ಸುಳ್ಳು ಕತೆಯನ್ನು ಸೃಷ್ಟಿಸಿ ಕಪೋಲಕಲ್ಪಿತ ವರದಿ ಮಾಡಿದ್ದಾರೆ ಎಂದು, ರಿಪೇರಿಗೆಂದು ನೀಡಿದ್ದ ಮೊಬೈಲ್ ಹಿಂತಿರುಗಿಸದೆ ಸತಾಯಿಸುತ್ತಿದ್ದ ಕುರಿತು ಸೆಲ್ ಸೊಲ್ಯೂಷನ್ ಮೊಬೈಲ್ ಸಂಸ್ಥೆಯ ಪ್ರದೀಪ್ ಶೆಟ್ಟಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದ ಚಾರ್ವಾಕ ಕಾಸ್ಪಾಡಿಗುತ್ತು ಕುಸುಮಾಧರ ರೈಯವರ ಪುತ್ರ ರಂಜಿತ್ ರೈ ದ.20ರಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಲಿಖಿತ ಹೇಳಿಕೆಯೊಂದನ್ನು ಪತ್ರಿಕಾಗೋಷ್ಠಿಯಲ್ಲಿ ಓದಿದ ರಂಜಿತ್ ರೈ ನಾನು ನ.7ರಂದು ನನ್ನ ಬಾಬ್ತು ಸ್ಯಾಮ್‌ಸಂಗ್ ಮೊಬೈಲ್ ಹಾಳಾಗಿದ್ದುದರಿಂದ ಅದನ್ನು ರಿಪೇರಿ ಮಾಡಲು ಸೆಲ್ ಸೊಲ್ಯೂಷನ್ ಅಂಗಡಿಗೆ ಹೋಗಿ ವಿಚಾರ ತಿಳಿಸಿದ್ದೆ. ಸಂಸ್ಥೆಯ ಮಾಲಕ ಪ್ರದೀಪ್‌ರವರು ನನ್ನ ಮೊಬೈಲ್‌ನ್ನು ಕಲ್ಲಾರೆಯಲ್ಲಿರುವ ಸ್ಯಾಮ್‌ಸಂಗ್ ಮೊಬೈಲ್‌ನ ಅಧಿಕೃತ ಸರ್ವಿಸ್ ಸೆಂಟರ್‌ನಲ್ಲಿ ಕೊಡುವುದಾಗಿ ತಿಳಿಸಿದರು.ಆದ್ದರಿಂದ ನಾನು ಸ್ಯಾಮ್‌ಸಂಗ್ ಸರ್ವಿಸ್ ಸೆಂಟರ್‌ಗೆ ಹೋಗಿ ಜಾಬ್‌ಕಾರ್ಡ್ ಸಹಿ ಮಾಡಿ ಮೊಬೈಲ್‌ನ್ನು ರಿಪೇರಿಗೆ ಬಿಟ್ಟಿರುತ್ತೇನೆ.ಇದಾದ ನಂತರ ಕಲ್ಲಾರೆಯ ಸ್ಯಾಮ್‌ಸಂಗ್ ಸೆಂಟರ್‌ಗೆ ಹಲವಾರು ಬಾರಿ ಹೋಗಿದ್ದು ಅವರು ನನ್ನ ಮೊಬೈಲ್ ಬಾಬ್ತು ಸಮರ್ಪಕವಾದ ಉತ್ತರ ನೀಡದಿದ್ದರಿಂದ ನಾನು ಕುಪಿತಗೊಂಡಿದ್ದೆ. ಒಂದು ದಿನ ಸ್ಯಾಮ್‌ಸಂಗ್ ಸರ್ವಿಸ್ ಸೆಂಟರ್‌ನಲ್ಲಿ ವಿಚಾರಿಸಿದಾಗ ಅವರು ಮೊಬೈಲ್‌ನ್ನು ಸೆಲ್ ಸೊಲ್ಯೂಷನ್‌ಗೆ ಕಳುಹಿಸಿಕೊಡುವುದಾಗಿ ಹೇಳಿ, ಅವರಲ್ಲಿ ವ್ಯವಹರಿಸಿ ಎಂದು ಉತ್ತರ ನೀಡಿದ್ದರಿಂದ ನಂತರ ಸೆಲ್‌ಸೊಲ್ಯೋಷನ್‌ಗೆ ಹೋಗಿ ವಿಚಾರಿಸಿದ್ದೆ.  ಅವರು ನನ್ನ ಬಾಬ್ತು ಮೊಬೈಲ್‌ನ್ನು ಸ್ಯಾಮ್‌ಸಂಗ್ ಅಧಿಕೃತ ಸರ್ವಿಸ್ ಸೆಂಟರ್‌ನಿಂದಲೇ ಪಡೆದು ಕೊಳ್ಳಬೇಕೆಂದು ತಿಳಿಸಿದ್ದರಿಂದ ಗಲಿಬಿಲಿಗೊಂಡು ನಾನು ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದು, ಸದ್ರಿ ದೂರಿನ ಸತ್ಯಾಸತ್ಯತೆ ತಿಳಿದ ಪುತ್ತೂರು ನಗರ ಠಾಣಾಧಿಕಾರಿ ದೂರನ್ನು ಮುಕ್ತಗೊಳಿಸಿದ್ದಾರೆ.ಇದಾದ ನಂತರ ಕೆಲವು ದಿನಗಳ ಹಿಂದೆ ಪುತ್ತೂರಿನ ಸುದ್ದಿ ಬಿಡುಗಡೆ ವರದಿಗಾರ ಸುಧಾಕರ್ ಎಂಬವರು ನನ್ನನ್ನು ದೂರವಾಣಿ ಮೂಲಕ ಸಂಪರ್ಕಿಸಿ ನನ್ನ ದೂರಿನ ಬಗ್ಗೆ ವಿಚಾರಿಸಿದ್ದು, ನಾನು ಎಲ್ಲಾ ವಿಚಾರ ತಿಳಿಸಿ ಪತ್ರಿಕೆಯಲ್ಲಿ ಪ್ರಕಟಿಸಬಾರದಾಗಿ ತಿಳಿಸಿದ್ದೆ.ಆದರೂ ನಿನ್ನೆಯ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ನಾನು ಕೊಟ್ಟ ದೂರಿನ ವಿಚಾರವನ್ನು ತಿರುಚಿ ಕಪೋಲಕಲ್ಪಿತ ವರದಿಯನ್ನು ಮಾನಹಾನಿಕಾರಕ ರೀತಿಯಲ್ಲಿ ಪ್ರಕಟಿಸಿದ್ದಾರೆ.ಸದ್ರಿ ವರದಿ ಸತ್ಯಕ್ಕೆ ದೂರವಾಗಿರುತ್ತದೆ. ಸದ್ರಿ ವರದಿಯಲ್ಲಿ ನನ್ನ ತಂದೆಯವರ ಭಾವಚಿತ್ರವನ್ನು ಪ್ರಕಟಿಸಿ ಸುಳ್ಳು ಕತೆಯನ್ನು ಸೃಷ್ಟಿಸಿ ವರದಿ ಮಾಡಿದ್ದು ಇದರಿಂದ ನನಗೆ ಮತ್ತು ನನ್ನ ತಂದೆಗೆ ಮಾನಸಿಕ ಘಾಸಿ ಗೊಂಡಿರುತ್ತದೆ. ಈ ಕುರಿತು ನಾನು ಸುದ್ದಿ ಪತ್ರಿಕೆಯವರ ಮೇಲೆ ಸುಳ್ಳು ಹಾಗೂ ಮಾನಹಾನಿಕರ ವರದಿ ಪ್ರಕಟಿಸಿದಕ್ಕಾಗಿ ಕಾನೂನು ಕ್ರಮ ಕೈಗೊಳ್ಳುತ್ತೇನೆ’ ಎಂದರು.

ಪ್ರದೀಪ್ ವಿರುದ್ದ ದೂರು ನೀಡಿದ್ದು ನಿಜ: ನೀವು ಪೋಲಿಸರಿಗೆ ದೂರು ನೀಡಿದ್ದು ನಿಜವೇ ಎಂದು ಪತ್ರಕರ್ತರು ಕೇಳಿದಾಗ ’ನಾನು ಇವರ (ಪ್ರದೀಪ್ ಶೆಟ್ಟಿ) ವಿರುದ್ದ ಪೋಲಿಸರಿಗೆ ದೂರು ನೀಡಿದ್ದು ನಿಜ’ ಎಂದರು.

ನಾನು ಹೊಸ ಮೊಬೈಲ್ ತೆಗೆದುಕೊಂಡಾಗ ಅದು ವ್ಯಾರಂಟಿ ಒಳಗಡೆ ಹಾಳಾಗಿತ್ತು ಹಾಗಾಗಿ ಅದನ್ನು ಪಡೆದುಕೊಂಡ ಸೆಲ್‌ಸೊಲ್ಯೂಷನ್ ಅಂಗಡಿಯಲ್ಲಿ ಕೊಟ್ಟಿzನೆ.ಅವರು ಅದರ ವಾರಂಟಿಯ ನಿಟ್ಟಿನಲ್ಲಿ ಸರ್ವಿಸ್ ಸೆಂಟರ್‌ಗೆ ಕಳುಹಿಸಿದ್ದಾರೆ. ಸರ್ವಿಸ್ ಸೆಂಟರ್‌ನಲ್ಲಿ ಜಾಬ್ ಶೀಟ್‌ಗೆ ಸಹಿ ಹಾಕಿzನೆ. ಬಳಿಕ ಅಲ್ಲಿಂದ ಅವರು ಮೊಬೈಲ್‌ನ್ನು ಸೆಲ್‌ಸೊಲ್ಯೂಷನ್‌ಗೆ ಕೊಟ್ಟಿzನೆ ಎಂದಾಗ ಸುಮಾರು ರೂ. ೨೦ಸಾವಿರ ಮೊಬೈಲ್‌ನ್ನು ಆಗಿರುವುದರಿಂದ ನಾನು ಕನ್‌ಫ್ಯೂಸ್ ಆಗಿ ದೂರು ನೀಡಿರುವುದು ನಿಜ. ಎಲ್ಲಾ ಮುಕ್ತಾಯವಾದ ಬಳಿಕ ವರದಿಗಾರರು ಫೋನ್ ಮಾಡಿದ್ದರು. ಆಗ ಎಲ್ಲಾ ವಿಚಾರ ತಿಳಿಸಿ ಇದನ್ನು ಪತ್ರಿಕೆಯಲ್ಲಿ ಪ್ರಕಟಿಸಬೇಡಿ ಎಂದಿದ್ದೆ. ಆದರೂ ನನ್ನ ಗೆಳೆಯ ವಿತೇಶ್ ಶೆಟ್ಟಿ ಹಾಗೂ ನನ್ನ ತಂದೆ ಮತ್ತು ನನ್ನ ಭಾವ ಚಿತ್ರ ಹಾಕಿ ಕಪೋಲ ಕಲ್ಪಿತ ವರದಿ ಮಾಡಿದ್ದಾರೆ ಎಂದು ರಂಜಿತ್ ಹೇಳಿದರು.

ಸ್ವಲ್ಪ ಗೊಂದಲವಾಗಿತ್ತು: ಮೊಬೈಲ್ ವಿಚಾರ ಮುಗಿದು ಹೋಗಿದೆ. ಮೊಬೈಲ್ ಕೂಡಾ ಸಿಕ್ಕಿದೆ. ಅದಾದ ಬಳಿಕ ಮತ್ತೆ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ವರದಿ ಮಾಡಲಾಗಿದೆ.ನಾನು ಯುವ ಭಾರತ್ ವಾಟ್ಸ್‌ಅಪ್ ಗ್ರೂಪ್‌ನಲ್ಲಿ ಗುರುತಿಸಿಕೊಂಡಿದ್ದು, ನಮಗೂ ಸುದ್ದಿ ಬಿಡುಗಡೆ ಪತ್ರಿಕೆಗೂ ಈ ಹಿಂದೆಯೇ ವಿರೋಧಗಳಿತ್ತು.ಈ ನಿಟ್ಟಿನಲ್ಲಿ ನಮ್ಮಲ್ಲಿ ಒಬ್ಬೊಬ್ಬರನ್ನಾಗಿ ಟಾರ್ಗೆಟ್ ಮಾಡಿ ನಮ್ಮ ವಿರುದ್ಧ ಮಾನಹಾನಿಕರ ಸುಳ್ಳು ವರದಿ ಮಾಡುತ್ತಿದ್ದಾರೆ ಎಂದು ಸೆಲ್ ಸೊಲ್ಯೂಷನ್‌ನ ಪ್ರದೀಪ್ ಆರೋಪಿಸಿದರು. ವರದಿಯಲ್ಲಿ ಎಲ್ಲೂ ಯುವ ಭಾರತ್ ವಿಚಾರವಿಲ್ಲ. ಹಾಗಿದ್ದ ಮೇಲೆ ನಿಮ್ಮನ್ನು ಹೇಗೆ ಟಾರ್ಗೆಟ್ ಮಾಡಿರಲು ಸಾಧ್ಯ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಪ್ರದೀಪ್ ಬಳಿ ಉತ್ತರವಿರಲಿಲ್ಲ.

ಕಾನತ್ತೂರಿಗೆ ಹೇಳಿಲ್ಲ-ರಂಜಿತ್; ಹೇಳಿದ್ದಕ್ಕೆ ನಮ್ಮಲ್ಲಿ ದಾಖಲೆಯಿದೆ- ವರದಿಗಾರ: ಪತ್ರಿಕೆಯಲ್ಲಿ ಇಲ್ಲ ಸಲ್ಲದ ಆರೋಪ ಮತ್ತು ಕಾನತ್ತೂರಿಗೆ ಹೇಳದ ವಿಚಾರ ಪ್ರಕಟವಾಗಿದೆ ಎಂದು ರಂಜಿತ್‌ರವರು ಹೇಳಿದಾಗ ನಿಮ್ಮ ತಂದೆಯವರು ಮಾತನಾಡಿ ಕಾನತ್ತೂರಿಗೆ ಇಡುವುದಾಗಿ ಹೇಳಿರುವುದಕ್ಕೆ ನಮ್ಮಲ್ಲಿ ದಾಖಲೆಯಿದೆ ಎಂದು ಸುದ್ದಿ ವರದಿಗಾರ ಹೇಳಿದಾಗ ಗಲಿಬಿಲಿಗೊಂಡ ರಂಜಿತ್, ಅದು ಸರಿ ಆದರೂ ದೂರು ಕೊಟ್ಟದ್ದು ನಾನಲ್ಲವೇ ಎಂದರು, ಮತ್ತೊಮ್ಮೆ ನನ್ನ ತಂದೆಯವರು ಹೇಳಲು ಸಾಧ್ಯವಿಲ್ಲ ಎಂದರು.ಈ ಕುರಿತು ನಮ್ಮಲ್ಲಿ ಪೂರ್ಣ ವಾಯ್ಸ್ ರೆಕಾರ್ಡ್ ಇದೆ ಎಂದು ವರದಿಗಾರ ಪುನರುಚ್ಚರಿಸಿದಾಗ, ಸರಿ ಆದರೆ ಠಾಣೆಯಲ್ಲಿ ಮುಗಿದ ವಿಚಾರ ಬಳಿಕ ಮತ್ತೆ ಪ್ರಕಟಣೆ ಮಾಡಬಾರದಾಗಿತ್ತು ಎಂದು ರಂಜಿತ್ ಹೇಳಿದರು.

ದೂರು ಕೊಟ್ಟದ್ದು ಠಾಣೆಗೆ ಕರೆಸಿದ್ದು ಮುಚ್ಚಳಿಕೆ ಬರೆಸಿದ್ದು ಎಲ್ಲವೂ ಹೌದು:  ನಮ್ಮೊಳಗೆ ಮುಗಿದ ವಿಚಾರ ಇಂತಹ ಎಷ್ಟೋ ವಿಚಾರ ಠಾಣೆಯಲ್ಲಿ ನಡೆಯುತ್ತದೆ ಹೋಗುತ್ತದೆ ಅದನ್ನು ಪತ್ರಿಕೆಯಲ್ಲಿ ಹಾಕುವುದಿಲ್ಲ. ನಮ್ಮನ್ನೆ ಟಾರ್ಗೆಟ್ ಮಾಡಿದ್ದಾರೆ ಎಂದು ಪ್ರದೀಪ್ ಶೆಟ್ಟಿ ಹೇಳಿದಾಗ ದೂರು ಕೊಟ್ಟದ್ದು, ನಿಮ್ಮನ್ನು ಪೊಲೀಸರು ಠಾಣೆಗೆ ಕರೆಸಿದ್ದು, ಮುಚ್ಚಳಿಕೆ ಬರೆಸಿಕೊಂಡದ್ದು ಹೌದಲ್ಲ? ಎಂದು ಪತ್ರಕರ್ತರು ಕೇಳಿದಾಗ ನಾನು ಇವರ ವಿರುದ್ಧ ದೂರು ಕೊಟ್ಟಿರುವುದು ಹೌದು, ಪ್ರದೀಪ್‌ರವರನ್ನು ಠಾಣೆಗೆ ಕರೆಸಿದ್ದೂ ಹೌದು, ಮುಚ್ಚಳಿಕೆ ಬರೆಸಿದ್ದೂ ಹೌದು ಎಂದು ಪ್ರದೀಪ್ ಹೇಳಿದರು.ಇಷ್ಟೆಲ್ಲಾ ಆದ ಬಳಿಕ ಪತ್ರಿಕೆಯಲ್ಲಿ ವರದಿಯನ್ನು ಮಾಡಬಾರದು ಎಂದು ನೀವು ಹೇಳುವುದು ಸರಿಯೇ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಆದರೂ ಮುಗಿದ ವಿಚಾರವಾದ್ದರಿಂದ ಅಗತ್ಯವಿರಲಿಲ್ಲ ಎಂದು ಹೇಳಿದರು.

ಪತ್ರಿಕಾಗೋಷ್ಠಿ ಆರಂಭದಲ್ಲಿ ಸೆಲ್ ಸೊಲ್ಯೂಷನ್‌ನ ಪ್ರದೀಪ್ ಶೆಟ್ಟಿ ಇವರು ರಂಜಿತ್ ರೈ ಕಾಸ್ಪಾಡಿಗುತ್ತು, ಹಿಂದೂ ಜಾಗರಣ ವೇದಿಕೆಯ ಸಹ ಸಂಚಾಲಕ ಎಂದು ರಂಜಿತ್ ರೈಯವರನ್ನು ಪರಿಚಯಿಸುತ್ತಾ, ದ.೧೯ರಂದು ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಪ್ರಕಟವಾಗಿರುವ ಮೊಬೈಲ್ ವಿಚಾರದ ವರದಿಯ ಕುರಿತು ಸ್ಪಷ್ಟನೆ ನೀಡುವುದಕ್ಕಾಗಿ ನಾವು ಈ ಪತ್ರಿಕಾಗೋಷ್ಠಿಗೆ ಬಂದಿದ್ದೇವೆ ಎಂದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.