ಕುರಿಯ ಹಿ.ಪ್ರಾ.ಶಾಲೆಯಲ್ಲಿ ಜಿಡೆಕಲ್ಲು ಸ.ಪ್ರ.ದರ್ಜೆ ಕಾಲೇಜಿನ ಎನ್.ಎಸ್.ಎಸ್.ಶಿಬಿರ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

umapr

ವಿದ್ಯಾಥಿಗಳು ಸಂಸ್ಕೃತಿ-ಸಂಸ್ಕಾರವನ್ನು ಉಳಿಸಬೇಕು-ಶಕುಂತಳಾ ಶೆಟ್ಟಿ

ಪುತ್ತೂರು: ವಿದ್ಯಾರ್ಥಿಗಳು ಕೇವಲ ಕಲಿಕೆಗೆ ಮಾತ್ರ ಸೀಮಿತರಾಗದೇ, ಸಮಾಜದ ಒಡನಾಟವನ್ನು ಬೆಳೆಸಿಕೊಳ್ಳಬೇಕು, ಸಂಸ್ಕೃತಿ-ಸಂಸ್ಕಾರವನ್ನು ಉಳಿಸಿಕೊಳ್ಳಲು ಎನ್.ಎಸ್.ಎಸ್.ಶಿಬಿರಗಳು ವರದಾನವಾಗಿದೆ ಎಂದು ರಾಜ್ಯ ಸಂಸದೀಯ ಕಾರ‍್ಯದರ್ಶಿ,ಶಾಸಕಿ ಶಕುಂತಳಾ ಟಿ.ಶೆಟ್ಟಿ ಹೇಳಿದರು.

ಅವರು. ದ.೨೨ ರಂದು ಕುರಿಯ ಪ್ರಾಥಮಿಕ ಶಾಲೆಯಲ್ಲಿ ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್.ಶಿಬಿರವನ್ನು ಉದ್ಘಾಟಿಸಿ, ಮಾತನಾಡಿ ವಿದ್ಯಾರ್ಥಿ ಸಮುದಾಯವು ಉತ್ತಮ ಕೆಲಸ, ಕಾರ‍್ಯಗಳ ಮೂಲಕ, ಊರವರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗುವ ಮೂಲಕ, ಈ ಶಿಬಿರ ಯಶಸ್ಸಿಯಾಗಿ ನಡೆಯಲಿ ಎಂದು ಹೇಳಿದರು

ತಾಲೂಕು ಪಂಚಾಯತ್ ಅಧ್ಯಕ್ಷೆ ಭವಾನಿ ಚಿದಾನಂದ್‌ರವರು ಮಾತನಾಡಿ ಶಿಬಿರಗಳಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸಹೋದರತೆ ಬೆಳೆಯಲು ಸಾಧ್ಯ ಎಂದರು. ತಾಲೂಕು ಪಂಚಾಯತ್ ಸದಸ್ಯ ಸಾಜ ರಾಧಾಕೃಷ್ಣ ಆಳ್ವರವರು ಮಾತನಾಡಿ ಶಿಬಿರದ ಮೂಲಕ ವಿದ್ಯಾರ್ಥಿಗಳ ಪ್ರತಿಭೆ ವಿಕಸನವಾಗುತ್ತದೆ ಎಂದರು.

ಆರ್ಯಪು ಗ್ರಾಮ ಪಂಚಾಯತ್ ಸದಸ್ಯ ರಮೇಶ್ ರೈ ಡಿಂಬ್ರಿರವರು ಮಾತನಾಡಿ ವಿದ್ಯಾಥಿಗಳು ಉತ್ತಮ ಪ್ರಜೆಗಳಾಗಲು ಶಿಬಿರವು ಸಹಕಾರಿಯಾಗಲಿದೆ ಎಂದರು.

ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈರವರು ಮಾತನಾಡಿ ಎನ್‌ಎಸ್‌ಎಸ್ ಶಿಬಿರ ಸಮಾಜಕ್ಕೆ ಮಾದರಿಯಾಗುವ ಮೂಲಕ ವಿದ್ಯಾರ್ಥಿಗಳ ಗೌರವ ಹೆಚ್ಚಾಗಲಿ ಎಂದರು.

ಪುತ್ತೂರು ತಾಲೂಕು ಪಂಚಾಯತ್ ಮಾಜಿ ಸದಸ್ಯ ಬೂಡಿಯಾರ್ ಪುರುಷೋತ್ತಮ ರೈರವರು ಮಾತನಾಡಿ ೧೯೭೪ ರಲ್ಲಿ ಕುರಿಯದಲ್ಲಿ ಫಿಲೋಮಿನಾ ಕಾಲೇಜಿನ ಎನ್‌ಎಸ್‌ಎಸ್ ಶಿಬಿರ ಆಗುವ ಮೂಲಕ ಇಲ್ಲಿ ಆಟದ ಮೈದಾನ ನಿರ್ಮಾಣವಾಗಿದೆ ಎಂದು ಉಲ್ಲೇಖಿಸಿದರು.

ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯರುಗಳಾದ ಸುಧಾಮಣಿ ಜಿ.ರೈ ಬೂಡಿಯಾರ್, ಕುಸುಮ ಸುಂದರ ಮಾಪಾಲ, ಕುರಿಯ ಶಾಲಾ ಮುಖ್ಯ ಶಿಕ್ಷಕಿ ಲೀಲಾವತಿ ರವರುಗಳು ಸಂಧಬೋಚಿತವಾಗಿ ಮಾತನಾಡಿದರು.

ವೇದಿಕೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಶಿವರಾಮ ಶಿಬರಾಡಿ, ಉಪಾಧ್ಯಕ್ಷೆ ಜುಬೈದಾ,  ಆರ್ಯಪು ಗ್ರಾಮ ಪಂಚಾಯತ್ ಸದಸ್ಯೆ ಜಯಂತಿ ಬಳ್ಳಮಜಲು, ಎನ್‌ಎಸ್‌ಎಸ್ ಶಿಬಿರಾಧಿಕಾರಿ ಪ್ರೋ ಅಂಬ್ರೋಸ್ ಎಂ.ಸಿ ಉಪಸ್ಥಿತರಿದ್ದರು.

ಘಟಕದ ನಾಯಕರಾದ ಸನತ್‌ಕುಮಾರ್, ಕುಮುದ, ಕುರಿಯ ಶಾಲಾ ಶಿಕ್ಷಕರುಗಳು ಕಾರ‍್ಯಕ್ರಮದಲ್ಲಿ ಸಹಕರಿಸಿದರು.

ಆರ್ಯಾಪು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಕೆ.ಎಸ್.ಜಯಪ್ರಕಾಶ್ ರೈ ಬಳ್ಳಮಜಲು, ಪುತ್ತೂರು ಯುವವಾಹಿನಿ ಅಧ್ಯಕ್ಷ ಶಶಿಧರ್ ಕಿನ್ನಿಮಜಲು, ಕುರಿಯ ಹಾ.ಉ.ಸಹಕಾರಿ ಸಂಘದ ಅಧ್ಯಕ್ಷ ವೆಂಕಟರಮಣ ನಕ್ಷತ್ತಿತ್ತಾಯ, ಸನತ್ ಕುಮಾರ್ ರೈ ಕುರಿಯ ಏಳ್ನಾಡುಗುತ್ತು ಸಹಿತ ನೂರಾರು ಮಂದಿ ಭಾಗವಹಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಡೆಕಲ್ಲು ಕಾಲೇಜಿನ ಪ್ರಾಂಶುಪಾಲೆ ನಳಿನಾಕ್ಷಿ ಎ.ಎಸ್‌ರವರು ಮಾತನಾಡಿ ವರ್ಷ ಇಡೀ ಕಲಿತ ಶಿಕ್ಷಣವನ್ನು ಕೇವಲ ಮೂರು ಗಂಟೆಯ ಪರೀಕ್ಷೆಯಲ್ಲಿ ಉತ್ತರಿಸುವ ಮೂಲಕ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಶ್ರಮ ಜೀವನದ ಬದುಕಿನ ಶಿಕ್ಷಣವನ್ನು ಕಲಿಸುವ ಎನ್.ಎಸ್.ಎಸ್.ಶಿಬಿರ ಹೊಸ ಪರಿಕಲ್ಪನೆಯಾಗಿದ್ದರೂ,ಅತ್ಯಂತ ಪರಿಣಾಮಕಾರಿಯಾಗಲಿದೆ  ಎಂದು ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.