ರಾಜ್ಯ ದಾರಿಮಿ ಉಲಮಾ ಒಕ್ಕೂಟದ ಮೀಲಾದ್ ಮಹಫಿಲ್ ಸಮಾಜದ ಸರ್ವತೋಮುಖ ಅಭಿವೃದ್ಧಿಯೇ ಸಮಸ್ತದ ಮುಖ್ಯ ಧ್ಯೇಯ-ಎ.ವಿ. ಉಸ್ತಾದ್

Puttur_Advt_NewsUnder_1
Puttur_Advt_NewsUnder_1

 

rajya-darimiಪುತ್ತೂರು: ಸಮಾಜದ ಧಾರ್ಮಿಕ ಶೈಕ್ಷಣಿಕ ರಾಜಕೀಯ ಸಾಂಸ್ಕೃತಿಕ ಆರ್ಥಿಕ ಅಭಿವೃದ್ದಿಯನ್ನೆ ಗುರಿಯಾಗಿಟ್ಟು ಕಾರ್ಯಾಚರಿಸುವುದೇ ಸಮಸ್ತ ಉಲಮಾ ಒಕ್ಕೂಟದ ಗುರಿಯಾಗಿದ್ದು ಇದರ ಪ್ರಚಾರಕರಾದ ದಾರಿಮಿಗಳ ರಾಜ್ಯ ಒಕ್ಕೂಟದೊಂದಿಗೆ ಕೈ ಜೋಡಿಸಿ ಅವರ ಚಟುವಟಿಕೆಗಳಲ್ಲಿ ಸಹಭಾಗಿಯಾಗಬೇಕೆಂದು ಸಮಸ್ತದ ಕೇಂದ್ರ ಮುಶಾವರ ಸದಸ್ಯ ಶೈಖುನಾ ಎ.ವಿ ಉಸ್ತಾದ್‌ರವರು ಹೇಳಿದರು.

ರಾಜ್ಯ ದಾರಿಮಿ ಉಲಮಾ ಸಂಘ ದ ವತಿಯಿಂದ ಅಕ್ಕರಂಗಡಿ ಕೇಂದ್ರ ಮಸೀದಿ ವಠಾರದಲ್ಲಿ ಸಂಘಟಿಸಲಾಗಿದ್ದ ಮೀಲಾದ್ ಮಹಫಿಲ್ ಮತ್ತು ಅನುಸ್ಮರಾಣಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಗಾರರಾಗಿ ಅವರು ಮಾತನಾಡಿದರು.

ಸಮಾರಂಭವನ್ನು ಸ್ಥಳೀಯ ಖತೀಬ್ ಕೆ.ಎಸ್. ಇಸ್ಮಾಯಿಲ್ ದಾರಿಮಿ ಉದ್ಘಾಟಿಸಿ ಮಾತನಾಡಿ ಸಮಾಜದ ಅಭಿವೃದ್ಧಿಗೆ ಉಲಮಾ ಉಮರಾಗಳು ಜೊತೆಗೂಡಿ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸ ಬೇಕೆಂದರು.

ಮದ್ಹುರಸೂಲ್ ಭಾಷಣ ಮಾಡಿದ ಬಿ.ಕೆ. ಅಬ್ದುಲ್ ಖಾದಿರ್ ಮುಸ್ಲಿಯಾರ್ ಬಂಬ್ರಾಣ ಸಮಾಜದ ಎಲ್ಲಾ ಸಮಸ್ಯೆಗಳಿಗೂ ಪ್ರವಾದಿ ಅನುಕರಣೆ ಮಾಡುವುದೊಂದೇ ಪರಿಹಾರ ಎಂದರು  ಅಧ್ಯಕ್ಷತೆ ವಹಿಸಿದ್ದ ರಾಜ್ಯ ದಾರಿಮಿ ಉಲಮಾ ಒಕ್ಕೂಟದ ಅಧ್ಯಕ್ಷ, ಪುತ್ತೂರು ಬದ್ರಿಯಾ ಮಸೀದಿಯ ಖತೀಬರಾದ ಯಸ್ ಬಿ. ಮುಹಮ್ಮದ್ ದಾರಿಮಿರವರು ಮಾತನಾಡಿ, ಇಂದು ಕರ್ನಾಟಕದ ಕರಾವಳಿಯಲ್ಲಿ ಉನ್ನತ ಉಲಮಾಗಳು ಸೃಷ್ಟಿಯಾಗಿದ್ದು ಅವರ ಸದ್ಬಳಕೆಗೆ ಒತ್ತು ನೀಡುವ ಮೂಲಕ ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸ ಬೇಕೆಂದರು.

ಕುಂಬ್ರ ಕೆ.ಐ.ಸಿ ವಿದ್ಯಾಸಂಸ್ಥೆಯ ಮೇನೇಜರ್ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ,ಕುಕ್ಕಿಲ ಅಬ್ದುಲ್ ಖಾದಿರ್ ದಾರಿಮಿ, ಅಬ್ದುಲ್ ರಹಿಮಾನ್ ದಾರಿಮಿ ತಬೂಕ್, ಕುಂಬ್ರ ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ ಅಧ್ಯಕ್ಷ ಕೆ ಪಿ ಅಹ್ಮದ್ ಹಾಜಿ ಆಕರ್ಷಣ್ ಮೊದಲಾದವರು ಸಂದರ್ಭೋಚಿತವಾಗಿ ಮಾತನಾಡಿದರು. ಅಬೂಕ್ಕರ್ ದಾರಿಮಿ ಕಿರಾಹತ್ ಪಠಿಸಿದರು.

ಝೈನುಲ್ ಆಬೀದೀನ್ ಜಿಪ್ರಿ ತಂಙಲ್ ಮಲಪುರಂ, ಅಮೀರ್ ತಂಙಳ್ ಕೀನ್ಯ, ಮಾಹಿನ್ ದಾರಿಮಿ ಪಾತೂರು ವಿವಿಧ ಕಾರ್ಯಕ್ರಮಗಳಿಗೆ ನೇತೃತ್ವ ನೀಡಿದರು. ಮೌಲಾನಾ ಯು.ಕೆ. ಅಬ್ದುಲ್ ಅಝೀಝ್ ದಾರಿಮಿ ಸ್ವಾಗತಿಸಿದರು.

ಸಮಸ್ತ ವಿದ್ಯಾಭ್ಯಾಸ ಮಂಡಳಿಯ ಹಾಜಿ ಕೆ.ಎಸ್ ಇಸ್ಮಾಯೀಲ್ ಕಲ್ಲಡ್ಕ, ಹಾಜಿ ಜಿ.ಅಬೂಬಕರ್ ಗೋಳ್ತಮಜಲು, ಮುಫತ್ತಿಶ್ ಹನೀಫ್ ಮುಸ್ಲಿಯಾರ್, ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್.ಖಾದರ್ ಬಂಟ್ವಾಳ, ಆದಂ ದಾರಿಮಿ ಅಜ್ಜಿಕಟ್ಟೆ, ಇಬ್ರಾಹಿಂ ದಾರಿಮಿ ಕಡಬ, ಉಮರ್ ಫೈಝಿ ಸಾಲ್ಮರ, ಅಬ್ಬಾಸ್ ಮದನಿ ಗಟ್ಟಮನೆ, ಉಮರ್ ದಾರಿಮಿ ಪಟ್ಟೋರಿ, ಅಬ್ಬಾಸ್ ದಾರಿಮಿ ಕೆಲಿಂಜ, ಅಬೂಸಾಲಿಹ್ ಫೈಝಿ, ಆದಂ ಫೈಝಿ, ಮುಸ್ತಫಾ ಫೈಝಿ ಕಿನ್ಯ, ಖಾಸಿಂ ದಾರಿಮಿ, ಕೆ.ವಿ ಮಜೀದ್ ದಾರಿಮಿ ಗುರುಪುರ, ಸಿತಾರ್ ಮಜೀದ್ ಹಾಜಿ, ನಝೀರ್ ಉಳ್ಳಾಲ,  ಖಾದರ್ ಮಾಸ್ಟರ್ ಬಂಟ್ವಾಳ, ಹಾಜಿ ಶಾಹುಲ್ ಹಮೀದ್ ಮೆಟ್ರೋ, ಅಬೂ ಸಾಲಿಹ್ ಹಾಜಿ ಕಿನ್ಯ, ಹಾಜಿ ಶರೀಫ್ ಮೂಸಾ ಕುದ್ದುಪದವು,  ಅಕ್ಕರಂಗಡಿ ಮಸೀದಿಯ ಅಧ್ಯಕ್ಷರಾದ ಅಬ್ದುಲ್ ಹಮೀದ್ ಬಾವುಂಞಿ, ಕಾರ್ಯದರ್ಶಿ ಪಿ.ಜೆ ಅಬ್ದುಲ್ ರಹ್ಮಾನ್, ಅಬ್ದುಲ್ ಹಕೀಂ ಪರ್ತಿಪ್ಪಾಡಿ, ಅಶ್ರಫ್ ಹಾಜಿ ಪೆದಮಲೆ, ಅಬ್ದುಲ್ ಶುಕೂರು ಹಾಜಿ ರೆಂಜಲಾಡಿ, ಹಾಜಿ ನೌಷಾದ್ ಸೂರಲ್ಪಾಡಿ, ನಝೀರ್ ಬೆಳ್ತಂಗಡಿ ರಶೀದ್ ಹಾಜಿ ಪರ್ಲಡ್ಕ. ಮೊದಲಾದ  ಹಲವಾರು ಉಲಮಾ ಉಮರಾಗಳು ಭಾಗವಹಿಸಿದ್ದರು.       ಶುಕೂರು ದಾರಿಮಿ ನೆಹರು ನಗರರವರು ಕಾರ್ಯಕ್ರಮ  ನಿರ್ವಹಿಸಿದರು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.