ಕುಪ್ಪಳ್ಳಿಯಲ್ಲಿ ಪ್ರಕೃತಿ ಅಧ್ಯಯನ ಶಿಬಿರ

Puttur_Advt_NewsUnder_1
Puttur_Advt_NewsUnder_1

kuppalliನಿಸರ್ಗದೊಡನೆ ಬೆರೆತು ಜೀವವೈವಿಧ್ಯತೆಯ ಸೂಕ್ಷ್ಮತೆಗಳನ್ನು ಗ್ರಹಿಸಲು ಸಹಾಯಕವಾಗುವಂತೆ ವಿವೇಕಾನಂದ ಕಾಲೇಜಿನ ನೇಚರ್‌ಕ್ಲಬ್ ಪ್ರತಿವರ್ಷವೂ ಪ್ರಥಮ ವರ್ಷದ ಜೀವಶಾಸ್ತ್ರದ ಪದವಿ ವಿದ್ಯಾರ್ಥಿಗಳನ್ನು ನಿಸರ್ಗಕ್ಕೆ ತೆರೆದುಕೊಳ್ಳುವಂತೆ ಮಧ್ಯಾವದಿ ರಜೆಯಲ್ಲಿ ಪ್ರಕೃತಿ ಶಿಬಿರವನ್ನು ಇತ್ತೀಚೆಗೆ ಶಿವಮೊಗ್ಗ ಜಿಲ್ಲೆಯಲಿ ರಾಷ್ಟ್ರಕವಿ ಕುವೆಂಪುರವರ ಹುಟ್ಟೂರಾದ ಕುಪ್ಪಳ್ಳಿಯ ಕುವೆಂಪು ಜೀವವೈವಿಧ್ಯ ವನದಲ್ಲಿ ಏರ್ಪಡಿಸಲಾಗಿದೆ. ನೇಚರ್‌ಕ್ಲಬ್‌ನ ಸಂಚಾಲಕರಾದ ಪ್ರೊ. ದೇವಿಪ್ರಸಾದ್‌ಕೆ.ಯನ್. ರವರು ಸಂಯೋಜಿಸಿದ ಒಟ್ಟು 5 ದಿನಗಳ ಈ ಶಿಬಿರದಲ್ಲಿ 30 ವಿದ್ಯಾರ್ಥಿಗಳು ಭಾಗವಹಿಸಿದ್ದು, ಕಾಲೇಜಿನ ಉಪನ್ಯಾಸಕಿಯರಾದ ಮಿಸ್. ಸುಶ್ಮಿತಾ ಮತ್ತು ಮಿಸ್. ಮಾಲತಿ ಶಿಬಿರಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು. ವನಸಿರಿಯಿಂದ ಸಮೃದ್ಧವಾಗಿರು ಜೈವಿಕವನದಲ್ಲಿ ಸಸ್ಯ ಸಂಕುಲವನ್ನು ವಿವಿಧ ಕ್ರಮಗಳಿಂದ ಗುರುತಿಸುವ ಬಗ್ಗೆ ಶಿಬಿರಾರ್ಥಿಗಳಿಗೆ ತರಬೇತಿ ನೀಡಿ ಅವುಗಳ ಉಪಯೋಗದ ಬಗ್ಗೆ ಮಾಹಿತಿ ನೀಡಲಾಯಿತು. ಜೈವಿಕ ವನದಲ್ಲಿ ವಾಸಿಸುವ ವಿವಿಧ ಪಕ್ಷಿಗಳು ಹಾಗೂ ಬಣ್ಣ ಬಣ್ಣದ ಚಿಟ್ಟೆಗಳನ್ನು ಹತ್ತಿರದಿಂದ ವೀಕ್ಷಿಸಿ ಅವುಗಳ ಚಟುವಟಿಕೆಗಳನ್ನು ದಾಖಲಿಸಿ ನಿಸರ್ಗದಲ್ಲಿಯೇ ಅವುಗಳನ್ನು ಗುರುತಿಸುವ ಬಗ್ಗೆ ತರಬೇತಿ ನೀಡಲಾಯಿತು. ಕುವೆಂಪುgವರ ಅತ್ಯಂತ ಪ್ರಿಯ ಸ್ಥಳಗಳಾದ ನವಿಲುಕಲ್ಲು ಬೆಟ್ಟ, ಚಿಬಲ್ ಗುಡ್ಡೆ, ತುಂಗಾನದಿ ತೀರ, ಕವಿ ಶೈಲ ಪ್ರದೇಶಗಳಲ್ಲಿ ಜೀವವೈವಿಧ್ಯವನ್ನು ಅಧ್ಯಯನ ಮಾಡಲಾಯಿತು. ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಕಡಿದಾಳ್ ಪ್ರಕಾಶ್‌ರವರು ಕುವೆಂಪುರವರ ಬದುಕಿನ ಬಗ್ಗೆ ಹಾಗೂ ಅವರ ಕೃತಿಗಳ ಬಗ್ಗೆ ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು. ಕುವೆಂಪುರವರ ಸಾಕ್ಷ್ಯಚಿತ್ರವನ್ನೂ ಕೂಡ ಶಿಬಿರಾವಧಿಯಲ್ಲಿ ವೀಕ್ಷಿಸಲಾಯಿತು. ಪೂರ್ಣಚಂದ್ರ ತೇಜಸ್ವಿಯವರ ಪಕ್ಷಿಗ್ಯಾಲರಿಯನ್ನು ವೀಕ್ಷಿಸಲಾಯಿತು. ಕುವೆಂಪು ವಾಸವಿದ್ದ ಮನೆಯು “ಕವಿ ಮನೆ” ಎಂಬ ಹೆಸರಿನಲ್ಲಿ ಪ್ರಮುಖ ವಸ್ತು ಸಂಗ್ರಾಲಯವಾಗಿದ್ದು, ಶಿಬಿರಾರ್ಥಿಗಳು ಇಲ್ಲಿಗೆ ಭೇಟಿ ನೀಡಿ ಕುವೆಂಪುರವರ ಜೀವನಚರಿತ್ರೆಯನ್ನು ತಿಳಿದುಕೊಂಡರು. ಶಿಬಿರಾವಧಿಯಲ್ಲಿ ಕುಪ್ಪಳ್ಳಿಯ ಸುತ್ತ ಮುತ್ತದ ಕೆರೆ ಪ್ರದೇಶಗಳಿಗೆ ಹಾಗೂ ಭತ್ತದ ಗದ್ದೆಗಳಿಗೆ ಭೇಟಿ ನೀಡಿ ಅಲ್ಲಿಯ ಜೀವ ವೈವಿಧ್ಯದ ಬಗ್ಗೆ ಮಾಹಿತಿಗಳನ್ನು ಶಿಬಿರಾರ್ಥಿಗಳು ದಾಖಲಿಸಿಕೊಂಡರು. ಕುವೆಂಪುರವರ “ಓ ನನ್ನಚೇತನಾ…….” ಕವನವನ್ನು ಶಿಬಿರಾವಧಿಯಲ್ಲಿ ಪ್ರಾರ್ಥನಗೀತೆಯಾಗಿ ಪ್ರತಿದಿನವೂ ಹಾಡಲಾಗಿದೆ.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.