ಶಾರದಾ ಭಜನಾ ಮಂದಿರ ಸಮಿತಿ, ಸಮೃದ್ಧಿ ಮ್ಯೂಸಿಕಲ್ಸ್‌ನಿಂದ ಚಿದಾನಂದ ಕಾಮತ್‌ರಿಗೆ ಗೌರವಾರ್ಪಣೆ

Puttur_Advt_NewsUnder_1
Puttur_Advt_NewsUnder_1

sharadaಪುತ್ತೂರು: ವೃತ್ತಿ ಜೀವನ ಹಾಗೂ ಪ್ರವೃತ್ತಿ ಬದುಕನ್ನು ಸಮಾನವಾಗಿ ತೂಗಿಸಿ ಕಾರ್ಮಿಕ ಇಲಾಖೆಯಿಂದ 33 ವರುಷ ಗಳ ಸೇವೆ ಪೂರೈಸಿ, ಪುತ್ತೂರು ಹಿರಿಯ ಕಾರ್ಮಿಕ ನಿರೀಕ್ಷಕರ ಕಛೇರಿಯಿಂದ ವಯೋ ನಿವೃತ್ತಿಗೊಂಡ ಸಾಂಸ್ಕೃತಿಕ ಸಂಘಟಕ ಚಿದಾನಂದ ಕಾಮತ್ ಕಾಸರಗೋಡುರವರನ್ನು ಶಾರದಾ ಭಜನಾ ಮಂದಿರ ಸಮಿತಿ ಮತ್ತು ಸಮೃದ್ಧಿ ಮ್ಯೂಸಿಕಲ್ಸ್ ದರ್ಬೆ ಸಂಯುಕ್ತಾಶ್ರಯದಲ್ಲಿ ಶಾರದಾ ಭಜನಾ ಮಂದಿರದಲ್ಲಿ ಇತ್ತೀಚೆಗೆ ಗೌರವಿಸಲಾಯಿತು.

ಶಾರದಾ ಭಜನಾ ಮಂದಿರದ ಉಪಾಧ್ಯಕ್ಷ ರಮೆಶ್‌ಬಾಬು ರವರು ವೈಯಕ್ತಿಕ ನೆಲೆಯಲ್ಲಿ ಚಿದಾನಂದ ಕಾಮತ್‌ರವರನ್ನು ಪ್ರತ್ಯೇಕವಾಗಿ ಸನ್ಮಾನಿಸಿ, ಅವರ ಸಾಂಸ್ಕೃತಿಕ ಸೇವೆಯ ಬಗ್ಗೆ ಕೊಂಡಾಡಿದರು. ಸನ್ಮಾನಿತರು ಕೃತಜ್ಞತೆ ಸಲ್ಲಿಸಿದರು. ಭಜನಾ ಮಂದಿರದ ಅಧ್ಯಕ್ಷ ಸಾಯಿರಾಂ ಪುತ್ತೂರು, ದರ್ಬೆ ಸಮೃದ್ಧಿ ಮ್ಯೂಸಿಕಲ್ಸ್‌ನ ನಿರ್ದೇಶಕ ಶಿವಾನಂದ ಶೆಣೈ, ಅರ್ಚಕ ಹರಿಪ್ರಸನ್ನ ಸರೋಳಿತ್ತಾಯ ಶುಭಕೋರಿದರು. ಈ ಸಂದರ್ಭದಲ್ಲಿ ಡಿಂಡಿಮ ಪರಿವಾರದ ಕೆಲವೊಂದು ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭಜನಾ ಮಂದಿರದ ಕಾರ್ಯದರ್ಶಿ ಜಯಂತ ಉರ್ಲಾಂಡಿ ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.