ಸಂಪ್ಯ ಉದಯಗಿರಿಯಲ್ಲಿ ಶ್ರೀ ಭೂಮಿತೂಕದ ದೈವ ರಕ್ತೇಶ್ವರಿಗೆ ಧರ್ಮ ನಡಾವಳಿ

123

sampya

 

whatsapp-image-2016-12-23-at-2-28-29-pm_2

ಪುತ್ತೂರು: ತುಳುನಾಡ ಇತಿಹಾಸದಲ್ಲೇ ಶ್ರೀ ಬಾನು ಸೇನವರು ಮಾಡಿದ ಕಟ್ಟುಕಟ್ಟಳೆ ವಿಧಿಯ ನೇಮೋತ್ಸವದ ನಂತರ ಪ್ರಥಮ ಬಾರಿಗೆ ಶ್ರೀ ಭೂಮಿತೂಕದ ದೈವ ರಕ್ತೇಶ್ವರಿಗೆ ಧರ್ಮ ನಡಾವಳಿ ಕುಕ್ಕಾಡಿ ತಂತ್ರಿ ಶ್ರೀ ಪ್ರೀತಂ ಪುತ್ತೂರಾಯರವರ ನೇತೃತ್ವದಲ್ಲಿ ದ.23ರಂದು ರಾತ್ರಿ ಸಂಪ್ಯ ಉದಯಗಿರಿಯಲ್ಲಿ ನಡೆಯಿತು.

ಬೆಳಿಗ್ಗೆ ಗಣಪತಿಹವನ ತ್ರಿಕಾಲ ಪೂಜೆ, ಬಳಿಕ ಸಂಪ್ಯ ರಕ್ತೇಶ್ವರಿ ಕಲ್ಲುರ್ಟಿ ಗುಡಿಯಿಂದ ಶ್ರೀ ದೈವದ ಭಂಡಾರ ಮೆರವಣಿಗೆ ಮೂಲಕ ಮಂಟಪಕ್ಕೆ ಬರುವ ಕಾರ್ಯಕ್ರಮ ನಡೆಯಿತು. ಅನ್ನಪೂರ್ಣೇಶ್ವರಿ ದೇವರ ವಿಶೇಷ ಮಹಾಪೂಜೆ, ಚಂಡಿಕಾ ಹವನ, ತ್ರಿಕಾಲ ಪೂಜೆ, ಶ್ರೀ ರಕ್ತೇಶ್ವರಿ ದೈವದ ಮಹಾಪೂಜೆ ನಡೆಯಿತು. ಮಧ್ಯಾಹ್ನದ ಅನ್ನಸಂತರ್ಪಣೆಯು ರಾತ್ರಿಯ ತನಕ ನಿರಂತರ ನಡೆಯಿತು. ಸಂಜೆ ಸಭಾ ಕಾರ್ಯಕ್ರಮದ ಬಳಿಕ ರಾತ್ರಿ ರಕ್ತೇಶ್ವರಿ ದೈವದ ಧರ್ಮ ನಡಾವಳಿ ನಡೆಯಿತು.

16ರ ಮಹತ್ವ: ವೀಳ್ಯದೆಲೆಯ 16 ಬಾಗಿಲಿರುವ ಚಪ್ಪರ ಹಾಕಿಸಿ ಕಬ್ಬಿನ ಅಡ್ಡ ಸಿಕ್ಕಿಸಿ 16 ಬಾಗಿಲಿನಲ್ಲಿ 16 ಬಗೆಯ ವಸ್ತುಗಳನ್ನು ಇರಿಸಿ ಬೆಲ್ಲದ ಒಲೆಗೆ ಗಂಧದ ಕಟ್ಟಿಗೆ, 16 ಮುಡಿ ಅಕ್ಕಿಯ ಚರು, 16 ಗಂಟು ಬಿದಿರಿನ ಸಿರಿ ಮುಡಿ ಕಟ್ಟಿಸಿ ಶ್ರೀ ದೈವವನ್ನು ಒಲಿಸಲು ಮಾಡಿದ ಮಹಾಸೇವೆಯೇ ಧರ್ಮನೇಮ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.