ತಿಂಗಳಾಡಿ ಸರಕಾರಿ ಆಸ್ಪತ್ರೆಯ ಬೇಡಿಕೆಗಳನ್ನು ಶೀಘ್ರದಲ್ಲಿ ಈಡೇರಿಸುವ ಭರವಸೆ, ಚರಂಡಿ ವ್ಯವಸ್ಥೆಗೆ ಗುದ್ದಲಿ ಪೂಜೆ ನೆರವೇರಿಸಿದ ಜಿ.ಪಂ ಸದಸ್ಯೆ ಅನಿತಾ

Puttur_Advt_NewsUnder_1
Puttur_Advt_NewsUnder_1

 

thingaladyಪುತ್ತೂರು: ಗ್ರಾಮದ ಒಂದು ಉತ್ತಮ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವಾಗಿರುವ ತಿಂಗಳಾಡಿ ಸರಕಾರಿ ಪ್ರಾಥಮಿಕ ಆಸ್ಪತ್ರೆಯ ಬೇಡಿಕೆಗಳನ್ನು ಹಂತಹಂತವಾಗಿ ಈಡೇರಿಸಲಾಗುವುದು ಎಂದು ಜಿ.ಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಹೇಳಿದರು. ಅವರು ದ.20 ರಂದು ಆಸ್ಪತ್ರೆಯ ಸುತ್ತ ಚರಂಡಿ ವ್ಯವಸ್ಥೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಈಗಾಗಲೇ ಚರಂಡಿ ವ್ಯವಸ್ಥೆಗೆ ಜಿಲ್ಲಾ ಪಂಚಾಯತ್‌ಅನುದಾನ ರೂ.1.50 ಲಕ್ಷ ಇಡಲಾಗಿದೆ. ಮುಂದಿನ ಹಂತದಲ್ಲಿ ಆಸ್ಪತ್ರೆಯ ಸುತ್ತಲಿನ ಧರೆಯನ್ನು ತೆಗೆಯುವ ಬಗ್ಗೆ ಮತ್ತು ಮೀಟಿಂಗ್ ಹಾಲ್ ನಿರ್ಮಾಣದ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ಈ ಸಂದರ್ಭದಲ್ಲಿ ಅವರು ಹೇಳಿದರು. ಕೆದಂಬಾಡಿ ಗ್ರಾ.ಪಂ ಸದಸ್ಯ ಬೊಳೋಡಿ ಚಂದ್ರಹಾಸ ರೈಯವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯೆ ಡಾ. ಪಲ್ಲವಿ, ಹಿರಿಯ ಆರೋಗ್ಯ ಸಹಾಯಕಿ ಲೂಸಾನ ಬಿ.ಜೆ, ಸಹಾಯಕಿಯರಾದ ಸವಿತಾ ಕೆ, ಬೇಬಿ ಕೆ,ಸಿ, ಕನಕಾಂಗಿ, ಮಮತಾ, ದಮಯಂತಿ, ಗೀತಾ ಮತ್ತು ಸಿಬ್ಬಂದಿ ವರ್ಗದವರು, ಆಶಾ ಕಾರ‍್ಯಕರ್ತೆಯರು, ಕೆದಂಬಾಡಿ ಗ್ರಾಮ ಕಾಂಗ್ರೆಸ್‌ನ ಅಧ್ಯಕ್ಷ ಮನೋಹರ ರೈ ಎಂಡೆಸಾಗು, ಹಿರಿಯ ಕಾಂಗ್ರೆಸ್ಸಿಗ ಜಿನ್ನಪ್ಪ ಪೂಜಾರಿ ಪಿದಪಟ್ಲ, ಯೂಸುಫ್ ಹಾಜಿ ಕಣ್ಣೂರು, ಅಬ್ದುಲ್ಲಾ ಹಾಜಿ ಗಟ್ಟಮನೆ, ಕಮಲಾಕ್ಷ ಪುತ್ತೂರು ಮತ್ತಿತರರು ಉಪಸ್ಥಿತರಿದ್ದರು.

ಮೀಟಿಂಗ್ ಹಾಲ್ ಇಲ್ಲ

ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 36 ಆಶಾ ಕಾರ‍್ಯಕರ್ತೆಯರು, 42 ಅಂಗನವಾಡಿ ಕಾರ‍್ಯಕರ್ತೆಯರು ಒಳಪಡುತ್ತಾರೆ. ಆದ್ದರಿಂದ ಮೀಟಿಂಗ್ ಮಾಡಲು ಸಮಸ್ಯೆಯಾಗುತ್ತಿದೆ. ಪ್ರಸ್ತುತ ಇಂಜೆಕ್ಷನ್ ರೂಮ್‌ನಲ್ಲಿ ನಾವುಗಳು ಮೀಟಿಂಗ್ ಮಾಡುತ್ತಿದ್ದೇವೆ. ಆದ್ದರಿಂದ ಕೂಡಲೇ ನಮಗೆ ಮೀಟಿಂಗ್ ಹಾಲ್ ನಿರ್ಮಾಣ ಮಾಡಿಕೊಡಬೇಕು ಎಂದು ಆಸ್ಪತ್ರೆಯ ಸಿಬ್ಬಂದಿಗಳು ಜಿ.ಪಂ ಸದಸ್ಯರಲ್ಲಿ ಮನವಿ ಮಾಡಿಕೊಂಡರು. ಆಸ್ಪತ್ರೆಯ ಹಿಂಬದಿಯ ಧರೆಯು ಕುಸಿಯುತ್ತಿದ್ದು ಅಪಾಯದಲ್ಲಿದೆ ಆದ್ದರಿಂದ ಧರೆಯನ್ನು ಕೂಡ ತೆರವು ಮಾಡಿಕೊಡುವಂತೆ ಕೇಳಿಕೊಂಡರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.