Breaking News

ಸವಣೂರು-ಪುಣ್ಚಪ್ಪಾಡಿ ಗೌಡ ಸಂಘದ ಗ್ರಾಮ ಸಮಿತಿ ರಚನೆ

Puttur_Advt_NewsUnder_1
Puttur_Advt_NewsUnder_1

savanooru-1ಕಾಣಿಯೂರು: ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಶ್ರೀ ಆದಿಚುಂಚನಗಿರಿ ಕ್ಷೇತ್ರದ 72ನೇ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಡಾ| ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ತಾಲೂಕಿನ ಗ್ರಾಮಗಳ ಭೇಟಿ ಕಾರ್ಯಕ್ರಮದ ಅಂಗವಾಗಿ ಡಿ 27 ರಂದು ಪುಣ್ಚತ್ತಾರು ಶ್ರೀ ಹರಿ ಸಭಾಭವನದಲ್ಲಿ ಆಶೀರ್ವಚನ ಸಮಾರಂಭ ನಡೆಯಲಿದ್ದು, ಆ ಪ್ರಯುಕ್ತ ಸವಣೂರು ಮತ್ತು ಪುಣ್ಚಪ್ಪಾಡಿ ಗ್ರಾಮಗಳ ಸಮಿತಿಯು ರಚನೆಗೊಂಡಿದ್ದು, ಸವಣೂರು ಗ್ರಾಮ ಸಮಿತಿ ಅಧ್ಯಕ್ಷರಾಗಿ ಬೆಳಿಯಪ್ಪ ಗೌಡ ಚೌಕಿಮಠ, ಕಾರ್ಯದರ್ಶಿಯಾಗಿ ಪ್ರಕಾಶ್ ಕುದ್ಮನಮಜಲುರವರನ್ನು ಆಯ್ಕೆಮಾಡಲಾಗಿದೆ. ಜತೆ ಕಾರ್ಯದರ್ಶಿಯಾಗಿ ತೀರ್ಥರಾಮ ಕೆಡೆಂಜಿ, ಕೋಶಾಧಿಕಾರಿಯಾಗಿ ವೆಂಕಪ್ಪ ಗೌಡ ಅಡೀಲು, ಉಪಾಧ್ಯಕ್ಷರುಗಳಾಗಿ ಧರ್ಣಪ್ಪ ಗೌಡ ಇಡ್ಯಾಡಿ, ಜತ್ತಪ್ಪ ಗೌಡ ಆರೆಲ್ತಡಿ, ರಾಘವ ಗೌಡ ಗುರುಂಪುತ್ತಾರ್ ಇವರನ್ನು ಆಯ್ಕೆಮಾಡಲಾಯಿತು. ಪುಣ್ಚಪ್ಪಾಡಿ ಗ್ರಾಮ ಸಮಿತಿಯ ಅಧ್ಯಕ್ಷರಾಗಿ ಕೊರಗಪ್ಪ ಗೌಡ ಮೇಗಿನ ಮನೆ, ಕಾರ್ಯದರ್ಶಿ ಕುಶಾಲಪ್ಪ ಗೌಡ ತುಂಬೆತ್ತಡ್ಕ, ಕೋಶಾಧಿಕಾರಿ ಹರೀಶ್ ಕಾರೆತ್ತೋಡಿ,  ಜೊತೆಕಾರ್ಯದರ್ಶಿ ಕರುಣಾಕರ ಗೌಡ ಸಾರಕರೆ, ಉಪಾಧ್ಯಕ್ಷರಾಗಿ ಕುಶಾಲಪ್ಪ ಗೌಡ ಕುಮಾರಮಂಗಲ, ವಸಂತ ಗೌಡ ಬೆದ್ರಂಪಾಡಿರವರನ್ನು ಆಯ್ಕೆ ಮಾಡಲಾಯಿತು. ಸಮಿತಿಗೆ ಗೌರವ ಸಲಹೆಗಾರರು ಮತ್ತು ಸದಸ್ಯರನ್ನು ಆಯ್ಕೆ ಮಾಡಲಾತು. ಈ ಸಂದರ್ಭದಲ್ಲಿ ಸಂಘದ ಸವಣೂರು ವಲಯ ಅಧ್ಯಕ್ಷರಾದ ಗೋಪಾಲಕೃಷ್ಣ ಪಟೇಲ್ ಚಾರ್ವಾಕ, ಕಾರ್ಯದರ್ಶಿ ಹರೀಶ್ ಪೈಕ, ವಲಯ ಉಸ್ತುವಾರಿ ಶಿವರಾಮ ಗೌಡ ಮೆದು, ಪುತ್ತೂರು ಯುವ ಒಕ್ಕಲಿಗ ಗೌಡ ಸಂಘದ ಗೌರವಾಧ್ಯಕ್ಷ ಪ್ರವೀಣ್ ಕುಂಟ್ಯಾನ, ಯುವ ಗೌಡ ಸಂಘದ ತಾಲೂಕು ಸಮಿತಿ ಸದಸ್ಯ ತಾರಾನಾಥ ಕಾಯರ್ಗರವರು  ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.