ಬೊಳುವಾರು ಕ್ಷೇತ್ರದಲ್ಲಿ ಅಭಿನಂದನಾ ಸಭೆ

Puttur_Advt_NewsUnder_1
Puttur_Advt_NewsUnder_1

bolwar-kshethraಬೊಳುವಾರು ಶ್ರೀ ದುರ್ಗಾ ಪರಮೇಶ್ವರಿ (ಉಳ್ಳಾಳ್ತಿ) ಮಲರಾಯ ಸಪರಿವಾರ ಕ್ಷೇತ್ರದ ಆಶ್ರಯದಲ್ಲಿ ಶ್ರೀ ದುರ್ಗಾಪರಮೇಶ್ವರಿ (ಉಳ್ಳಾಳ್ತಿ) ಮಾತೃ ಮಂಡಳಿ ವತಿಯಿಂದ ಹೊರಾಂಗಣ ಸುತ್ತುಪೌಳಿ ಇಂಟರ್‌ಲಾಕ್ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದ್ದು ಇದರ ಅಭಿನಂದನಾ ಸಮಾರಂಭವು ಡಿ.18 ರಂದು ಸಂಜೆ ಕ್ಷೇತ್ರದಲ್ಲಿ ನಡೆಯಿತು.

ಕ್ಷೇತ್ರದ ಅರ್ಚಕ ಬಾಲಕೃಷ್ಣ ರಾವ್‌ರವರ ಪ್ರಾರ್ಥನೆಯೊಂದಿಗೆ, ಮುಖ್ಯ ಅತಿಥಿಯಾಗಿ ಆಗಮಿಸಿದ ಉಪನ್ಯಾಸಕಿ ಶ್ರೀಮತಿ ಹರಿಣಾಕ್ಷಿ ಕೇವಳರವರು ದೀಪ ಪ್ರಜ್ವಲನ ಮಾಡಿ, ಅಭಿನಂದನಾ ಮಾತುಗಳನ್ನಾಡಿದರು. ವೆ.ಮೂ. ಶ್ರೀಧರ ಭಟ್ ಕಬಕ ಮಾತೃಮಂಡಳಿಯವರ ಶುಭಹಾರೈಸಿದರು. ವೇದಿಕೆಯಲ್ಲಿ ವಿಶ್ವಸ್ಥ ಮಂಡಳಿ ಅಧ್ಯಕ್ಷ ಯೋಗೀಶ್ ಕಾಮತ್, ಪ್ರಧಾನ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಭಟ್, ನಗರಸಭಾ ಸದಸ್ಯ ಸುಜೀಂದ್ರ ಪ್ರಭು, ಟ್ರಸ್ಟಿ ಶೋಭಾ ಭಾಸ್ಕರ್ ಹೆಗ್ಡೆ ಉಪಸ್ಥಿತರಿದ್ದರು.

ಮಾತೃಮಂಡಳಿ ಅಧ್ಯಕ್ಷೆ ವಿಜಯ ಭಂಡಾರಿ ಪ್ರಾಸ್ತಾವಿಕ ಮಾತುಗಳನ್ನಾಡಿ ದೇಣಿಗೆಯಲ್ಲಿ ಸಹಕರಿಸಿದ ಎಲ್ಲಾ ದಾನಿಗಳನ್ನು ಸಭೆಯಲ್ಲಿ ಅಭಿನಂದಿಸಿದರು. ಕ್ಷೇತ್ರದ ಹೊರಾಂಗಣ ಸುತ್ತುಪೌಳಿ ಇಂಟರ್‌ಲಾಕ್ ಅಳವಡಿಕೆಗೆ ರೂ.2,53,067 ವೆಚ್ಚ ತಗಲಿದ್ದು, ವರಮಹಾಲಕ್ಷ್ಮಿ ಪೂಜಾ ಕಾರ್ಯದಲ್ಲಿ ಉಳಿದ 92,060 ಹಣವನ್ನು ಸೇರಿದ 1,69,855 ಆಗಿದ್ದು, ಉಳಿದ 84000 ಹಣದ ಕೊರತೆಯನ್ನು ಸ್ಥಳೀಯ ಸುಮನ ಪುಟ್ಟನಾಯ್ಕ ಮನೆಯವರು ದೇಣಿಗೆಯಾಗಿ ನೀಡುವುದರ ಮೂಲಕ ಹೊರಾಂಗಣ ಇಂಟರ್‌ಲಾಕ್ ಕಾಮಗಾರಿಯನ್ನು ಮಾಡಿರುತ್ತಾರೆ. ಕಾಮಗಾರಿಗೆ ಸಹಕರಿಸಿದ ರಾಜು ಶೆಟ್ಟಿ, ಸುಂದರ್‌ನಾಯ್ಕ ಮನೆಯವರು, ಕೀರ್ತನಾ ರೆಸಿಡೆನ್ಸಿಯ ಪ್ರಸನ್ನ ಬಲ್ಲಾಳ್, ಅನಂತಕೃಷ್ಣರಾವ್, ಮಾ. ಅರುಣ್‌ರವರನ್ನು ಅಭಿನಂದಿಸಲಾಯಿತು.

ಯಶೋದಾ ಬಲ್ಲಾಳ್, ಜಲಜಾಕ್ಷಿ ಹೆಗ್ಡೆ, ಮುಕ್ತಾ ಕಾಮತ್, ವೀಣಾ ರಾವ್, ರಾಣಿಕೃಷ್ಣ ಸುರ್ವೆ, ಗೀತಾ ಚೆಟ್ಟಿಯಾರ್, ಸುಧಾ ರೈ, ರಾಜೇಶ್ವರಿ ಚೆಟ್ಟಿಯಾರ್ ಅತಿಥಿಗಳಿಗೆ ಹೂ ಕೊಟ್ಟು ಗೌರವಿಸಿದರು.

ಕು. ಶ್ರೀವಿಜ್ಞಾ, ಸನ್ನಿಧಿ ಶೆಟ್ಟಿ ಪ್ರಾರ್ಥಿಸಿದರು. ನಾಯವಾದಿ ಹರಿಣಾಕ್ಷಿ ಜಗದೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಮಾತೃ ಮಂಡಳಿ ಕೋಶಾಧಿಕಾರಿ ಪುಷ್ಪಲತಾ ಪೂಜಾರಿ ದೇಣಿಗೆ ನೀಡಿದವರ ಪಟ್ಟಿ ವಾಚಿಸಿದರು, ಕಾರ್ಯದರ್ಶಿ ಶಕುಂತಳಾ ಶೆಟ್ಟಿ ಧನ್ಯವಾದಗೈದರು. ವಿಶ್ವಸ್ಥ ಮಂಡಳಿ ಕೋಶಾಧಿಕಾರಿ ನಾಗರಾಜ್ ಹೆಗ್ಡೆ, ಕ್ಷೇತ್ರದ ಅರ್ಚಕ ಗೋವಿಂದ ಭಟ್, ಲಯನೆಸ್ ಉಪಾಧ್ಯಕ್ಷೆ ಶಾರದ ಅರಸ್, ಉಷಾ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.