ಸವಣೂರು ಸಿಂಡಿಕೇಟ್ ಬ್ಯಾಂಕಿನ ವತಿಯಿಂದ ರೈತರ ದಿನಾಚರಣೆ ಅಡಿಕೆಯೊಂದಿಗೆ ಉಪಬೆಳೆ ಕೃಷಿ ಮಾಡಬೇಕು-ವೆಂಕಟೇಶ್

Puttur_Advt_NewsUnder_1
Puttur_Advt_NewsUnder_1

savanooruಪುತ್ತೂರು: ಕೃಷಿಕರಲ್ಲಿ ಎಷ್ಟು ಎಕ್ರೆ ಜಾಗ ಇದೆ ಎಂಬುದು ಮುಖ್ಯವಲ್ಲ, ಇದ್ದ ಜಾಗದಲ್ಲಿ ಎಲ್ಲ ಬಗೆಯ ಕೃಷಿಯನ್ನು ಮಾಡುವುದರ ಜೊತೆಗೆ ಸ್ವಾವಲಂಬಿಗಳಾಗುವ ಮೂಲಕ ಕೃಷಿ ಕ್ಷೇತ್ರದಲ್ಲಿ ಹೊಸ ಬದಲಾವಣೆಯನ್ನು ತರಬೇಕು ಎಂದು ಸವಣೂರು ಸಾಹಿತ್ಯ ವೇದಿಕೆಯ ಸಂಚಾಲಕ, ನ್ಯಾಯವಾದಿ ವೆಂಕಟೇಶ್ ಭಟ್ ಕೊಯಕುಡೆ ಹೇಳಿದರು. ಅವರು ದ.22 ರಂದು   ಸವಣೂರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಸಿಂಡಿಕೇಟ್ ಬ್ಯಾಂಕ್ ಸವಣೂರು ಶಾಖೆಯ ಆಶ್ರಯದಲ್ಲಿ  ಜರಗಿದ ರೈತರ ದಿನಾಚರಣೆ ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿ ಅಡಿಕೆಯೊಂದಿಗೆ ರೈತರು ಉಪಬೆಳೆ ಕೃಷಿಯನ್ನು ಮಾಡಬೇಕು ಎಂದು ಹೇಳಿ,  ರೈತರು ತಮ್ಮ ತೋಟಕ್ಕೆ ಬರುವ ಮಂಗಗಳ ಹಾವಳಿಯನ್ನು ತಪ್ಪಿಸಲು, ತೋಟದ ಅಂಚಿನಲ್ಲಿ ಕಾಡು ಹಣ್ಣಿನ ಗಿಡಗಳನ್ನು ನಾಟಿ ಮಾಡುವಂತೆ ಸಲಹೆಯನ್ನು ನೀಡಿದರು.

ಪ್ರಗತಿಪರ ಕೃಷಿಕ ಡಿ.ಎಲ್.ಗಾಂಭೀರರವರು ಮಾತನಾಡಿ ವಾಹನಗಳ ಖರೀದಿಗೆ ಶೇಕಡಾ 80 ರಷ್ಟು ಸಾಲ ನೀಡುವ ಬ್ಯಾಂಕ್‌ಗಳು 20 ಲಕ್ಷ ಮೌಲ್ಯವನ್ನು ಹೊಂದಿರುವ ಕೃಷಿ ಭೂಮಿಗೆ ಒಂದು ಲಕ್ಷ ರೂಪಾಯಿ ಸಾಲವನ್ನು ನೀಡಲೂ ಸತಾಯಿಸುವ ಪ್ರಸಂಗಗಳು ಇದೆ ಎಂದು ಹೇಳಿದರು.

ವೇದಿಕೆಯಲ್ಲಿ ಸವಣೂರು ಗ್ರಾಮ ಪಂಚಾಯತ್ ಸದಸ್ಯರುಗಳಾದ ಸತೀಶ್ ಬಲ್ಯಾಯ ಕನಡಕುಮೇರು, ಸತೀಶ್ ಅಂಗಡಿಮೂಲೆ ಉಪಸ್ಥಿತರಿದ್ದರು. ಪ್ರಗತಿಪರ ಕೃಷಿಕರಾದ ಕೇಶವಚಂದ್ರ ಸರ್ವೆ ಸಹಿತ ಅನೇಕ ಮಂದಿ ಭಾಗವಹಿಸಿದರು.

ಸೀಂಡಿಕೇಟ್ ಬ್ಯಾಂಕ್ ಸವಣೂರು ಶಾಖೆಯ ಗ್ರಾಮೀಣ ಅಭಿವೃದ್ಧಿ ಅಧಿಕಾರಿ ನೀತು ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.